Asianet Suvarna News Asianet Suvarna News

ತಾನು ತಾಯಿ ಆಗಲು 4 ವರ್ಷದ ಮಲಮಗನ ಬಲಿಕೊಟ್ಟ ಕ್ರೂರಿ ಮಹಿಳೆ

ಉತ್ತರಪ್ರದೇಶದ ಅಮೇಥಿಯಲ್ಲಿ ಮಾನವ ಸಮಾಜ ತಲೆತಗ್ಗಿಸುವ ಘಟನೆಯೊಂದು ನಡೆದಿದೆ. ಮಂತ್ರವಾದಿಯೋರ್ವನ ಮಾತು ಕೇಳಿ ಮಹಿಳೆಯೊಬ್ಬಳು ತನ್ನ 4 ವರ್ಷದ ಮಲಮಗನ ಬಲಿ ಕೊಟ್ಟಿದ್ದಾಳೆ.

Human Sacrifice found in Amethi A stepmother who sacrificed her 4 year old stepson after advice of Tantrik to she become a mother akb
Author
First Published Jun 15, 2023, 7:37 PM IST | Last Updated Jun 15, 2023, 7:39 PM IST

ಅಮೇಥಿ: ಉತ್ತರಪ್ರದೇಶದ ಅಮೇಥಿಯಲ್ಲಿ ಮಾನವ ಸಮಾಜ ತಲೆತಗ್ಗಿಸುವ ಘಟನೆಯೊಂದು ನಡೆದಿದೆ. ಮಂತ್ರವಾದಿಯೋರ್ವನ ಮಾತು ಕೇಳಿ ಮಹಿಳೆಯೊಬ್ಬಳು ತನ್ನ 4 ವರ್ಷದ ಮಲಮಗನ ಬಲಿ ಕೊಟ್ಟಿದ್ದಾಳೆ. ಮಗುವನ್ನು ಬಲಿ ಕೊಟ್ಟರೆ ನೀನು ತಾಯಿಯಾಗುತ್ತಿಯಾ ಎಂದು ಮಂತ್ರವಾದಿ ಮಹಿಳೆಗೆ ಸಲಹೆ ನೀಡಿದ್ದಾನೆ. ಆತನ ಮಾತು ಕೇಳಿದ ಮಹಿಳೆ ತಾನು ತಾಯಿಯಾಗುವ ದುರಾಸೆಗೆ ಬಲಿ ಬಿದ್ದು, ಏನು ಅರಿಯದ ಪುಟ್ಟ ಕಂದನನ್ನು ಬಲಿ ನೀಡಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಂತ್ರವಾದಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. 

ಎರಡು ದಿನದ ಹಿಂದೆ ನರಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಮಂತ್ರವಾದಿ, ಮಲತಾಯಿ ಹಾಗೂ ಆಕೆಯ ಪೋಷಕರನ್ನು ಬಂಧಿಸಿದ್ದಾರೆ. ಜೊತೆಗೆ ಘಟನಾ ಸ್ಥಳದಿಂದ ಗಾಂಜಾ, ನಿಂಬೆಹುಳಿ, ಟವೆಲ್, ಬೈಕ್, ಜಾಯಿಕಾಯಿಯನ್ನು ವಶಕ್ಕೆ ಪಡೆಯಲಾಗಿದೆ. ಅಮೇಥಿ ಜಿಲ್ಲೆಯ ಜಮೋ ಪೊಲೀಸ್ ಠಾಣಾ ವ್ಯಾಪ್ತಿಯ ಉಮರ್ದಿಹ್ ರೆಸಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಿತೇಂದ್ರ ಪ್ರಜಾಪತಿ ಎಂಬುವವರ 4 ವರ್ಷದ ಕಂದ ಸತ್ಯೇಂದ್ರ ಪ್ರಜಾಪತಿಯ ಅರ್ಧ ಸುಟ್ಟ ದೇಹ ಎರಡು ದಿನದ ಹಿಂದೆ ಮನೆಯಿಂದ ಸ್ವಲ್ಪ ದೂರದಲ್ಲಿ ಕಾಣಿಸಿಕೊಂಡಿತ್ತು. ಈ ವಿಚಾರ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ತನಿಖೆ ಶುರು ಮಾಡಿದ್ದಾರೆ. 

10 ವರ್ಷದ ಬಾಲಕನ ನರಬಲಿ : ಚಿಕ್ಕಪ್ಪ ಸೇರಿ ಮೂವರ ಬಂಧನ

ಈ ವೇಳೆ ಗ್ರಾಮದಲ್ಲಿ ಮಂತ್ರತಂತ್ರಕ್ಕಾಗಿ ಅಮಾಯಕ ಬಾಲಕನನ್ನು ಹತ್ಯೆ ಮಾಡಲಾಗಿದೆ ಎಂಬ ಸುದ್ದಿಯೊಂದು ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಮಾಹಿತಿದಾರರೊಬ್ಬರು ನೀಡಿದ ಮಾಹಿತಿ ಮೇರೆಗೆ ಗ್ರಾಮದವರ ವಿಚಾರಣೆ ನಡೆಸಿದ ಪೊಲೀಸರು, ಆರೋಪಿಗಳಾದ ಮಂಗ್ರೂ ಪ್ರಜಾಪತಿ (Mangroo Prajapati), ಪ್ರೇಮಾ ಪ್ರಜಾಪತಿ, ದಯಾರಾಮ್ ಯಾದವ್ ಹಾಗೂ ರೇಣು ಪ್ರಜಾಪತಿ (Renu Prajapati) ಎಂಬುವವರನ್ನು ಬಂಧಿಸಿದ್ದಾರೆ. 

ಮಾನವ ಬಲಿ ನೀಡುವಂತೆ ಸಲಹೆ ನೀಡಿದ ಮಾಂತ್ರಿಕ

ಮೃತ ಬಾಲಕ ಸತ್ಯೇಂದ್ರನ ತಾಯಿ ಮೂರು ವರ್ಷಗಳ ಹಿಂದೆ ಗಂಡನನ್ನು ಬಿಟ್ಟು ಬೇರೊಬ್ಬರೊಂದಿಗೆ ಓಡಿ ಹೋಗಿದ್ದಳು. ಇದಾದ ನಂತರ ಮಗುವಿನ ತಂದೆ ಜಿತೇಂದ್ರ, ಮುಸಾಫಿರ್‌ಖಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಮಂಗ್ರೂ ಪ್ರಜಾಪತಿ ಎಂಬಾತನ ಪುತ್ರಿ ರೇಣು ಪ್ರಜಾಪತಿಯನ್ನು 2ನೇ ವಿವಾಹವಾಗಿದ್ದ,  ರೇಣುವಿಗೂ ಇದು 2ನೇ ವಿವಾಹವಾಗಿತ್ತು. ಮದುವೆಯ ನಂತರ ರೇಣು ಮತ್ತೆ ಮತ್ತೆ ಅನಾರೋಗ್ಯಕ್ಕೀಡಾಗಿದ್ದಳು. ಅದರ ಜೊತೆಗೆ ಮಗು ಹೆತ್ತಿಲ್ಲ ಎಂಬ ಕೊರಗು ಆಕೆಯನ್ನು ಕಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ರೇಣುವಿನ ತಂದೆ ಮಂತ್ರವಾದಿ ದಯಾರಾಮ್ ಯಾದವ್ ಬಳಿಗೆ ಹೋಗಿ ಈ ವಿಚಾರ ತಿಳಿಸಿದ್ದ. ಈ ವೇಳೆ ಮಂತ್ರವಾದಿ ದಯಾರಾಮ್ ಮಗುವನ್ನು ಬಲಿ (sacrifice) ನೀಡದ ಹೊರತು ಆಕೆ ಮಗು ಹೇರುವುದು ಸಾಧ್ಯವಿಲ್ಲ, ಹಾಗೂ ಆಕೆ ಉತ್ತಮ ಆರೋಗ್ಯ ಹೊಂದುವುದು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಈತನ ಸಲಹೆ ಕೇಳಿ ಮನೆಗೆ ಬಂದ ರೇಣುವಿನ ತಂದೆ ರೇಣು ಹಾಗೂ ಪತ್ನಿಯೊಂದಿಗೆ ಚರ್ಚೆ ನಡೆಸಿ ಪುಟ್ಟ ಬಾಲಕನ ಹತ್ಯೆ ಸಂಚು ರೂಪಿಸಿ ಕೊಂದೇ ಬಿಟ್ಟಿದ್ದಾರೆ. 

Kerala ನರಬಲಿ ಪ್ರಕರಣ ಆರೋಪಿ ವಿಕೃತ ಕಾಮಿ; ಇನ್ನೂ 19 ಮಹಿಳೆಯರು ಮಿಸ್ಸಿಂಗ್‌

ಜೂನ್ 11 ರ ರಾತ್ರಿ ಮೆರವಣಿಗೆಯೊಂದು ಜಿತೇಂದ್ರ (Jitendra)ಮನೆ ಬಳಿ ಬಂದಿದೆ. ಈ ವೇಳೆ ಜಿತೇಂದ್ರ ಮೆರವಣಿಗೆ ನೋಡಲು ತೆರಳಿದ್ದು, ಇದೇ ಸಮಯವನ್ನು ಬಳಸಿಕೊಂಡು ಪತ್ನಿ ವೇಣು ಮಲ ಮಗ ಸತ್ಯೇಂದ್ರನನ್ನು (Satendra) ಕರೆದುಕೊಂಡು ಗ್ರಾಮದ ಹೊರಗಿನ ಆಲದ ಮರದ ಬಳಿ ಬಂದಿದ್ದಾಳೆ. ಅಲ್ಲಿ ಮಂತ್ರವಾದಿ ದಯಾರಾಮ್ (Tantrik Dayaram Yadav), ಮಲತಾಯಿ ರೇಣುವಿನ ತಂದೆ ತಾಯಿ ಎಲ್ಲರೂ ಮೊದಲೇ ಹಾಜರಿದ್ದು, ಬಾಲಕನನ್ನು ಜೀವಂತವಾಗಿ ಸುಡಲು ಆರಂಭಿಸಿದ್ದಾರೆ. ಈ ವೇಳೆ ಬಾಲಕ ನೋವಿನಿಂದ ಕೂಗಿಕೊಂಡಿದ್ದು, ಆಗ ಮಲತಾಯಿ ರೇಣು ಮಗುವಿನ ಕತ್ತು ಹಿಸುಕಿ ಹತ್ಯೆ ಮಾಡಿದ್ದಾಳೆ. ಕೊಲೆಯ ನಂತರ ಎಲ್ಲರೂ ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ.  ಇತ್ತ ಮೆರವಣಿಗೆ ನೋಡಲು ಹೋಗಿದ್ದ ಜಿತೇಂದ್ರ ತಡವಾಗಿ ಮನೆಗೆ ಬಂದಿದ್ದು, ಮುಂಜಾನೆ ಮಗು ಕಾಣದೇ ಇರುವುದು ಆತನ ಗಮನಕ್ಕೆ ಬಂದಿದೆ. ಹೀಗೆ ಮಗುವನ್ನು ಹುಡುಕಲು ಆರಂಭಿಸಿದಾಗ  ಗ್ರಾಮದ ಹೊರಗೆ ಮಗು ಸತ್ಯೇಂದ್ರನ ಶವ ಪತ್ತೆಯಾಗಿದೆ. 

Latest Videos
Follow Us:
Download App:
  • android
  • ios