ಬೆಂಗಳೂರು(ನ. 12)  ರೈತರಿಂದ ಟ್ರಾಕ್ಟರ್ ಕದ್ದು ರೈತರಿಗೆ ಲೀಸ್ ಗೆ ಬಿಡ್ತಿದ್ದ ಟ್ರಾಕ್ಟರ್ ಕಳ್ಳರು ಕೊನೆಗೂ ಸಿಕ್ಕಿಬಿದ್ದಿದ್ದಾರೆ.  ಕಾಮಾಕ್ಷಿಪಾಳ್ಯ ಪೊಲೀಸರು  12  ಟ್ರಾಕ್ಟರ್ ಪತ್ತೆಮಾಡಿದ್ದಾರೆ.

ಮಂಡ್ಯದ ಕೆಂಬಳ್ಳಿಯ ಬೋರೇಗೌಡ ಎಂಬಾತ ಟ್ರಾಕ್ಟರ್ ಕಳ್ಳತನದ ಮಾಸ್ಟರ್ ಮೈಂಡ್.  ಕದ್ದ ಟ್ರಾಕ್ಟರ್ ಗಳನ್ನು ಮಂಡ್ಯದಲ್ಲೇ ಲೀಸ್ ಗೆ ಬಿಡ್ತಿದ್ದ ಆರೋಪಿ ಸಿಕ್ಕಿಬಿದ್ದಿದ್ದಾನೆ.  ಅಲೆಮನೆ ಗದ್ದೆಗಳಲ್ಲಿ ಟ್ರಾಕ್ಟರ್ ಲೀಸ್ ಗೆ ಬಿಡ್ತಿದ್ದ ಆರೋಪಿ  ಬೆಂಗಳುರು ಸುತ್ತ ಮುತ್ತ ಟ್ರ್ಯಾಕ್ಟರ್ ಕದ್ದು ಪರಾರಿಯಾಗುತ್ತಿದ್ದ.

ಎಕ್ಕ..ರಾಜ..ರಾಣೀ ಎನ್ನುತ್ತಲೇ ಪ್ರಾಣ ಬಿಟ್ಟ

ಕಡಿಮೆ ಬಾಡಿಗೆ ಹಣದ ಆಸೆಗೆ ಬಿದ್ದು ಟ್ರಾಕ್ಟರ್ ಗಳನ್ನು ರೈತರು ಲೀಸ್ ಪಡೆದುಕೊಳ್ಳುತ್ತಿದ್ದರು. ರೈತರಿಗೆ ಯಾವೂದೇ ಡ್ಯಾಕ್ಯೂಮೆಂಟ್ ನೀಡದೇ ಲೀಸ್ ಬಿಡ್ತಿದ್ದ ಬೋರೆ ಗೌಡ ಕೊನೆಗೂ ಸಿಕ್ಕಿಬಿದ್ದು ಇನ್ನೊಬ್ಬ ಆರೋಪಿಯ ಪತ್ತೆಗೆ ಬಲೆ ಬೀಸಲಾಗಿದೆ.