Asianet Suvarna News Asianet Suvarna News

ಕಲಬುರಗಿ: ಮನೆ ಬೀಗ ಮುರಿದು ಚಿನ್ನಾಭರಣ ಕಳವು

ಶಶಿಕಾಂತ ವಾಡಿ ಎಂಬುವವರ ಮನೆ ಬೀಗ ಮುರಿದು 84 ಸಾವಿರ ರು. ಮೌಲ್ಯದ 30 ಗ್ರಾಂ.ಬಂಗಾರದ ಮಂಗಳಸೂತ್ರ, 28 ಸಾವಿರ ರು. ಮೌಲ್ಯದ 10 ಗ್ರಾಂ.ಬಂಗಾರದ ಎರಡು ಎಳೆಯ ಚೈನ್, 28 ಸಾವಿರ ರು. ಮೌಲ್ಯದ 10 ಗ್ರಾಂ.ಬಂಗಾರದ ಬ್ರಾಸಲೇಟ್ ಸೇರಿ 1.40 ಲಕ್ಷ ರು. ಮೌಲ್ಯದ 50 ಗ್ರಾಂ. ಬಂಗಾರದ ಆಭರಣ ಕಳವು ಮಾಡಲಾಗಿದೆ. 

House Theft in Kalaburagi grg
Author
First Published Sep 5, 2024, 4:54 AM IST | Last Updated Sep 5, 2024, 4:54 AM IST

ಕಲಬುರಗಿ(ಸೆ.05):  ಮನೆ ಬೀಗ ಮುರಿದು 1.40 ಲಕ್ಷ ರು. ಮೌಲ್ಯದ ಚಿನ್ನಾಭರಣ ದೋಚಿಕೊಂಡು ಹೋಗಿರುವ ಘಟನೆ ಇಲ್ಲಿನ ಸ್ವರಗೇಟ್ ನಗರದಲ್ಲಿ ನಡೆದಿದೆ.

ಶಶಿಕಾಂತ ವಾಡಿ ಎಂಬುವವರ ಮನೆ ಬೀಗ ಮುರಿದು 84 ಸಾವಿರ ರು. ಮೌಲ್ಯದ 30 ಗ್ರಾಂ.ಬಂಗಾರದ ಮಂಗಳಸೂತ್ರ, 28 ಸಾವಿರ ರು. ಮೌಲ್ಯದ 10 ಗ್ರಾಂ.ಬಂಗಾರದ ಎರಡು ಎಳೆಯ ಚೈನ್, 28 ಸಾವಿರ ರು. ಮೌಲ್ಯದ 10 ಗ್ರಾಂ.ಬಂಗಾರದ ಬ್ರಾಸಲೇಟ್ ಸೇರಿ 1.40 ಲಕ್ಷ ರು. ಮೌಲ್ಯದ 50 ಗ್ರಾಂ. ಬಂಗಾರದ ಆಭರಣ ಕಳವು ಮಾಡಲಾಗಿದೆ. ಅಪೆಕ್ಸ್ ಬ್ಯಾಂಕನ ನೇಮಕಾತಿ ಪರೀಕ್ಷೆ ಇರುವ ಪ್ರಯುಕ್ತ ಶಶಿಕಾಂತ ಅವರು ತಂದೆ-ತಾಯಿಯನ್ನು ಮನೆಯಲ್ಲಿ ಬಿಟ್ಟು ಆ.31ರಂದು ರಾತ್ರಿ ಬೆಂಗಳೂರಿಗೆ ಹೋಗಿದ್ದರು. 

ಕಾರವಾರದಲ್ಲಿ ಅರೆಬೆಂದ ಸ್ಥಿತಿಯಲ್ಲಿ 35 ವರ್ಷದ ಮಹಿಳೆ ಶವ ಪತ್ತೆ!

ಸ್ವ-ಗ್ರಾಮವಾದ ಆಳಂದ ತಾಲ್ಲೂಕಿನ ಸಾವಳಗಿ (ಕೆ) ಗ್ರಾಮದಲ್ಲಿರುವ ಜಮೀನಿನಲ್ಲಿ ಬೆಳೆದ ಹೂವಿನ ಕಟಾವಿನ ಸಂಬಂಧ ಇವರ ತಂದೆ ತಾಯಿ ಸೆ.1ರಂದು ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಿದ್ದರು. Dಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ ಕಳ್ಳರು ಮನೆ ಬೀಗ ಮುರಿದು ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios