ಹಿರೇಕೆರೂರ(ಡಿ.25): ಗಂಡ -ಹೆಂಡತಿ ಜಗಳದಲ್ಲಿ ಗಂಡ ರೇಡಿಯಂ ಕಟ್‌ ಮಾಡುವ ಬ್ಲೇಡ್‌ನಿಂದ ಹೆಂಡತಿಯ ಕುತ್ತಿಗೆಯನ್ನೇ ಸೀಳಿದ ಘಟನೆ ತಾಲೂಕಿನ ಚಿಕ್ಕೆರೂರ ಗ್ರಾಮದಲ್ಲಿ ನಡೆದಿದೆ.

ಚಿಕ್ಕೆರೂರಿನ ದೇವರಾಜ ಶಿವಪ್ಪ ದೊಡ್ಡಮನಿ ಹೆಂಡತಿಯ ಕುತ್ತಿಗೆ ಸೀಳಿದ ಆರೋಪಿ. ಈತ 14 ವರ್ಷಗಳ ಹಿಂದೆ ದೀಪಾ ಎಂಬುವಳನ್ನು ಪ್ರೀತಿಸಿ ಮದುವೆಯಾಗಿದ್ದು ಇತ್ತೀಚಿನ ದಿನಗಳಲ್ಲಿ ಹೆಂಡತಿಯ ಮೇಲೆ ಅನೈತಿಕ ಸಂಬಂಧ ಕುರಿತು ಶಂಕಿಸಿ ಜಗಳವಾಡುತ್ತಿದ್ದ. ಈ ಜಗಳ ಬುಧವಾರ ತಾರಕಕ್ಕೇರಿದ್ದರಿಂದ ಗ್ರಾಮಸ್ಥರೆಲ್ಲ ಸೇರಿ ಪಂಚಾಯಿತಿ ಮಾಡಿ ರಾಜಿ ಮಾಡಿದ್ದಾರೆ.

ಸಾಲ ಕಟ್ಟದಿದ್ದರೆ ಮೊಬೈಲ್‌ನಲ್ಲಿ ಯುವತಿಯರ ಮಾನ ಹರಾಜು..!

ಆದರೆ, ರಾಜಿಯಾದ ನಂತರ ಕೆಲವೇ ನಿಮಿಷದಲ್ಲಿ ಎಲ್ಲರೆದುರಿಗೆ ದೇವರಾಜ ತನ್ನ ಹೆಂಡತಿಯ ಕತ್ತನ್ನು ರೇಡಿಯಂ ಕಟ್‌ ಮಾಡುವ ಬ್ಲೇಡ್‌ನಿಂದ ಸೀಳಿದ್ದು ತೀವ್ರವಾಗಿ ಗಾಯಗೊಂಡಿರುವ ದೀಪಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಕುರಿತು ಹಂಸಭಾವಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪಿಎಸ್‌ಐ ಜಯಪ್ಪ ನಾಯಕ ತಿಳಿಸಿದ್ದಾರೆ.