Hubballi Accident: ಮತ್ತೊಂದು ಭೀಕರ ಅಪಘಾತ: XUV ಕಾರಲ್ಲಿದ್ದ ತಾಯಿ-ಮಗ ದಾರುಣ ಸಾವು


12 ಗಂಟೆಗಳ ಅವಧಿಯಲ್ಲಿ ಮತ್ತೊಂದು ಭೀಕರ ಅಪಘಾತ ಹುಬ್ಬಳ್ಳಿ ತಾಲೂಕಿನಲ್ಲಿ ಸಂಭವಿಸಿದೆ. ಸಾರಿಗೆ ಸಂಸ್ಥೆಯ ಐರಾವತ್ ಬಸ್ಸೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಇಂದು ಬೆಳಗಿನ ಜಾವ ಸಂಭವಿಸಿದೆ.

Hubballi road accident Airavat bus and xuv car accident 2 died on the spot gvd

ಹುಬ್ಬಳ್ಳಿ (ಏ.06): 12 ಗಂಟೆಗಳ ಅವಧಿಯಲ್ಲಿ ಮತ್ತೊಂದು ಭೀಕರ ಅಪಘಾತ (Accident) ಹುಬ್ಬಳ್ಳಿ ತಾಲೂಕಿನಲ್ಲಿ (Hubballi District) ಸಂಭವಿಸಿದೆ. ಸಾರಿಗೆ ಸಂಸ್ಥೆಯ ಐರಾವತ್ ಬಸ್ಸೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾದ (Death) ಘಟನೆ ಇಂದು ಬೆಳಗಿನ ಜಾವ ಸಂಭವಿಸಿದೆ. ಹೈದರಾಬಾದಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಐರಾವತ್ ಬಸ್ಸೊಂದು ಹಾಗೂ ಹುಬ್ಬಳ್ಳಿಯಿಂದ ಹಂಪಿ ಕಡೆಗೆ ತೆರಳುತ್ತಿದ್ದ ಎಕ್ಸ್‌ಯುವಿ ಕಾರಿನ ಮಧ್ಯೆ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಗುಜರಾತ್ ಮೂಲದ ತಾಯಿ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರಿಗೆ ತೀವ್ರ ಥರದ ಗಾಯಗಳಾಗಿವೆ.  ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಬಳಿ ಈ ಭೀಕರ ಅಪಘಾತ ಸಂಭವಿಸಿದೆ‌.

ಐರಾವತ್ ಬಸ್ಸಿನ ಚಾಲಕನ ನಿರ್ಲಕ್ಷ್ಯದಿಂದಲೇ ಈ ದುರ್ಘಟನೆ ನಡೆದಿದ್ದು, ಗಾಯಾಳುಗಳನ್ನ ಸ್ಥಳೀಯರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿ, ಜೀವ ಉಳಿಸಿದ್ದಾರೆ. ಶಿರಗುಪ್ಪಿ ಬಳಿಯ ರಸ್ತೆಯ ಮೊದಲ ತಿರುವಿನಲ್ಲಿಯೇ ರಾಂಗ್ ರೂಟಿಗೆ ಐರಾವತ್ ಬಸ್ಸು ಬಂದಿದ್ದರಿಂದ ಎದುರಿಗೆ ಬಂದಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬಸ್ಸಿನ ವೇಗ ಹೆಚ್ಚಾಗಿದ್ದರಿಂದ ವಾಹನವೂ ಅಪ್ಪಚ್ಚಿಯಾಗಿದ್ದು, ಸ್ಥಳದಲ್ಲಿಯೇ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ.  ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಕಲೆ ಹಾಕುತ್ತಿದ್ದಾರೆ.  ಇನ್ನು ಮಂಗಳವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಹಾಗೂ ಮತ್ತೋರ್ವ ನಾಗರಿಕರು ಮೃತಪಟ್ಟಿದ್ದರು.

Chitradurga: ಗ್ಯಾರೆಜಲ್ಲಿ ಆಕಸ್ಮಿಕ ಬೆಂಕಿ: ಸುಟ್ಟು ಕರಕಲಾದ ಲಾರಿಗಳು

ಕಲಘಟಗಿ ಬಳಿ ಭೀಕರ ಅಪಘಾತ: ಮಳೆ (Rain), ಬಿರುಗಾಳಿಯಿಂದ ರಸ್ತೆಯಲ್ಲಿ ಬಿದ್ದಿದ್ದ ಮರಗಳನ್ನು ತೆರವು ಮಾಡಿ ವಾಹನ ಸಂಚಾರ ಸುಗಮಗೊಳಿಸಲು ಹೋಗಿದ್ದ ಪೊಲೀಸ್‌ ಕಾನ್‌ಸ್ಟೇಬಲ್‌ (Police Constable) ಹಾಗೂ ಮತ್ತೊರ್ವ ವ್ಯಕ್ತಿ ವಾಹನ ಅಪಘಾತದಲ್ಲಿ ಮೃತರಾದ ದಾರುಣ ಘಟನೆ ಕಲಘಟಗಿ( Kalghatgi) ತಾಲೂಕಿನ ಚಳಮಟ್ಟಿ ಕ್ರಾಸ್‌ ಬಳಿ ಮಂಗಳವಾರ ತಡರಾತ್ರಿ ನಡೆದಿದ್ದು, ದುರ್ಘಟನೆಯಲ್ಲಿ ಮೃತಪಟ್ಟ (Death) ಪೊಲೀಸ್‌ಗೆ ಇದೇ ಏ.28 ರಂದು ಮದುವೆ ನಿಗದಿಯಾಗಿತ್ತು ಎಂದು ತಿಳಿದು ಬಂದಿದೆ.

ಈ ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಪೊಲೀಸ್‌ ಕಾನ್‌ಸ್ಪೇಬಲ್‌ ಕಲಘಟಗಿಯ ಸಂಗಮೇಶ್ವರ ಗ್ರಾಮದ ಪಂಡಿತ ಎ. ಕಾಸರ (28) ಹಾಗೂ ಗಂಗಿವಾಳ ಗ್ರಾಮದ ವ್ಯಕ್ತಿ ಸ್ಥಳದಲ್ಲೇ ಮೃತರಾಗಿದ್ದಾರೆ. ಗಾಯಗೊಂಡವರನ್ನು ಹುಬ್ಬಳ್ಳಿಯ (Hubballi) ಕಿಮ್ಸ್‌ (KIMS) ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಪಘಾತದ (Accident) ಬಳಿಕ ಲಾರಿ ಚಾಲಕ ನಿಲ್ಲದೆ ಪರಾರಿ ಆಗಿದ್ದಾನೆ. ಪಂಡಿತ ಕಾಸರ ಇದೇ 28ರಂದು ಹಸೆಮಣೆ ಏರಬೇಕಿತ್ತು. ಆದರೆ ದುರ್ಘಟನೆಯಲ್ಲಿ ಮೃತಪಟ್ಟಿದ್ದು, ಇಡೀ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಪೊಲೀಸರೂ (Police) ಸಹ ಘಟನೆಯಿಂದ ಆಘಾತಗೊಂಡಿದ್ದಾರೆ.

ಚಲಿಸುತ್ತಿದ್ದ ಆಟೋ ಮೇಲೆ ಮರ ಬಿದ್ದು ಮಹಿಳೆ ಸಾವು, 5 ಜನರಿಗೆ ಗಾಯ..!

ಮಂಗಳವಾರ ಸಂಜೆ ಮಳೆ, ಬಿರುಗಾಳಿಯಿಂದ ರಸ್ತೆಯಲ್ಲಿ ಬಿದ್ದಿದ್ದ ಮರಗಳನ್ನು ತೆರವು ಮಾಡಿ ಟ್ರಾಫಿಕ್‌ ಕ್ಲಿಯರ್‌ ಮಾಡಲು ಕಾರ್ಯಾಚರಣೆಗೆ 112 ವಾಹನದ ಜತೆಗೆ ಇವರು ಹೋಗಿದ್ದರು. ಈ ಸಮಯದಲ್ಲಿ ಕಲ್ಲು ಹಾಗೂ ಕಟ್ಟಿಗೆಯನ್ನು ರಸ್ತೆ ಮೇಲೆ ಇಡುವಾಗ ಅಪರಿಚಿತ ಲಾರಿ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ, ಕಲಘಟಗಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಕಿಮ್ಸ್‌ಗೆ ಆಗಮಿಸಿದ ಮಹಾನಗರ ಪೊಲೀಸ್‌ ಆಯುಕ್ತ ಲಾಬೂರಾಮ್‌ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಾಹಿತಿ ಪಡೆದಿದರು. ಪರಾರಿಯಾದ ಲಾರಿ ಚಾಲಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಬಗ್ಗೆ ಮಾತನಾಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೃಷ್ಣಕಾಂತ, ಕಲಘಟಗಿ ಪೊಲೀಸ್‌ ಠಾಣೆಯ ಕಾನ್‌ಸ್ಟೇಬಲ್‌ ಘಟನೆಯಲ್ಲಿ ಮೃತಪಟ್ಟಿದಾರೆ. ಮೂರ್ನಾಲ್ಕು ಜನರಿಗೆ ಗಾಯವಾಗಿದೆ, ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಾರಿಯಾದ ಲಾರಿಗಾಗಿ ಪತ್ತೆ ಕಾರ್ಯ ನಡೆಸಿದ್ದೇವೆ ಎಂದರು.

Latest Videos
Follow Us:
Download App:
  • android
  • ios