Asianet Suvarna News Asianet Suvarna News

Bengaluru| ಸಾಲ ತೀರಿಸಲಾಗದೆ ಮುಖ್ಯ ಪೇದೆ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ

*  ಸಿಎಆರ್‌ನಲ್ಲಿ ಕರ್ತವ್ಯದಲ್ಲಿದ್ದಾಗಲೇ ನೇಣಿಗೆ ಶರಣು
*  ಸೇನೆಯಿಂದ ನಿವೃತ್ತರಾದ ಬಳಿಕ ಪೊಲೀಸ್‌ ಆಗಿದ್ದ ಕುಮಾರ್‌
*  ಸೇನಾ ಸೇವೆ ಆಧರಿಸಿ ಮುಖ್ಯ ಪೇದೆಯಾಗಿ ಮುಂಬಡ್ತಿ
 

Head Constable Committed Suicide in Bengaluru grg
Author
Bengaluru, First Published Nov 10, 2021, 6:34 AM IST
  • Facebook
  • Twitter
  • Whatsapp

ಬೆಂಗಳೂರು(ನ.10):  ಆರ್ಥಿಕ ಸಂಕಷ್ಟದಿಂದ ಜಿಗುಪ್ಸೆಗೊಂಡು ನಗರ ಸಶಸ್ತ್ರ ಮೀಸಲು ಪಡೆಯ (CAR) ಹೆಡ್‌ ಕಾನ್‌ಸ್ಟೇಬಲ್‌ವೊಬ್ಬರು(Head Constable) ಉಲ್ಲಾಳ ಹತ್ತಿರದ ಪಶ್ಚಿಮ ವಲಯ ಸಿಎಆರ್‌ ಡಿಸಿಪಿ ಕಚೇರಿ ಪಕ್ಕದ ಮೈದಾನದಲ್ಲಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಪಶ್ಚಿಮ ವಲಯ ಸಶಸ್ತ್ರ ಮೀಸಲು ಪಡೆಯ ಹೆಡ್‌ ಕಾನ್‌ಸ್ಟೇಬಲ್‌ ಕುಮಾರ್‌ (38) ಮೃತ(Death) ದುರ್ದೈವಿ. ಡಿಸಿಪಿ ಕಚೇರಿ ಪಕ್ಕದಲ್ಲಿರುವ ಮೈದಾನದಲ್ಲಿದ್ದ ಮರಕ್ಕೆ ಸೋಮವಾರ ತಡ ರಾತ್ರಿ ಕುಮಾರ್‌ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಗಳವಾರ ಬೆಳಗ್ಗೆ ಮರದಲ್ಲಿ ಕಾನ್‌ಸ್ಟೇಬಲ್‌ ಮೃತದೇಹ(Deadbody) ಕಂಡ ಸಾರ್ವಜನಿಕರು ಪೊಲೀಸರಿಗೆ(Police) ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

NEETಪರೀಕ್ಷೆಯಲ್ಲಿ ಎರಡನೇ ಬಾರಿ ಅನುತ್ತೀರ್ಣ: ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ!

ಮೃತ ಕುಮಾರ್‌ ಅವರು, ತಮ್ಮ ಕುಟುಂಬದ ಜತೆ ದುಬಾಸಿಪಾಳ್ಯದಲ್ಲಿ ನೆಲೆಸಿದ್ದರು. 2008ರಲ್ಲಿ ಸಿಎಆರ್‌ ಪಡೆಗೆ ಸೇರಿದ ಅವರು, ಬಳಿಕ ಸೇವಾ ಹಿರಿತನ ಆಧಾರದ ಮೇರೆಗೆ ಹೆಡ್‌ ಕಾನ್‌ಸ್ಟೇಬಲ್‌ ಆಗಿ ಮುಂಬಡ್ತಿ ಪಡೆದಿದ್ದರು. ಪ್ರಸುತ್ತ ಪಶ್ಚಿಮ ವಲಯದ ಸಿಎಎಆರ್‌ ಪಡೆಯಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದರು. ರಾತ್ರಿ ಕರ್ತವ್ಯದಲ್ಲಿದ್ದ ಕುಮಾರ್‌, ತಡರಾತ್ರಿ ಡಿಸಿಪಿ ಕಚೇರಿ ಸಮೀಪದ ಮೈದಾನದಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರ ಜೇಬಿನಲ್ಲಿ ಮರಣ ಪತ್ರ(Death Note) ಪತ್ತೆಯಾಗಿದೆ. ಇದರಲ್ಲಿ ತಾವು ಸಾಲ ತೀರಿಸಲಾಗದೆ ಬೇಸತ್ತು ಆತ್ಮಹತ್ಯೆಗೆ ನಿರ್ಧರಿಸಿರುವುದಾಗಿ ಮೃತರು ಉಲ್ಲೇಖಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.

ಆತ್ಮಹತ್ಯೆಗೆ ಯತ್ನಿಸಿದ ಒಂದೇ ಕುಟುಂಬದ ಐವರಲ್ಲಿ ನಾಲ್ವರು ಸಾವು

ಕೋಲಾರ:  ಮಗು ಅಪಹರಣ ಪ್ರಕರಣದಲ್ಲಿ ಪೊಲೀಸರಿಗೆ (Police) ಭಯಬಿದ್ದು ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ (Suicide) ಯತ್ನಿಸಿದ್ದು, ಇವರಲ್ಲಿ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಗರದಲ್ಲಿ ನ.8 ರಂದು ನಡೆದಿತ್ತು.

ಮೃತರನ್ನು ನಗರದ ಕಾರಂಜಿ ಕಟ್ಟೆ ಬಡಾವಣೆಯ ಮುನೇಶಪ್ಪ(70), ಬಾಬು (45) ಗಂಗೋತ್ರಿ(17)ನಾರಾಯಣಮ್ಮ(65) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಮಹಿಳೆ ಪುಷ್ಪ(33) ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ಭಾನುವಾರ ಸಂಜೆ ಇವರೆಲ್ಲರೂ ಒಟ್ಟಾಗಿ ವಿಷ (Poison) ಸೇವಿಸಿ ಆತ್ಮಹತ್ಯೆಗೆ ಯತ್ನಸಿದ್ದಾರೆ. ಇದನ್ನು ಕಂಡ ಸ್ಥಳೀಯರು ಈ ಐವರನ್ನೂ ಆರ್‌ಎಲ್‌ ಜಾಲಪ್ಪ ಆಸ್ಪತ್ರೆಗೆ (Hospital) ದಾಖಲು ಮಾಡಿದ್ದರು.

ಘಟನೆಯ ವಿವರ:  ಸತ್ಯ ಮತ್ತು ಸುಮಿತ್ರ ಎಂಬ ದಂಪತಿ ತಮ್ಮ 9 ತಿಂಗಳ ಹೆಣ್ಣು ಮಗುವನ್ನು ಗೀತಾ ಎಂಬುವರಿಗೆ ನೀಡಿದ್ದಾರೆ. ಹೆಣ್ಣು ಮಗು ಎಂಬ ಕಾರಣಕ್ಕೆ ಗೀತಾ ಅವರಿಗೆ ನೀಡಲಾಗಿತ್ತು ಎಂದು ಹೇಳಲಾಗಿದೆ.
ಆದರೆ ಗೀತಾ ಜತೆಗೆ ಪುಷ್ಪ ಸೇರಿಕೊಂಡು ಮಗುವನ್ನು ಬೇರೆಯವರಿಗೆ ಮಾರಾಟ ಮಾಡಿದ್ದರು. ಇದನ್ನು ಅರಿತ ಸತ್ಯ ಮತ್ತು ಸುಮಿತ್ರ ದಂಪತಿ ತಮ್ಮ ಮಗುವನ್ನು ವಾಪಸ್‌ ಕೊಡುವಂತೆ ಕೇಳಿದ್ದಾರೆ. ಆದರೆ ಗೀತಾ ಮಗುವನ್ನು ಹಿಂತಿರುಗಿಸದ ಕಾರಣ ದಂಪತಿ ನಗರದ ಮಹಿಳಾ ಪೊಲೀಸ್‌ ಠಾಣೆಗೆ (Woman Police Station) ದೂರು ನೀಡಿದ್ದರು.

ಪೊಲೀಸರು ಪುಷ್ಪ ಅವರನ್ನು ಠಾಣೆಗೆ ಕರೆಸಿ ನಾಲ್ಕು ದಿವಸದಲ್ಲಿ ಮಗುವನ್ನು ವಾಪಸ್‌ ಕೊಡುವಂತೆ ಎಚ್ಚರಿಕೆ ನೀಡಿದ್ದರು. ಆದರೆ ಮಗು ಪತ್ತೆಯಾಗಿರಲಿಲ್ಲ. ಇನ್ನು ಪೊಲೀಸರು (Police) ತಮ್ಮನ್ನು ಬಂಧಿಸಬಹುದು, ಇಲ್ಲವೇ ಕಿರುಕುಳ ನೀಡಬಹುದೆಂಬ ಭಯದಿಂದ ಮನೆಯಲ್ಲಿದ್ದ ಎಲ್ಲ ಐವರೂ ವಿಷ ಸೇವಿಸಿದ್ದರು ಎನ್ನಲಾಗಿದೆ.

ವಾಸ್ತವವಾಗಿ ಸತ್ಯ ಕೋಲಾರ (Kolar) ಸಮೀಪದ ಹೊನ್ನೇನಹಳ್ಳಿ ಗ್ರಾಮದಕ್ಕೆ ಸೇರಿದವರಾಗಿದ್ದು ಅವರ ಪತ್ನಿ ಸುಮಿತ್ರ ಹೊಸೂರು ಗ್ರಾಮದವರು. ಇವರಿಬ್ಬರೆ ವಿವಾಹವಾಗಿತ್ತೇ, ಇಲ್ಲವೇ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ. ತನಿಖೆಯ ಬಳಿಕವೇ ಈ ಪ್ರಕರಣಕ್ಕೆ ಕಾರಣಗಳು ಹೊರಬರಲಿವೆ ಎಂದು ಜಿಲ್ಲಾ ಎಸ್ಪಿ ಡೆಕ್ಕಾ ಕಿಶೋರ್‌ ಬಾಬು ತಿಳಿಸಿದರು.

ಪತ್ನಿಯೊಂದಿಗೆ ವಿಡಿಯೋ ಕಾಲ್​ನಲ್ಲಿ ಮಾತನಾಡುವಾಗಲೇ ಜೈಲು ವಾರ್ಡರ್ ನೇಣಿಗೆ ಶರಣು

ಸಾಮೂಹಿಕವಾಗಿ ಅತ್ಮಹತ್ಯೆಗೆ ಯತ್ನಿಸಿದ್ದರು 

ಪೊಲೀಸ್ (Karnataka Police) ವಿಚಾರಣೆ ಮತ್ತು ಮರ್ಯಾದೆಗೆ ಅಂಜಿ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ (Suicide))ಯತ್ನಿಸಿರುವ ಪ್ರಕರಣ ವರದಿಯಾಗಿದೆ.  ಕೋಲಾರ (Kolar) ನಗರದ ಕಾರಂಜಿಕಟ್ಟೆ ಬಡಾವಣೆಯ 4ನೇ ಕ್ರಾಸ್ ನಲ್ಲಿ ಘಟನೆ ನಡೆದಿದೆ.  ಮುನಿಯಪ್ಪ ಎಂಬುವರ ಕುಟುಂಬ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದೆ.

ತಂದೆ-ತಾಯಿ, ಮಗಳು, ಅಳಿಯ ಹಾಗೂ ಮೊಮ್ಮಗಳು ವಿಷ ಕುಡಿದು ಆತ್ಮಹತ್ಯೆಗೆ ಯತ್ನ ನಡೆಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಐವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.  ಮುನೇಶಪ್ಪ(75) ನಾರಾಯಣಮ್ಮ (70), ಬಾಬು(45) ಪುಷ್ಪ(33) ಗಂಗೋತ್ರಿ (17)  ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಐವರು. ಮುನೇಶಪ್ಪ ಪುತ್ರಿ ಪುಷ್ಪ  ಬೇರೆಯೊಬ್ಬರ ಗಂಡು ಮಗುವನ್ನು ಮಾರಾಟ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದರು. ಮಹಿಳಾ ಠಾಣೆ ಪೋಲಿಸರು ಈ ಬಗ್ಗೆ ವಿಚಾರಣೆ ನಡೆಸಿದ್ದರು. ಕೇಸ್‌ ದಾಖಲು ಹಾಗೂ ಮಾನಕ್ಕೆ ಅಂಜಿ ತಂದೆತಾಯಿ, ಮಗಳು, ಅಳಿಯ ಹಾಗೂ ಮೊಮ್ಮಗಳು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
 

Follow Us:
Download App:
  • android
  • ios