ಜೂನ್‌ 6 ರಂದು ಕಾಣೆಯಾಗಿದ್ದ ಮನೋಹರ್‌ ಮೃತದೇಹದ ಭಾಗಗಳು ಜೂನ್‌ 9 ರಂದು ಚರಂಡಿಯಲ್ಲಿ ಲಭ್ಯವಾಗಿದ್ದು ಪೋಸ್ಟ್‌ಮಾರ್ಟಂ ಬಳಿಕ ಭೀಕರ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ. 

ಧರ್ಮಶಾಲಾ (ಜೂನ್ 14, 2023): ಮುಸ್ಲಿಂ ಹುಡುಗಿಯನ್ನು ಪ್ರೀತಿಸಿದ ಕಾರಣಕ್ಕೆ 21 ವರ್ಷದ ಯುವಕನನ್ನು ಕೊಲೆ ಮಾಡಿ ಮೃತದೇಹವನ್ನು 7 ತುಂಡುಗಳಾಗಿ ಕತ್ತರಿಸಿ ಚರಂಡಿಗೆ ಬಿಸಾಡಿದ ಭೀಕರ ಘಟನೆ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ನಡೆದಿದೆ.

ಮನೋಹರ್‌ ಲಾಲ್‌ ಮೃತ ದುರ್ದೈವಿ. ಈತ ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಯುವತಿಯ ಮನೆಯ ಮೂರು ಜನರು ಸೇರಿ ಮನೋಹರ್‌ನನ್ನು ಥಳಿಸಿ ಬಳಿಕ ಕಲ್ಲುಗಳಿಂದ ಜಜ್ಜಿ ಕೊಲೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು 7 ತುಂಡುಗಳಾಗಿ ಕತ್ತರಿಸಿ ಚರಂಡಿಗೆ ಬಿಸಾಡಿದ್ದಾರೆ.

ಇದನ್ನು ಓದಿ: ಮದುವೆಯಾಗಿದ್ದ ಹಂತಕ ಸಾನೆ, ಸರಸ್ವತಿ: ಮನೋಜ್‌ ಕೆಂಪು ಕಣ್ಣಿಂದಲೇ ಬಯಲಾಯ್ತು ಕೊಲೆ!

ಜೂನ್‌ 6 ರಂದು ಕಾಣೆಯಾಗಿದ್ದ ಮನೋಹರ್‌ ಮೃತದೇಹದ ಭಾಗಗಳು ಜೂನ್‌ 9 ರಂದು ಚರಂಡಿಯಲ್ಲಿ ಲಭ್ಯವಾಗಿದ್ದು ಪೋಸ್ಟ್‌ಮಾರ್ಟಂ ಬಳಿಕ ಭೀಕರ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ. 

ಘಟನೆ ಸಂಬಂಧಿಸಿದಂತೆ ಬಾಲಕಿ ಸಹೋದರ ಶಬ್ಬೀರ್‌ ಸೇರಿದಂತೆ 3 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ .ಘಟನೆ ಕುರಿತು ಪ್ರಕರಣ ದಾಖಲಿಸಲಾಗಿದೆ. 

ಇದನ್ನೂ ಓದಿ: ಸಾರ್ವಜನಿಕರೆದುರೇ ಚಾಕು ಇರಿತ: ಮಹಿಳೆ ಕೂಗಿಕೊಂಡ್ರೂ ಯಾರೂ ಸಹಾಯಕ್ಕೆ ಬರಲಿಲ್ಲ; ವಿಡಿಯೋ ಸೆರೆ..!

ಘಟನೆಯ ವಿವರ..
ರುಖ್ಸಾನಾ ಎಂಬ ಮುಸ್ಲಿಂ ಹುಡುಗಿಯೊಂದಿಗೆ ಮನೋಹರ್ ಸಂಬಂಧ ಹೊಂದಿದ್ದ ಎಂದು ವರದಿಗಳು ಸೂಚಿಸುತ್ತವೆ. ಆಕೆಯ ಕುಟುಂಬ ಸದಸ್ಯರು ಈ ಸಂಬಂಧಕ್ಕೆ ಒಲವು ತೋರಿರಲಿಲ್ಲ. ಜೂನ್ 6 ರಂದು ಮನೋಹರ್ ಮನೆಗೆ ಹಿಂದಿರುಗುತ್ತಿದ್ದಾಗ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಆತನಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. 3 ದಿನಗಳ ನಂತರ, ಹಳ್ಳದಿಂದ ದುರ್ವಾಸನೆ ಬರುತ್ತಿರುವುದನ್ನು ಕೆಲವರು ಗಮನಿಸಿದರು. ಗೋಣಿಚೀಲದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ, ಬ್ಯಾಗ್ ಅನ್ನು ವಶಪಡಿಸಿಕೊಂಡರು ಮತ್ತು ಕೊಚ್ಚಿದ ಮೃತದೇಹ ಪತ್ತೆಯಾಗಿದೆ.

ಇನ್ನು, ಹಿಂದೂ ಸಂಘಟನೆಗಳು ಘಟನೆಯ ಬಗ್ಗೆ ತಿಳಿದು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿವೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 ಮತ್ತು ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಹೆಸರನ್ನು ಬಹಿರಂಗಪಡಿಸಲು ಪೊಲೀಸರು ನಿರಾಕರಿಸಿದ್ದರೂ, ಮಾಧ್ಯಮ ವರದಿಗಳು ಆರೋಪಿಗಳಲ್ಲಿ ಒಬ್ಬನನ್ನು ಶಬ್ಬೀರ್ ಎಂದು ಗುರುತಿಸಿವೆ. ಆತನನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಅವನು ರುಖ್ಸಾನಾ ಅವರ ಸಹೋದರ ಎಂದು ವರದಿಗಳು ಸೂಚಿಸುತ್ತವೆ.

ಇದನ್ನೂ ಓದಿ: ಅಪ್ರಾಪ್ತ ಬಾಲಕಿ ರೇಪ್‌ ಮಾಡಿ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಾಕಿದ ಗಾಯಕನ ಬಂಧನ