Asianet Suvarna News Asianet Suvarna News

ಬಾಡಿಗೆ ಮನೆಯಲ್ಲಿ ಮಹಿಳೆ ಜೊತೆ ವಿವಾಹಿತ ಪೊಲೀಸ್ ಪೇದೆ ನೇಣುಬಿಗಿದು ಆತ್ಮಹತ್ಯೆ!

ಓರ್ವ ಮಹಿಳೆ ಜೊತೆ ಪೊಲೀಸ್ ಪೇದೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ನವನಗರದ  ಶಿವಾನಂದನಗರದಲ್ಲಿ ನಡೆದಿದೆ. ಮಹೇಶ್ ಹೆಸರೂರ್ (31), ವಿಜಯಲಕ್ಷ್ಮೀ ವಾಲಿ (30) ಮೃತ ದುರ್ದೈವಿಗಳು

Hubballi crime news traffice police mahesh hesarur hanged himself with a woman rav
Author
First Published May 21, 2024, 4:40 PM IST

ಹುಬ್ಬಳ್ಳಿ (ಮೇ.21): ಓರ್ವ ಮಹಿಳೆ ಜೊತೆ ಪೊಲೀಸ್ ಪೇದೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ನವನಗರದ  ಶಿವಾನಂದನಗರದಲ್ಲಿ ನಡೆದಿದೆ.

ಮಹೇಶ್ ಹೆಸರೂರ್ (31), ವಿಜಯಲಕ್ಷ್ಮೀ ವಾಲಿ (30) ಮೃತ ದುರ್ದೈವಿಗಳು. ಮೃತ ಮಹೇಶ್ ಹೆಸರೂರ್ ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ನಿವಾಸಿಯಾಗಿದ್ದು ಧಾರವಾಡದಲ್ಲಿ ಟ್ರಾಫಿಕ್ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ಮಾಡುತ್ತಿದ್ದ ಪೇದೆ. ಇನ್ನು ಮೃತ ಮಹಿಳೆ ಚಿಕ್ಕ ಹೋಟೆಲ್ ಇಟ್ಟುಕೊಂಡು ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಇಬ್ಬರಿಗೂ ಸಂಬಂಧವಿತ್ತು ಎನ್ನಲಾಗಿದೆ. ಪೊಲೀಸ್ ಪೇದೆ ವಿವಾಹಿತನಾಗಿದ್ದು, ಹೊಂದಾಣಿಕೆ ಆಗಿರಲಿಲ್ಲ. ಹೀಗಾಗಿ ಮೃತ ವಿಜಯಲಕ್ಷ್ಮಿಯೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾಗಿದೆ.

ನನ್ನ ಮೊಮ್ಮಗಳ ಸಾವಿಗೆ ಸೂಕ್ತ ನ್ಯಾಯ ಕೊಡಿಸಿ: ಸಚಿವ ಡಾ. ಪರಮೇಶ್ವರ ಮುಂದೆ ಮೃತ ಅಂಜಲಿ ಅಜ್ಜಿ ಕಣ್ಣೀರು..!

ಕಳೆದ ಒಂದು ವರ್ಷದ ಹಿಂದೆಯಷ್ಟೇ ಬಾಡಿಗೆ ಮನೆಗೆ ಬಂದಿದ್ದ ಕಾನ್ಸ್‌ಟೇಬಲ್.. ಮೃತ ಮಹಿಳೆಯೊಂದಿಗೆ ಪರಿಚಯವಾಗಿ ಸಂಬಂಧ ಹೊಂದಿದ್ದರು. ಆದರೆ ಯಾವ ಕಾರಣಕ್ಕೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ತಿಳಿದುಬಂದಿಲ್ಲ. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಕೊಲೆ ಮಾಡಿ ನೇಣು ಹಾಕಿದ್ದಾರೋ ನಿಖರವಾಗಿ ತಿಳಿದುಬಂದಿಲ್ಲ. ಫೋಟೊದಲ್ಲಿ ಕಾಣಿಸುವ ಚಿಕ್ಕ ಬಾಟಲಿ ವಿಷದ ಬಾಟಲಿ ಇರುವ ಸಾಧ್ಯತೆ. ಮೊದಲು ಮಹಿಳೆಗೆ ವಿಷ ಹಾಕಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯೂ ಇದೆ.

ಅಂಜಲಿ ಕುಟುಂಬದ ಬೆನ್ನಿಗೆ ನಿಂತ ಹುಕ್ಕೇರಿ ಹಿರೇಮಠ; ಜೋಳಿಗೆ ಹಿಡಿದು ಭಿಕ್ಷೆ ಬೇಡಿ ಬಂದ ಹಣ ಕುಟುಂಬಸ್ಥರಿಗೆ ನೀಡಿದ ಶ್ರೀಗಳು

ಇನ್ನು ಇಬ್ಬರ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಯಾವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದಿಲ್ಲ. ಸದ್ಯ ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿದ್ದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios