Asianet Suvarna News Asianet Suvarna News

Kalaburagi Crime: ಕಪಾಳಕ್ಕೆ ಹೊಡೆದು ಮೊಬೈಲ್‌, ಹಣ ಕಸಿದು ಪರಾರಿ

ಆಸ್ಪತ್ರೆಗೆಂದು ಹೋಗಲು ಬಂದಿದ್ದ ವ್ಯಕ್ತಿಯೊಬ್ಬನಿಗೆ ಕಪಾಳಕ್ಕೆ ಹೊಡೆದು ಆತನಲ್ಲಿದ್ದ ಮೊಬೈಲ್‌ ಹಾಗೂ ಹಣ ಕಸಿದುಕೊಂಡು ಪರಾರಿಯಾದ ಘಟನೆ ನಗರದ ಕೇಂದ್ರ ಬಸ್‌ನಿಲ್ದಾಣದಲ್ಲಿ ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ವರದಿಯಾಗಿದೆ. ಸುಲಿಗೆಗೆ ಒಳಗಾದ ವ್ಯಕ್ತಿಯನ್ನು ಚಿತ್ತಾಪುರ ತಾಲೂಕಿನ ಕಾಟಮದೇವರಹಳ್ಳಿ ಗ್ರಾಮದ ಸಿದ್ಧರಾಮಪ್ಪ ಯಾಗಾಪೂರ (72) ಎಂದು ಗುರುತಿಸಲಾಗಿದೆ.

Hit him on the forehead and stole the mobile at kalaburagi district crime rav
Author
First Published Jun 4, 2023, 5:45 AM IST

ಕಲಬುರಗಿ (ಜೂ.4) : ಆಸ್ಪತ್ರೆಗೆಂದು ಹೋಗಲು ಬಂದಿದ್ದ ವ್ಯಕ್ತಿಯೊಬ್ಬನಿಗೆ ಕಪಾಳಕ್ಕೆ ಹೊಡೆದು ಆತನಲ್ಲಿದ್ದ ಮೊಬೈಲ್‌ ಹಾಗೂ ಹಣ ಕಸಿದುಕೊಂಡು ಪರಾರಿಯಾದ ಘಟನೆ ನಗರದ ಕೇಂದ್ರ ಬಸ್‌ನಿಲ್ದಾಣದಲ್ಲಿ ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ವರದಿಯಾಗಿದೆ. ಸುಲಿಗೆಗೆ ಒಳಗಾದ ವ್ಯಕ್ತಿಯನ್ನು ಚಿತ್ತಾಪುರ ತಾಲೂಕಿನ ಕಾಟಮದೇವರಹಳ್ಳಿ ಗ್ರಾಮದ ಸಿದ್ಧರಾಮಪ್ಪ ಯಾಗಾಪೂರ (72) ಎಂದು ಗುರುತಿಸಲಾಗಿದೆ.

ರೈತ ಸಿದ್ರಾಮಪ್ಪನು ಡಾ. ಶಿವಾನಂದ್‌ ಪಾಟೀಲ್‌ ಅವರ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗಲು ನಗರದ ಕೇಂದ್ರ ಬಸ್‌ನಿಲ್ದಾಣಕ್ಕೆ ಬೆಳಗ್ಗೆ ಬಂದಿಳಿದು ನಡೆದುಕೊಂಡು ಹೋಗುತ್ತಿರುವಾಗ 20ರಿಂದ 25 ವರ್ಷ ವಯಸ್ಸಿನ ವ್ಯಕ್ತಿ ಎದುರಿಗೆ ಬಂದು ಒಮ್ಮೆಲೆ ವ್ಯಕ್ತಿ ಕೈಯಿಂದ ಎಡ ಕಪಾಳಕ್ಕೆ ಹೊಡೆದು ಕೈಯಲ್ಲಿದ್ದ 5000 ರು. ಮೌಲ್ಯದ ರಿಯಲ್‌ ಮಿ ಕಂಪೆನಿಯ ಮೊಬೈಲ್‌ ಹಾಗೂ ಮೊಬೈಲ್‌ ಕವರಿನಲ್ಲಿದ್ದ 3000 ರು.ಗಳನ್ನು ಕಸಿದುಕೊಂಡು ಓಡಿ ಹೋಗಿದ್ದಾನೆ. ಈ ಕುರಿತು ಸಿದ್ದರಾಮಪ್ಪ ಅಶೋಕ್‌ ನಗರ ಪೋಲಿಸ್‌ ಠಾಣೆಗೆ ದೂರು ಸಲ್ಲಿಸಿದ್ದು ಪ್ರಕರಣ ದಾಖಲಾದೆ.

ಹಾಸನದಲ್ಲಿ ಸರಗಳ್ಳರ ಕೈಚಳಕ: ಭಜನೆಗೆ ಹೊರಟಿದ್ದ ಮಹಿಳೆಯ ಚಿನ್ನದ ಸರ ಕಿತ್ತು ಪರಾರಿ!

ಕುಟುಂಬದ ಸದಸ್ಯರು ಮನೆಯಲ್ಲಿದ್ದಾಗಲೆ ಕಳ್ಳತನ ಮಾಡಿ ಪರಾರಿ

ಕಲಬುರಗಿ: ಮನೆಯ ಮೇಲೆ ಕುಟುಂಬದ ಸದಸ್ಯರು ಇದ್ದ ಸಂದರ್ಭದಲ್ಲಿ ಕಳ್ಳನೊಬ್ಬ ಮನೆಯೊಳಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಹಣ ದೋಚಿ ಪರಾರಿಯಾದ ಘಟನೆ ನಗರದ ಎಂಎಸ್ಕೆ ಮಿಲ್‌ ಪ್ರದೇಶದ ಇಕಬಾಲ್‌ ಕಾಲೋನಿಯಲ್ಲಿ ವರದಿಯಾಗಿದೆ.

ಟೈಲರ್‌ ಆಗಿರುವ ಮೊಹ್ಮದ್‌ ಜುಲ್ಫೇಖಾರೋದ್ದೀನ್‌ ತಂದೆ ಮೊಹ್ಮದ್‌ ಇಫ್ತೆಖಾರೋದ್ದೀನ್‌ ಅವರ ಮನೆಯಲ್ಲಿ ಕಳ್ಳತನವಾಗಿದೆ. ಕಳೆದ ಮಂಗಳವಾರದಂದು ರಾತ್ರಿ 8 ಗಂಟೆ ಸುಮಾರಿಗೆ ಮನೆಯ ಮೇಲೆ ಮೊಹ್ಮದ್‌ ಜುಲ್ಫೇಖಾರೋದ್ದೀನ್‌ ಅವರ ಪತ್ನಿ ಮತ್ತು ಮಕ್ಕಳು ಇರುವಾಗಲೆ ಅಪರಿಚಿತ ವ್ಯಕ್ತಿ ಮನೆಯೊಳಗೆ ನುಗ್ಗಿ ಮನೆಯ ಫ್ರಿಡ್ಜ್‌ನಲ್ಲಿದ್ದ 30,000 ರು. ಮೌಲ್ಯದ 10 ಗ್ರಾ. ತೂಕದ ಬಂಗಾರದ ವಸ್ತು, ನಗದು 17000 ನಗದು ದೋಚಿಕೊಂಡು ಹೋಗುವಾಗ ಮೇಲಿದ್ದ ಕುಟುಂಬದ ಸದಸ್ಯರು ನೋಡಿದ್ದಾರೆ. ತಕ್ಷಣ ಮೊಬೈಲ್‌ ಮೂಲಕ ಮನೆ ಯಜಮಾನಿಗೆ ಕರೆಸಿಕೊಂಡಾಗ ಕಳ್ಳತನ ಆಗಿರುಬ ಬಗ್ಗೆ ಪತ್ತೆಯಾಗಿದೆ. ಈ ಕುರಿತು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎಂ.ಬಿ. ನಗರ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆ: ಘನತ್ಯಾಜ್ಯ ವಿಲೇವಾರಿ ಘಟಕದ ಶೀಟು ಕಳವು, ಕುಣಿಗಲ್‌ನಲ್ಲಿ ಕೊಳವೆ ಬಾವಿ ಕೇಬಲ್ ಕಳವು

Follow Us:
Download App:
  • android
  • ios