ಶಿವಮೊಗ್ಗದಲ್ಲಿ ಯುವಕನ ಮೇಲೆ ಅನ್ಯಕೋಮಿನವರಿಂದ ಹಲ್ಲೆ, ಮೃತ ಹರ್ಷನ ಕುಟುಂಬಸ್ಥರಿಗೆ ಬೆದರಿಕೆ!

ಸೋಮವಾರ ರಾತ್ರಿ ಇಲ್ಲಿನ ಭರ್ಮಪ್ಪ ನಗರದಲ್ಲಿ ಅನ್ಯಕೋಮಿನ ಕೆಲವರು ಮಚ್ಚು ಲಾಂಗುಗಳನ್ನು ಹಿಡಿದು ಬೆದರಿಕೆ ಒಡ್ಡಿದ್ದು, ಹಿಂದೂ ಯುವಕನೋರ್ವನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಮಾತ್ರವಲ್ಲ ಮೃತ ಹರ್ಷನ ಕುಟುಂಬಸ್ಥರಿಗೆ ಬೆದರಿಕೆ ಹಾಕಿದ ಘಟನೆ ಕೂಡ ನಡೆದಿದೆ.

Hindu man attacked by bike-borne assailants in shivamogga gow

ಶಿವಮೊಗ್ಗ (ಅ.25): ಸೋಮವಾರ ರಾತ್ರಿ ಇಲ್ಲಿನ ಭರ್ಮಪ್ಪ ನಗರದಲ್ಲಿ ಅನ್ಯಕೋಮಿನ ಕೆಲವರು ಮಚ್ಚು ಲಾಂಗುಗಳನ್ನು ಹಿಡಿದು ಬೆದರಿಕೆ ಒಡ್ಡಿದ್ದು, ಹಿಂದೂ ಯುವಕನೋರ್ವನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಉದ್ವಿಗ್ನಗೊಂಡಿದೆ. ಅನ್ಯಕೋಮಿನ ಯುವಕರ ಗುಂಪು ತಡರಾತ್ರಿ ಮಾರಕಾಸ್ತ್ರಗಳನ್ನು ಹಿಡಿದು ಬೈಕ್ನಲ್ಲಿ ಬಂದು ಆರ್‌ಎಸ್‌ಸ್, ಬಜರಂಗದಳದ ಗುಂಡಾಗಳೇ ಬರ್ರೋ ಎಂದು ಬೊಬ್ಬೆ ಹೊಡೆದಿದ್ದಾರೆ. ಮಾತ್ರವಲ್ಲ ಮೃತ ಹರ್ಷನ ಕುಟುಂಬಸ್ಥರಿಗೆ ಬೆದರಿಕೆ ಹಾಕಿದ ಘಟನೆ ಕೂಡ ನಡೆದಿದೆ. ಅನ್ಯಕೋಮಿನ ಯುವಕರ ಗುಂಪು ಘೋಷಣೆ ಕೂಗುತ್ತಾ ಬೈಕ್ ನಲ್ಲಿ ಬಂದು ಭರ್ಮಪ್ಪ ಬೀದಿಯ ಪ್ರಕಾಶ್ ಎಂಬ ಯುವಕನ  ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ವಿಷಯ ತಿಳಿದ ಸ್ಥಳೀಯ ಯುವಕರ ಗುಂಪೊಂದು ಹಲ್ಲೆ ನಡೆಸಿದ ಕಿಡಿಗೇಡಿಗಳನ್ನು ಹಿಂಬಾಲಿಸಿದರೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಹಲ್ಲೆಗೊಳಗಾದ ಪ್ರಕಾಶ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವಕನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಸದ್ಯ ಆತ ಚೇತರಿಸಿಕೊಂಡಿದ್ದಾನೆ. ಬೈಕ್ ನಲ್ಲಿ ಬಂದ ಆರೋಪಿಗಳು ಅವಾಚ್ಯ ಶಬ್ಧಗಳಿಂದ ನಿಂದಿಸಿ,  ಘೋಷಣೆಗಳನ್ನ ಕೂಗಿ ವಾಪಸ್ ಮರಳುವಾಗ ಯುವಕನಿಗೆ ಕಲ್ಲಿನಿಂದ ಹೊಡೆದು ತೆರಳಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸೀಗೆಹಟ್ಟಿ ಭಾಗದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಘಟನಾ ಸ್ಥಳಕ್ಕೆ ಎಸ್ ಪಿ ಮಿಥುನ್ ಕುರ್ಮಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ .

ಈಶ್ವರಪ್ಪ ಕಿಡಿ: ಮುಸ್ಲಿಂ ಸಮುದಾಯದ ಕೆಲ ಗೂಂಡಾಗಳಿಗೆ ಸರ್ಕಾರ ಮತ್ತು ಪೊಲೀಸ್ ಬಗ್ಗೆ ಭಯ ಇಲ್ಲದಂತಾಗಿದ್ದು,  ಪೊಲೀಸರು ಕೂಡಲೇ ಹರ್ಷನ ಮನೆ ಮುಂದೆ ಬೆದರಿಕೆ ಒಡ್ಡಿದ ಮತ್ತು ಪ್ರಕಾಶ್ ಎಂಬಾತನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಬೇಧಿಸಬೇಕು.
ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಒತ್ತಾಯಿಸಿದ್ದಾರೆ. ಪಿಎಫ್‌ಐ ಸಂಘಟನೆಯನ್ನು ಬ್ಯಾನ್ ಮಾಡಲಾಗಿದೆ. ಆದರೆ ಆ ಸಂಘಟನೆ ಇನ್ನು ಜೀವಂತವಾಗಿದೆಯೇ ಎನ್ನುವುದನ್ನು ಪೊಲೀಸರು ಪತ್ತೆ ಮಾಡಬೇಕಿದೆ. ಸಮಾಜದಲ್ಲಿ ಅಶಾಂತಿ ವಾತಾವರಣ ಹುಟ್ಟು ಹಾಕುವವರ ವಿರುದ್ಧ ರಾಜ್ಯ ಸರ್ಕಾರ  ಕಠಿಣ ಕ್ರಮ ತೆಗೆದುಕೊಳ್ಳಬೇಕು.

 ನಾವು ಸಂವಿಧಾನ ಅಡಿಯಲ್ಲಿ ಕೆಲಸ ಮಾಡಬೇಕಿದೆ. ಅವರ ರೀತಿಯಂತೆ ಮಚ್ಚು, ಲಾಂಗ್ ಹಿಡಿದುಕೊಂಡು ಹೋಗಲು ಸಾಧ್ಯವಿಲ್ಲ. ಈ ರೀತಿ ಗೂಂಡಾಗಿರಿ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಎನ್ ಐಎಗೆ ಸಾಕಷ್ಟು ಪ್ರಕರಣಗಳು ಹೋಗಿವೆ. ಪಿಎಫ್‌ಐ ಸಂಘಟನೆ ನಿಷೇಧ ಆಗಿದೆ. ಬರಮಪ್ಪ ನಗರದಲ್ಲಿ ನಡೆದಿರುವ ಘಟನೆಯನ್ನು ಯಾರು ಮಾಡಿದ್ದಾರೆ ತನಿಖೆಯಿಂದ ಹೊರಗೆ ಬರಬೇಕು. ಪಿಎಫ್‌ಐ ಅಥವಾ ಗೂಂಡಾಗಳು ಮಾಡಿದ್ದಾರಾ ಎಂದು ಪೊಲೀಸ್ ತನಿಖೆಯಿಂದ ಪತ್ತೆ ಮಾಡಬೇಕಿದೆ. 

 

Shivamogga Harsha Murder: ಹತ್ಯೆಯಾದ ಹರ್ಷನ ರಕ್ತಸಿಕ್ತ ಪೋಟೋ ಅಪ್‌ಲೋಡ್: ನಾಲ್ವರ ವಿರುದ್ಧ ಕೇಸ್‌

ಸಾವರ್ಕರ್ ಸಾಮ್ರಾಾಜ್ಯ ಕಾರ್ಯಕ್ರಮ ಶಾಂತಿಯುತವಾಗಿ ನಡೆದಿತ್ತು. ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಸಾವರ್ಕರ್ ಮೊಮ್ಮಗ ಬಂದು ಹೋಗಿದ್ದಾರೆ. ಯಾವುದೇ ಪ್ರಚೋದನಕಾರಿ ಭಾಷಣ ಮಾಡಿಲ್ಲ. ಆದರೂ ಕೆಲವರು ಹೇಡಿಗಳ ರೀತಿಯಂತೆ ಗಲಾಟೆ ಮಾಡಿದ್ದಾರೆ. ಈ ರೀತಿ ಹೇಡಿಗಳಂತೆ ವರ್ತಿಸುವವರಿಗೆ ಪೊಲೀಸರು ಕಾನೂನಿನ ಅಡಿಯಲ್ಲಿ ಸರಿಯಾದ ಪಾಠ ಕಲಿಸಬೇಕಿದೆ. 

 

Shivamogga Harsha Murder Case: ದೋಷಾರೋಪ ಪಟ್ಟಿ ಸಲ್ಲಿಸಿದ ರಾಷ್ಟೀಯ ತನಿಖಾ ತಂಡ

ಗೂಂಡಾಗಿರಿ ಮಾಡುವವರ ವಿರುದ್ಧ ಎನ್ ಕೌಂಟರ್ ಮಾಡಲು ಸಾಧ್ಯವಿಲ್ಲ ಎಂದು ಹರ್ಷ ಸಹೋದರಿ ಅಶ್ವಿನಿ ನೊಂದುಕೊಂಡು ಈ ರೀತಿ ಹೇಳಿಕೆ ನೀಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಕಠಿಣ ಕ್ರಮ ವಹಿಸುತ್ತಾರೆ ಎನ್ನುವ ವಿಶ್ವಾಸ ಇದೆ. ಪ್ರಕರಣದ ಬಗ್ಗೆ ಗೂಂಡಾಗಳಿಗೆ ಇನ್ನೂ ಬುದ್ದಿ ಬಂದಿಲ್ಲವೆಂಬುದು ಈ ಘಟನೆಗಳಿಂದ ಮತ್ತೆ ಸ್ಪಷ್ಟವಾಗುತ್ತಿದೆ . ಈ ಘಟನೆಯನ್ನ ಯಾವ ಪಕ್ಷಗಳು ಖಂಡಿಸದೆ ಇರುವುದು ಸಹ ದುರದೃಷ್ಟಕರ ಸಂಗತಿ ಸರಿ. ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಇದನ್ನ ಖಂಡಿಸದಿದ್ದರೆ ಸಂದೇಶ ಬೇರೆ ತರಹ ಹೋಗುತ್ತದೆ. ಇದನ್ನೇ ಕೆಲವು ಮುಸ್ಲಿಮರು ದುರ್ಬಳಕೆ ಮಾಡಿಕೊಂಡಂತಾಗುತ್ತದೆ. ಇದರಲ್ಲಿ ಯಾರು ಕೂಡ ರಾಜಕೀಯ ಮಾಡಬಾರದು. ಘಟನೆಯನ್ನು ಪ್ರತಿಯೊಬ್ಬರು ಖಂಡಿಸಬೇಕು. ಮುಸ್ಲಿಂ ಗೂಂಡಾಗಳಿಗೆ ಬುದ್ಧಿ ಹೇಳಬೇಕಿದೆ ಎಂದಿದ್ದಾರೆ.

Latest Videos
Follow Us:
Download App:
  • android
  • ios