Asianet Suvarna News Asianet Suvarna News

ಪತ್ನಿಯ ಗುಪ್ತಾಂಗಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದ ಪತಿಯ ಬಂಧನ

ವರದಕ್ಷಿಣೆ ಕಿರುಕುಳ| ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆ| ದಂಪತಿ ನಡುವೆ ವರದಕ್ಷಿಣೆ ವಿಚಾರಕ್ಕೆ ಜಗಳ| ಆರೋಪಿಗಳನ್ನು ಬಂಧಿಸಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಪೊಲೀಸರು| 

Husband Arrest for Dowry Harassment to Wife in Bengaluru grg
Author
Bengaluru, First Published Oct 11, 2020, 7:47 AM IST
  • Facebook
  • Twitter
  • Whatsapp

ಬೆಂಗಳೂರು(ಅ.11): ವರದಕ್ಷಿಣೆಗಾಗಿ ಕಿರುಕುಳ ನೀಡಿ ಪತ್ನಿಯ ಗುಪ್ತಾಂಗಕ್ಕೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದ ಪತಿ ಸೇರಿದಂತೆ ನಾಲ್ವರನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.

ಟಿ.ಸಿ.ಪಾಳ್ಯದ ನಿವಾಸಿ, ಸಂತ್ರಸ್ತೆಯ ಪತಿ ಸೂರಜ್‌ ಸಿಂಗ್‌ ಮತ್ತು ಆರೋಪಿಗೆ ಪ್ರಚೋದಿಸಿದ ಆತನ ತಂದೆ ಲೌನೇಶ್‌, ತಾಯಿ ಮತ್ತು ಮತ್ತೊಬ್ಬ ಮಹಿಳೆಯನ್ನು ಬಂಧಿಸಲಾಗಿದೆ. 

ಕಾಣೆಯಾಗಿದ್ದ ಯುವತಿ ದೊಡ್ಡಪ್ಪನ ಜಮೀನಿನಲ್ಲಿ ಶವವಾಗಿ ಪತ್ತೆ

ಸಂತ್ರಸ್ತೆಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಯುವತಿಯನ್ನು ಆರೋಪಿ ಸೂರಜ್‌ ಸಿಂಗ್‌ ವಿವಾಹವಾಗಿದ್ದ. ಬೀಡಾ ಅಂಗಡಿಯನ್ನಿಟ್ಟುಕೊಂಡಿದ್ದ ಆತ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ. 15 ಲಕ್ಷ ರು. ವೆಚ್ಚ ಮಾಡಿ ಮದುವೆ ಮಾಡಿದರೂ ಮತ್ತಷ್ಟು ಹಣ ತರುವಂತೆ ಒತ್ತಾಯಿಸುತ್ತಿದ್ದ. ಒಂದೆರಡು ಬಾರಿ ಹಣ ತಂದುಕೊಟ್ಟಿದ್ದಳು. ಅಷ್ಟಕ್ಕೆ ಸುಮ್ಮನಾಗದೆ ಮತ್ತೆ ಹಣಕ್ಕಾಗಿ ಪೀಡಿಸುತ್ತಿದ್ದು, ದಂಪತಿ ನಡುವೆ ಇದೇ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಆರೋಪಿಗಳನ್ನು ಬಂಧಿಸಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
 

Follow Us:
Download App:
  • android
  • ios