Asianet Suvarna News Asianet Suvarna News

ಕಾಣೆಯಾಗಿದ್ದ ಯುವತಿ ದೊಡ್ಡಪ್ಪನ ಜಮೀನಿನಲ್ಲಿ ಶವವಾಗಿ ಪತ್ತೆ

ಅಕ್ಟೋಬರ್ 9 ರಂದು ಕಾಣೆಯಾಗಿದ್ದ ಯುವತಿ  ಶವವಾಗಿ ಪತ್ತೆಯಾಗಿದ್ದಾಳೆ. ಯುವತಿಯ ದೊಡ್ಡಪ್ಪ ರವೀಂದ್ರಕುಮಾರ್ ಜಮೀನಿನಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ.

19 Year Old girl Dead body found-in-ramanagara Who missing on oct 8th rbj
Author
Bengaluru, First Published Oct 10, 2020, 7:50 PM IST
  • Facebook
  • Twitter
  • Whatsapp

ರಾಮನಗರ, (ಅ.10): ಜಿಲ್ಲೆಯ ಮಾಗಡಿ ತಾಲೂಕಿನ ಬೆಟ್ಟಹಳ್ಳಿಯಿಂದ ನಾಪತ್ತೆಯಾಗಿದ್ದ ಯುವತಿಯೊಬ್ಬಳು ಶವವಾಗಿ ಪತ್ತೆಯಾಗಿದ್ದಾಳೆ. 

ಅಕ್ಟೋಬರ್​ 8 ರಂದು ಮನೆಯಿಂದ ಕಾಣೆಯಾಗಿದ್ದ 19 ವರ್ಷದ ಯುವತಿ ಹೇಮಲತಾಳ ಮೃತದೇಹ ಇಂದು (ಶನಿವಾರ) ಪತ್ತೆಯಾಗಿದೆ.

5 ವರ್ಷ ನಂತ್ರ ಪೋಷಕರ ಸೇರಿದ ಮಗು, RCBಗೆ ಸಿತ್ತಾ ಗೆಲುವಿನ ನಗು? ಅ.10ರ ಟಾಪ್ 10 ಸುದ್ದಿ!

 ಯುವತಿ ಕಾಣೆಯಾದ ಬೆನ್ನಲ್ಲೇ ಅಕ್ಟೋಬರ್ 9 ರಂದು ಕುದೂರು ಠಾಣೆಯಲ್ಲಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಲಾಗಿತ್ತು. ಇದೀಗ ಹೇಮಲತಾಳ ಮೃತದೇಹ ಆಕೆಯ ಮನೆಯ ಸಮೀಪವೇ ಇದ್ದ ಜಮೀನಿನಲ್ಲಿ ಪತ್ತೆಯಾಗಿದೆ. 

ಯುವತಿಯ ದೊಡ್ಡಪ್ಪ ರವೀಂದ್ರಕುಮಾರ್ ಜಮೀನಿನಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ಯುವತಿಯ ಬಟ್ಟೆಗಳನ್ನ ಬೇರೆಡೆ ಎಸೆದ ನಂತರ ದುಷ್ಕರ್ಮಿಗಳು ಆಕೆಯನ್ನು ಕೊಲೆ ಮಾಡಿ ಮಣ್ಣಿನಲ್ಲಿ ‌ಹೂತು ಹಾಕಿದ್ದಾರೆ ಎಂದು ಹೇಳಲಾಗಿದೆ. 

ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದು, ಸದ್ಯ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Follow Us:
Download App:
  • android
  • ios