ಹುಬ್ಬಳ್ಳಿಯಲ್ಲಿ ಝರಾಕ್ಸ್ ಅಂಗಡಿ ಮಾಲೀಕನೊಬ್ಬ ಯುವತಿಯರ ಜೊತೆ ಕಾಮದಾಟವಾಡಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಹತ್ತಕ್ಕೂ ಹೆಚ್ಚು ಮಹಿಳೆಯರು ಮತ್ತು ಯುವತಿಯರೊಂದಿಗೆ ಈತ ದೈಹಿಕ ಸಂಪರ್ಕ ಇರಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹುಬ್ಬಳ್ಳಿ (ಜ.18): ಆತ ಅಂತಿಂಥ ಕಾಮಿಯಲ್ಲ. ಮಹಾನ್ ವಿಕೃತಕಾಮಿ. ಪ್ರೀತಿ ಹೆಸರಲ್ಲಿ ಆತ ಮಾಡ್ತಾ ಇದ್ದಿದ್ದೇ ಪೋಲಿಯಾಟ. ಪ್ರೀತಿ ಅಂದುಕೊಂಡು ಹೋದ ಹುಡುಗಿಯರನ್ನು ಮಂಚ ಏರುವಂತೆ ಮಾಡುತ್ತಿದ್ದ. ಅವರೊಂದಿಗೆ ಕಾಮದಾಟವಾಡಿ ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎನ್ನುವ ಶಾಂಕಿಗ್ ವಿಚಾರ ಬಹಿರಂಗವಾಗಿದೆ. ಇವನ ಪ್ರೀತಿಗೆ ಬಡ ಯುವತಿಯರೇ ಟಾರ್ಗೆಟ್ ಆಗಿದ್ದರು. ಈ ವಿಕೃತಕಾಮಿಯನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ. ವಿಚಾರಣೆ ನಡೆಸಿದ ಬಳಿಕ ಗೊತ್ತಾಗಿದ್ದೇನೆಂದರೆ, ಹತ್ತಕ್ಕೂ ಹೆಚ್ಚು ಮಹಿಳೆಯರು ಹಾಗೂ ಯುವತಿಯರೊಂದಿಗೆ ಈತ ದೈಹಿಕ ಸಂಪರ್ಕ ಇರಿಸಿಕೊಂಡಿದ್ದ. ಪ್ರೀತಿಸುವ ನೆಪ ಹೇಳಿ ಮಂಚಕ್ಕೆ ಕರೆದು ಅವರ ಪೋಟೋ ವಿಡಿಯೋಗಳನ್ನ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ. ಬಳಿಕ ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ.
ತಾನು ಹೇಳಿದಂತೆ ಕೇಳದಿದ್ದರೆ ವಿಡಿಯೋ ಬಿಡುಗಡೆ ಮಾಡುವುದಾಗಿ ಅವರಿಗೆ ಬೆದರಿಕೆ ಹಾಕುತ್ತಿದ್ದ. ಹಳೇ ಹುಬ್ಬಳ್ಳಿಯಲ್ಲಿ ಝರಾಕ್ಸ್ ಅಂಗಡಿ ನಡೆಸುತ್ತಿದ್ದ ವಿಕೃತ ಕಾಮಿಯನ್ನು 38 ವರ್ಷದ ಅಶ್ಪಾಕ್ ಜೋಗನ್‌ಕೊಪ್ಪ ಎಂದು ಗುರುತಿಸಲಾಗಿದೆ. ಹುಬ್ಬಳ್ಳಿಯ ಶರಾವತಿ ನಗರದ ಕೆಇಬಿ ಲೇಔಟ್ ನಿವಾಸಿಯಾಗಿದ್ದಾನೆ.
ಹುಬ್ಬಳ್ಳಿಯ ಟಿಪ್ಪು ನಗರದಲ್ಲಿ ಝರಾಕ್ಸ್ ಮತ್ತು ಮೊಬೈಲ್ ರೀಚಾರ್ಜ್ ಸ್ಟೋರ್ ನಡೆಸಿಕೊಂಡು ಹೋಗುತ್ತಿದ್ದ. ಇದೇ ಅಂಗಡಿಗೆ ಬರುವ ಹೆಣ್ಣು ಮಕ್ಕಳನ್ನ ತನ್ನ ಕಾಮದಾಟಕ್ಕೆ ಬಳಸಿಕೊಳ್ಳುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಯುವತಿಯರ ಜೊತೆಗಿದ್ದಾಗ ಖಾಸಗಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಭೂಪ ಅದನ್ನೇ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ.
ಕಸಬಾ ಪೇಟ ಠಾಣೆಯ ಪೊಲೀಸರು ಈ ವಿಕೃತಕಾಮಿಯನ್ನು ಬಂಧಿಸಿದ್ದಾರೆ. ತನ್ನ ಕಾಮದಾಟಕ್ಕೆ ಅಪ್ರಾಪ್ತ ಬಾಲಕಿಯರನ್ನೂ ಆತ ಬಿಡುತ್ತಿರಲಿಲ್ಲ ಎನ್ನಲಾಗಿದೆ. ಅಪ್ರಾಪ್ತ ಬಾಲಕಿಯ ಪೋಷಕರಿಂದ ಪೊಲೀಸರಿಗೆ ದೂರು ಬಂದ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಈ ದೂರಿನ ಬಳಿಕ ಝರಾಕ್ಸ್ ಅಂಗಡಿ ಮಾಲೀಕನನ್ನ ಠಾಣೆಗೆ ಕರೆದುಕೊಂಡು ಬಂದು ಡ್ರಿಲ್ ಮಾಡಲಾಗಿದೆ. ವಿಚಾರಣೆ ವೇಳೆ ವಿಕೃತ ಕಾಮಿ ಮೊಬೈಲ್‌ನಲ್ಲಿ ಹತ್ತಕ್ಕೂ ಹೆಚ್ಚು ಯುವತಿಯ ಜೊತೆಗಿನ ವಿಡಿಯೋ ಬಯಲಾಗಿದೆ.
ಸುಪಾರಿ ನೀಡಿ ಗಂಡನ ಕೊಲೆ ಮಾಡಿಸಿ 'ಹಾರ್ಟ್ ಅಟ್ಯಾಕ್' ಡ್ರಾಮಾ' 9 ತಿಂಗಳ ಹಿಂದೆ ಹೂತ ಶವ ಹೊರತೆಗೆದ ಪೊಲೀಸ್!
ಅಪ್ರಾಪ್ತ ಬಾಲಕಿಗೆ ತಂದೆ-ತಾಯಿ ಇರಲಿಲ್ಲ, ಅಜ್ಜಿಯ ಬಳಿ ಇದ್ದಳು. ಆಕೆಗೆ ಹಣ ನೀಡಿ ದುರುಪಯೋಗ ಪಡಿಸಿಕೊಂಡಿದ್ದಾನೆ. ನಮಗೆ ಸಿಕ್ಕ ಸಾಕ್ಷಿ ಆಧಾರದ ಮೇಲೆ ಇನ್ನೂ ಪ್ರಕರಣ ದಾಖಲಿಸಿಕೊಳ್ಳುತ್ತೇವೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ತಿಳಿಸಿದ್ದಾರೆ.
Belagavi: ಕುಂದಾನಗರಿಯ ಬೆಚ್ಚಿಬೀಳಿಸಿದ ಸಾಮೂಹಿಕ ಅತ್ಯಾಚಾರ, ರೇಪಿಸ್ಟ್‌ಗಳ ಪ್ಲ್ಯಾನ್‌ಗೆ ಪೊಲೀಸರೇ ಶಾಕ್!
