12ಕ್ಕೂ ಹೆಚ್ಚು ಕಡೆಗಳಲ್ಲಿ ಕಳ್ಳತನ ಮಾಡಿದ್ದ ಗಂಡ - ಹೆಂಡತಿ ಅಂದರ್ / ತಲೆ ಮರೆಸಿಕೊಂಡು ಓಡಾಡುತ್ತಿದ್ದ ಗಂಡ ಹೆಂಡತಿ/ ಬೀಜಾಡಿ ಗ್ರಾಮದ  ಬೀಪಾನ್‌ಬೆಟ್ಟಿನ ಜಯರಾಜ್‌ ಶೆಟ್ಟಿ ಮಾಡಿದ್ದ ದೊಡ್ಡ ಕಳ್ಳತನ/ ಧಾರವಾಡದಿಂದ ಆರೋಪಿಗಳ ಜಾಡು

ಉಡುಪಿ(ನ. 15) ಸೆಪ್ಟಂಬರ್ ತಿಂಗಳಲ್ಲಿ ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದ ಬೀಪಾನ್‌ಬೆಟ್ಟಿನ ಜಯರಾಜ್‌ ಶೆಟ್ಟಿ ಅವರ ಮನೆಯಲ್ಲಿ ಸುಮಾರು 9,88,500 ರು. ಮೌಲ್ಯದ ಚಿನ್ನ - ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಆರೋಪಿಗಳು ಧಾರವಾಡದ ಜನತಾನಗರದ ನಿವಾಸಿಗಳಾದ ರಾಜು ಪಾಮಡಿ (42) ಹಾಗೂ ಆತನ ಹೆಂಡತಿ ಪದ್ಮ ಪಾಮಡಿ (37), ಅವರಿಂದ ಒಟ್ಟು 202 ಗ್ರಾಂ ಚಿನ್ನ ಹಾಗೂ 1.683 ಕೆಜಿ ಬೆಳ್ಳಿ, 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 

ರೈತರ ಟ್ರ್ಯಾಕ್ಟರ್ ಕದ್ದು ರೈತರಿಗೆ ಲೀಸ್ ಕೊಡ್ತಿದ್ದ

ರಾಜೇಶ್ ಮೂಲತಃ ಉಡುಪಿಯ ಇಂದ್ರಾಳಿಯವನಾಗಿದ್ದು, ಕಾಪು, ಮಣಿಪಾಲಗಳಲ್ಲಿ ಕಳ್ಳತನ ನಡೆಸಿ ಜೈಲಿನಲ್ಲಿದ್ದು, ಜುಲೈನಲ್ಲಿ ಜಾಮೀನು ಮೇಲೆ ಬಿಡುಗಡೆಗೊಂಡು, ಮತ್ತೇ ಹೆಂಡತಿಯೊಂದಿಗೆ ಕುಂದಾಪುರ, ಸುರತ್ಕಲ್ , ಮುಲ್ಕಿ, ಮಣಿಪಾಲ, ಗಂಗೊಳ್ಳಿ, ಭಟ್ಕಳ, ಮುರ್ಡೇಶ್ವರ, ಗೋಕರ್ಣ, ಕುಮಟಾ, ಹೊನ್ನಾವರ, ಕಾರಾವಾರಗಳಲ್ಲಿ ಮನೆ ಹಾಗೂ ದೇವಸ್ಥಾನ, ದೈವಸ್ಥಾನಗಳಲ್ಲಿ ಕಳವು ಮಾಡಿದ್ದಾನೆ.

ಕುಂದಾಫುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್., ಎಸೈ ಸದಾಶಿವ ಗವರೋಜಿ, ಟ್ರಾಫಿಕ್ ಎಸೈ ಸುದರ್ಶನ್, ಶಂಕರನಾರಾಯಣ ಎಸೈ ಶ್ರೀಧರ ನಾಯ್ಕ ಮತ್ತು ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸಿದ್ದಾರೆ.