Asianet Suvarna News Asianet Suvarna News

ಹೊಳಲ್ಕೆರೆ ಶಾಸಕ ಚಂದ್ರಪ್ಪನ ಹೆಸರು ಬರೆದಿಟ್ಟು ಗ್ರಾ.ಪಂ. ಅಧಿಕಾರಿ ಆತ್ಮಹತ್ಯೆ

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರು ಕೆಲಸದಿಂದ ಅಮಾನತುಗೊಳಿಸುವ ಬೆದರಿಕೆ ಒಡ್ಡಿದ್ದರಿಂದ ಎಸ್‌ಡಿಎ ಅಧಿಕಾರಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

Holalkere MLA Chandrappa given suspension threat to Upparigenahalli SDA Thippeswamy commit death sat
Author
First Published Aug 6, 2023, 3:18 PM IST

ಚಿತ್ರದುರ್ಗ (ಆ.06): ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಅವರಿಂದ ಕೆಲಸದಿಂದ ಅಮಾನತ್ತು ಬೆದರಿಕೆ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ದ್ವಿತೀಯ ದರ್ಜೆ ಸಹಾಯಕನೊಬ್ಬ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಾನಕಲ್‌ ಗ್ರಾಮದ ಬಳಿ ನಡೆದಿದೆ.

ಮೃತ ದ್ವಿತೀಯ ದರ್ಜೆ ಸಹಾಯಕನನ್ನು (ಎಸ್‌ಡಿಎ) ತಿಪ್ಪೇಸ್ವಾಮಿ ಎಂದು ಹೇಳಲಾಗಿದೆ. ಇವರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಸಹಾಯಕ (SDA) ಆಗಿ ಕೆಲಸ ಮಾಡುತ್ತಿದ್ದರು. ಇನ್ನು ಶಾಸಕರ ಅಮಾನತು ಬೆದರಿಕೆ ಹಾಗೂ ಕೆಲವರ ಕಿರುಕುಳಕ್ಕೆ ಬೇಸತ್ತು ಜಾನಕಲ್ ಗ್ರಾಮದ ಬಳಿ ತಿಪ್ಪೇಸ್ವಾಮಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

Bengaluru: ವಿಜಯನಗರ ಸಂಚಾರಿ ಪೊಲೀಸ್ ಹೃದಯಾಘಾತಕ್ಕೆ ಬಲಿ: ಇಲ್ಲಿದೆ ನೋವಿನ ನುಡಿ..

ಸಂಬಂಧಿಕರ ಮನೆಗೆ ಹೋಗಿದ್ದಾಗ ಆತ್ಮಹತ್ಯೆಗೆ ಶರಣು: ಇನ್ನು ಶಾಸಕ ಚಂದ್ರಪ್ಪ ಅವರಿಂದ ಅಮಾನತು ಮಾಡುವುದಾಗಿ ಬೆದರಿಕೆ ಒಂದೆಡೆಯಾದರೆ, ಹೊಳಲ್ಕೆರೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ (ಇ.ಓ) ರವಿ ಹಾಗೂ ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯಿತಿಯ ಇತರೆ ಸದಸ್ಯರಿಂದ ಕಿರುಕುಳ ಆರೋಪ ಮಾಡಿದ್ದಾರೆ. ದ್ವಿತೀಯ ದರ್ಜೆ ಸಜಾಯಕ ಸೊಂಡೆಕೊಳ ಗ್ರಾಮದ ತಿಪ್ಪೇಸ್ವಾಮಿ ನಿನ್ನೆ ಆತಹತ್ಯೆಗೆ ಶರಣಾಗಿದ್ದಾರೆ. ಆದರೆ, ಇವರು ಸಂಬಂಧಿಕರಿದ್ದ ಹೊಸದುರ್ಗ ತಾಲೂಕಿನ ಜಾನಕಲ್ ಗ್ರಾಮಕ್ಕೆ ತೆರಳಿದಾಗ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಶಾಸಕರ ಹೆಸರನ್ನು ಕೈಬಿಟ್ಟು ದೂರು ಕೊಟ್ಟ ಪುತ್ರ: ಇನ್ನು ಎಸ್‌ಡಿಎ ಸಾವಿನ ಬಗ್ಗೆ ಅವರ ಪುತ್ರ ರಾಜಶೇಖರಪ್ಪ ಎನ್ನುವವರು ಹೊಸದುರ್ಗ ಪೊಲೀಸ್ ಠಾಣೆಯಲಿ ಪ್ರಕರಣ ದಾಖಲು ಮಾಡಿದ್ದಾರೆ. ಆದರೆ, ಅವರ ಪುತ್ರ ನೀಡಿರುವ ದೂರಿನಲ್ಲಿ ಶಾಸಕ ಎಂ.ಚಂದ್ರಪ್ಪ, ತಾ.ಪಂ ಇಓ ರವಿ ಹೆಸರನ್ನು ಉಲ್ಲೇಖ ಮಾಡಿಲ್ಲ. ಕೇವಲ ಗ್ರಾ.ಪಂ ಸದಸ್ಯರ ಕಿರುಕುಳ ಹಿನ್ನಲೆ ಆತ್ಮಹತ್ಯೆ ಎಂದು ದೂರು ನೀಡಿದ್ದಾರೆ. ಆದರೆ, ಅವರ ತಂದೆ ಮೃತ ತಿಪ್ಪೇಸ್ವಾಮಿ ಅವರು ತಮ್ಮ ಡೆತ್‌ನೋಟ್‌ನಲ್ಲಿ ಶಾಸಕ ಚಂದ್ರಪ್ಪ, ತಾಪಂ ಇಒ ರವಿ ಸೇರಿ ಮೋಹನ್, ಮೂರ್ತಿ, ಉಗ್ರಪ್ಪ, ಲವ, ರಾಜಪ್ಪ ಎಂಬುವರ ಕಿರುಕುಳ ಎಂದು ಹೇಳಿದ್ದರು. 

ಶಾಸಕರು Vs ಸಚಿವರು: ರಾಯರೆಡ್ಡಿ, ಬಿ.ಆರ್‌. ಪಾಟೀಲ್‌ ಬೆನ್ನಲ್ಲೇ ಮತ್ತೊಬ್ಬ ಶಾಸಕ ಅಸಮಾಧಾನ!

ನಾನು ಮೃತ ತಿಪ್ಪೇಸ್ವಾಮಿಯೊಂದಿಗೆ ಎಂದಿಗೂ ಮಾತನಾಡಿಲ್ಲವೆಂದ ಚಂದ್ರಪ್ಪ: ನಾನು ಇಲ್ಲಿಯವರೆಗೂ ಅವರ ಮುಖವನ್ನೇ ನೋಡಿಲ್ಲ, ಅವರೊಂದಿಗೆ ಮಾತನಾಡಿಯೂ ಇಲ್ಲ. ಆದರೂ, ಆತ ನನ್ನ ಹೆಸರನ್ನು ಯಾಕೆ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾನೆ ಎಂದು ಗೊತ್ತಿಲ್ಲ. ಹೀಗಿದ್ದೂ, ನಾನು ಆತನ ಸಾವಿಗೆ ಹೇಗೆ ಕಾರಣವಾಗುತ್ತೇವೆ. ನಾನು ಮೃತ ತಿಪ್ಪೇಸ್ವಾಮಿಯೊಂದಿಗೆ ಮಾತನಾಡುವ ಅಗತ್ಯವೇ ಇಲ್ಲ. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಮಾಡಿದ ನಂತರವೇ ಮೃತ ತಿಪ್ಪೇಸ್ವಾಮಿ ಡೆತ್‌ನೋಟ್‌ನಲ್ಲಿ ನನ್ನ ಹೆಸರಿಗೆ ಎಂದು ಗೊತ್ತಾಗಿದೆ. ಒಂದು ವೇಳೆ ಪೊಲೀಸರು ವಿಚಾರಣೆಗೆ ಕರೆದರೆ ನಾನು ಖಂಡಿತವಾಗಿ ಹೋಗಿ ಉತ್ತರ ಕೊಟ್ಟು ಬರುತ್ತೇನೆ ಎಂದು ಶಾಸಕ ಚಂದ್ರಪ್ಪ ಹೇಳಿದರು. ಈ ಮೂಲಕ ತಮ್ಮ ಮೇಲೆ ವ್ಯಕ್ತವಾಗಿದ್ದ ಬೆದರಿಕೆ ಆರೋಪವನ್ನು ಶಾಸಕ ಚಂದ್ರಪ್ಪ ತಳ್ಳಿ ಹಾಕಿದ್ದಾರೆ. 

Follow Us:
Download App:
  • android
  • ios