ಬೈಕ್‌ನಲ್ಲಿ ಹಿಂಬಾಲಿಸಿ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರಗಳನ್ನು ಕಿತ್ತು ಪರಾರಿಯಾಗಿರುವ ಘಟನೆ ಹಾಸನ ಜಿಲ್ಲೆಯ ರವೀಂದ್ರನಗರದ ಬಾಹುಬಲಿ ರಸ್ತೆಯಲ್ಲಿ ನಿನ್ನೆ ಸಂಜೆ ನಡೆದಿದೆ.

ಹಾಸನ (ಮೇ.27) : ಬೈಕ್‌ನಲ್ಲಿ ಹಿಂಬಾಲಿಸಿ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರಗಳನ್ನು ಕಿತ್ತು ಪರಾರಿಯಾಗಿರುವ ಘಟನೆ ಹಾಸನ ಜಿಲ್ಲೆಯ ರವೀಂದ್ರನಗರದ ಬಾಹುಬಲಿ ರಸ್ತೆಯಲ್ಲಿ ನಿನ್ನೆ ಸಂಜೆ ನಡೆದಿದೆ.

ನಿವೃತ್ತ ಶಿಕ್ಷಕಿ ರೇಣುಕಾ ಚಿನ್ನದ ಸರ ಕಳೆದುಕೊಂಡ ಮಹಿಳೆ. ಕೆಆರ್‌ ಪುರ 10 ನೇ ಕ್ರಾಸ್‌ನಲ್ಲಿ ವಾಸವಿರುವ ರೇಣುಕಾ. ನಿನ್ನೆ ಸಂಜೆ ರಾಘವೇಂದ್ರಮಠಕ್ಕೆ ಭಜನೆಗೆ ಹೋಗುವುದಕ್ಕಾಗಿ ಎರಡು ಚಿನ್ನದ ಸರ ಹಾಕಿದ್ದ ರೇಣುಕಾ. ಸರಗಳ್ಳತನ ಮಾಡಲು ರಸ್ತೆಯಲ್ಲಿ ಹೊಂಚು ಹಾಕಿದ್ದ ಕಳ್ಳರು. ರೇಣುಕಾಳನ್ನು ಧರಿಸಿದ್ದ ಚಿನ್ನದ ಸರ ನೋಡಿ ಹಿಂಬಾಲಿಸಿದ್ದರು. ಮೊದಲಿಗೆ ಒಬ್ಬ ರೇಣುಕಾ ಹಿಂಬಾಲಿಸಿಕೊಂಡು ಬಂದಿದ್ದಾನೆ. ರಾಘವೇಂದ್ರ ಮಠದ ಕಡೆಗೆ ತಿರುಗುತ್ತಿದ್ದಂತೆ ರಸ್ತೆ ತಿರುವಿನಲ್ಲಿ ರೇಣುಕಾ ಕುತ್ತಿಗೆಗೆ ಕೈಹಾಕಿದ ಕಳ್ಳ. ಕುತ್ತಿಗೆಯಲ್ಲಿದ್ದ ಎರಡು ಚಿನ್ನದ ಸರ ಕಿತ್ತುಕೊಂಡಿದ್ದಾನೆ. ಇನ್ನೊರ್ವ ಕಳ್ಳ ಬೈಕ್‌ನಲ್ಲಿ ಬಂದಿದ್ದಾನೆ. ಕೂಡಲೇ ಬೈಕ್ ಹತ್ತಿ ಎಸ್ಕೇಪ್ ಆಗಿರುವ ಕಳ್ಳರು.

ಬೆಂಗಳೂರಲ್ಲಿ ಸರಗಳ್ಳತನ: ಮಿಸ್ಟರ್ ಆಂಧ್ರಪ್ರದೇಶ ಕಾಂಪಿಟೇಶನ್‌ನಲ್ಲಿ 3ನೇ ಸ್ಥಾನ ಪಡೆದವ ಅರೆಸ್ಟ್‌

ಏಕಾಏಕಿ ಕುತ್ತಿಗೆಗೆ ಕೈ ಹಾಕಿ ಕದ್ದೊಯ್ಯುವ ವೇಳೆ ಮಹಿಳೆ ಕಿರುಚಾಡುತ್ತಾ ಕಳ್ಳನ ಬೆನ್ನಟ್ಟಿದ್ದಾಲೆ. ಆದರೆ ಕೈಗೆ ಸಿಗದೆ ಕೂಡಲೇ ಬೈಕ್‌ನಲ್ಲಿ ಪರಾರಿಯಾಗಿರುವ ಖದೀಮರು

60 ಗ್ರಾಂ ಚಿನ್ನದ ಎರಡು ಸರಗಳನ್ನು ಕದ್ದು ಎಸ್ಕೇಪ್ ಆಗಿರುವ ಖತರ್ನಾಕ್ ಸರಗಳ್ಳರು. ಸರಗಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ. ತನಿಖೆ ಕೈಗೊಂಡಿರುವ ಪೊಲೀಸರು. ಸರಗಳ್ಳರ ಬಂಧನಕ್ಕೆ ಬಲೆ‌ ಬೀಸಿದ ಪೊಲೀಸರು

20 ಲಕ್ಷ ರು. ಮೌಲ್ಯದ ಚಿನ್ನಾಭರಣ, ಬೆಳ್ಳಿ ಪದಾರ್ಥಗಳು ವಶ

ನಾಗಮಂಗಲ ಮನೆ ಬೀಗ ಮುರಿದು ಚಿನ್ನಾಭರಣ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳ ಎಡೆಮುರಿ ಕಟ್ಟಿರುವ ನಾಗಮಂಗಲ ಗ್ರಾಮಾಂತರ ಠಾಣೆ ಪೊಲೀಸರು 20 ಲಕ್ಷ ರು.ಮೌಲ್ಯದ 360 ಗ್ರಾಂ ಚಿನ್ನ ಒಡವೆ ಮತ್ತು 1.3ಕೆ.ಜಿ. ತೂಕದ ಬೆಳ್ಳಿ ಪದಾರ್ಥಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ರಾಮನಗರ ತಾಲೂಕಿನ ತಡಿಕೋಗಿಲು ಗ್ರಾಮದ ಹಾಲಿ ಬೆಂಗಳೂರು ದಕ್ಷಿಣ ತಾವರೆಕೆರೆ ಹೋಬಳಿ ಚುಂಚನಕುಪ್ಪೆ ಅಂಚೆ ಚಂದ್ರಪ್ಪ ಸರ್ಕಲ್‌ನ ದೊಡ್ಡ ಆಲದಮರ ವಾಸಿ ಕೋಳಿ ಅಂಗಡಿ ವ್ಯಾಪಾರಿ ನರಸಿಂಹಯ್ಯ ಪುತ್ರ ಟಿ.ಎನ್‌.ಹರೀಶ್‌ ಅಲಿಯಾಸ್‌ ಕೊಂಗ ಅಲಿಯಾಸ್‌ ಕೋಳಿ (32) ಮತ್ತು ಬೆಂಗಳೂರಿನ ಪೀಣ್ಯ 2ನೇ ಕ್ರಾಸ್‌, 1ನೇ ಮೈನ್‌ನ್ನ ಆಂಜನೇಯ ದೇವಸ್ಥಾನದ ಬಳಿ ಇರುವ ಮುನಿಯಪ್ಪ ಪುತ್ರ ಕಾಂತರಾಜ… ಅಲಿಯಾಸ್‌ ಮೋರಿ ಕಾಂತ (45) ಬಂಧಿತ ಆರೋಪಿಗಳು.

ಪಟ್ಟಣ ವ್ಯಾಪ್ತಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಳ್ಳರು ಮನೆ ಬೀಗ ಮುರಿದು ಚಿನ್ನಾಭರಣ ಮತ್ತು ಬೆಳ್ಳಿ ಪದಾರ್ಥಗಳನ್ನು ದೋಚಿರುವ ಸಂಬಂಧ ನಾಗಮಂಗಲ ಪಟ್ಟಣ, ಗ್ರಾಮಾಂತರ, ಬಿಂಡಿಗನವಿಲೆ ಮತ್ತು ಬೆಳ್ಳೂರು ಪೊಲೀಸ್‌ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಅಲ್ಲದೇ ತಾಲೂಕಿನ ಅಂಚೆಚಿಟ್ಟನಹಳ್ಳಿ ಮಲ್ಲಿಕಾರ್ಜುನ್‌ ಬಿನ್‌ ಲೇಟ್‌ ಶಿವಣ್ಣ ಎಂಬುವರು ಕಳೆದ ಮೇ 4ರ ಮಧ್ಯಾಹ್ನ ತಮ್ಮ ಮನೆಗೆ ಬೀಗಹಾಕಿ ಬೀಗದ ಕೀಲಿಯನ್ನು ಎಂದಿನಂತೆ ಮನೆಹತ್ತಿರವೇ ಇಟ್ಟು ಜಮೀನಿಗೆ ತೆರಳಿದ್ದ ವೇಳೆ ಕಳ್ಳರು ಮನೆಯ ಬೀಗ ತೆಗೆದು ಬೀರುವಿನಲ್ಲಿಟ್ಟಿದ್ದ ಚಿನ್ನದ ಒಡವೆಗಳನ್ನು ಕದ್ದೊಯ್ದಿದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಮಲ್ಲಿಕಾರ್ಜುನ್‌ ದೂರು ದಾಖಲಿಸಿದ್ದರು.

ತಾಲೂಕಿನಾದ್ಯಂತ ಮನೆ ಕಳವು ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಮನಗಂಡು ಎಸ್ಪಿ ಎನ್‌.ಯತೀಶ್‌, ಅಪರ ಜಿಲ್ಲಾ ಎಸ್ಪಿ ಸಿ.ಈ.ತಿಮ್ಮಯ್ಯ ಅವರ ನಿರ್ದೇಶನದಂತೆ ನಾಗಮಂಗಲ ಉಪ ವಿಭಾಗದ ಡಿವೈಎಸ್ಪಿ ಲಕ್ಷ್ಮೀನಾರಾಯಣಪ್ರಸಾದ್‌ ಮೇಲುಸ್ತುವಾರಿಯಲ್ಲಿ ಆರೋಪಿಗಳ ಪತ್ತೆಹಚ್ಚಲು ವಿಶೇಷ ತಂಡ ರಚಿಸಲಾಗಿತ್ತು.

ಖಚಿತ ಮಾಹಿತಿ ಆಧರಿಸಿ ಕಾರ್ಯಾಚಣೆಗಿಳಿದ ಪೊಲೀಸರ ತಂಡ ಟಿ.ಎನ್‌.ಹರೀಶ್‌ ಎಂಬ ಆರೋಪಿಯನ್ನು ಮೇ 21ರ ಮಧ್ಯಾಹ್ನ 2.20ರ ಸಮಯದಲ್ಲಿ ಕುಣಿಗಲ… ತಾಲೂಕಿನ ಯಡಿಯೂರಿನಲ್ಲಿ ಬಂಧಿಸಿ ಠಾಣೆಗೆ ಕರೆತಂದು ತೀವ್ರ ವಿಚಾರಣೆಗೊಳಪಡಿಸಿದ ವೇಳೆ ಈ ಕೃತ್ಯಗಳಲ್ಲಿ ಮತ್ತೋರ್ವ ಆರೋಪಿ ಭಾಗಿಯಾಗಿರುವುದಾಗಿ ಸುಳಿವು ನೀಡಿದ್ದಾನೆ.

ಕಾರ್ಯಾಚರಣೆ ಮಂದುವರಿಸಿದ ಪೊಲೀಸರ ತಂಡ ಕಾಂತರಾಜು ಎಂಬ ಆರೋಪಿಯನ್ನು ಮೇ 25ರಂದು ಕುಣಿಗಲ… ಟೌನಿನಲ್ಲಿ ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದ ವೇಳೆ ತಾಲೂಕಿನ ಹಲವೆಡೆ ಮನೆಗಳ ಬೀಗ ಮುರಿದು ಚಿನ್ನಾಭರಣ ಮತ್ತು ಬೆಳ್ಳಿ ಪದಾರ್ಥಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಶುಕ್ರವಾರ ದಿನದಂದೇ ವೃದ್ದೆಯರ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದ ಗ್ಯಾಂಗ್ ಬಂಧನ

ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ನಾಗಮಂಗಲ ಗ್ರಾಮಾಂತರ ಮತ್ತು ಬಿಂಡಿಗನವಿಲೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ತಲಾ 2 ಪ್ರಕರಣ, ನಾಗಮಂಗಲ ಪಟ್ಟಣ ಮತ್ತು ಬೆಳ್ಳೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ತಲಾ 1 ಪ್ರಕರಣಗಳಲ್ಲಿ ಕಳುವಾಗಿದ್ದ 20 ಲಕ್ಷ ರು.ಮೌಲ್ಯದ 360ಗ್ರಾಂ ಚಿನ್ನ ಒಡವೆ ಮತ್ತು 1.3 ಕೆ.ಜಿ.ತೂಕದ ಬೆಳ್ಳಿ ಪದಾರ್ಥಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸಿಪಿಐ ಕೆ.ಎನ್‌.ನಿರಂಜನ್‌, ಗ್ರಾಮಾಂತರ ಪೊಲೀಸ್‌ ಠಾಣೆ ಪಿಎಸ್‌ಐ ವೈ.ಎನ್‌.ರವಿಕುಮಾರ್‌, ಬೆಳ್ಳೂರು ಠಾಣೆಯ ಪಿಎಸ್‌ಐ ಲೋಕೇಶ್‌, ಬಿಂಡಿಗನವಿಲೆ ಠಾಣೆಯ ಪಿಎಸ್‌ಐ ರಾಜೇಂದ್ರ, ಎಎಸ್‌ಐ ಟಿ.ಲಿಂಗರಾಜು, ಪೇದೆಗಳಾದ ಪ್ರಶಾಂತ್‌ಕುಮಾರ್‌, ನಟೇಶ್‌ ಬಾಬು, ಉಮೇಶ್‌, ಎಂ.ಸಿದ್ದಪ್ಪ, ಸಿದ್ದರಾಜು ಮತ್ತು ಬಿ.ಆರ್‌.ಚೇತನ್‌ ಆರೋಪಿಗಳ ಪತ್ತೆ ಹಚ್ಚುವ ತಂಡದಲ್ಲಿ ಕರ್ತವ್ಯ ನಿರ್ವಹಿಸಿದ್ದರು.