Asianet Suvarna News Asianet Suvarna News

ಬೆಂಗಳೂರು: ತನ್ನ ಬಳಿ ಬುಲೆಟ್‌ ಇಲ್ಲದ್ದಕ್ಕೆ ಮೂರು ಬೈಕ್‌ಗೆ ಬೆಂಕಿ ಇಟ್ಟ ಭೂಪ..!

ತನಗೆ ರಾಯಲ್ ಎನ್‌ಫೀಲ್ಡ್ ದ್ವಿಚಕ್ರ ವಾಹನದ ಬಗ್ಗೆ ತುಂಬಾ ಆಸೆ ಇತ್ತು. ಆದರೆ, ಖರೀದಿಸಲು ಸಾಧ್ಯವಾಗದೆ ಹತಾಶೆಗೊಂಡಿದ್ದೆ. ಹೀಗಾಗಿ ಪಿಜಿ ಆವರಣದಲ್ಲಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಗಿ ತಪ್ಪೊಪ್ಪಿಕೊಂಡ ಆರೋಪಿ 

He set three bikes on fire because he did not have Royal Enfield Bike in Bengaluru grg
Author
First Published Sep 25, 2024, 9:45 AM IST | Last Updated Sep 25, 2024, 9:45 AM IST

ಬೆಂಗಳೂರು(ಸೆ.25):  ತನ್ನ ಬಳಿ ರಾಯಲ್ ಎನ್‌ಫೀಲ್ಡ್ ದ್ವಿಚಕ್ರ ವಾಹನ ಇಲ್ಲದಿರುವ ಬಗ್ಗೆ ಹತಾಶೆಗೊಂಡು ಪೇಯಿಂಗ್ ಗೆಸ್ಟ್ (ಪಿಜಿ) ಆವರಣ ದಲ್ಲಿ ನಿಲುಗಡೆ ಮಾಡಿದ್ದ ಮೂರು ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಪರಾರಿಯಾಗಿದ್ದ ಆರೋಪಿಯನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಮಹಾಲಕ್ಷ್ಮಿ ಲೇಔಟ್ ನಿವಾಸಿ ಪುಲಿತ್ (25) ಬಂಧಿತ. ಆರೋಪಿಯು ಸೆ.19ರ ಮುಂಜಾನೆ ವೇಣುಗೋಪಾಲ ನಗರದ ಎಚ್‌ ಎಂಟಿ ಲೇಔಟ್ನನ ಪಿಜಿವೊಂದರ ಆವರಣದಲ್ಲಿ ನಿಲುಗಡೆ ಮಾಡಿದ್ದ ರಾಯಲ್ ಎನ್‌ಫೀಲ್ಟ್‌ ಆಕ್ಟಿವಾ ಮತ್ತು ಪ್ಯಾಷನ್‌ ಪ್ರೋ ಬೈಕ್‌ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ. ಈ ಸಂಬಂಧ ಪಿಜಿ ನಿವಾಸಿ ದೀಪಾಂಕು ಆಗರ್ವಾಲ್ ನೀಡಿದ ದೂರಿನ ಮೇರೆಗೆ ಪ್ರಕರಣದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ದಾವಣಗೆರೆ: ಬಾರ್‌ನಲ್ಲಿ ವ್ಯಕ್ತಿ ಕೊಲೆಗೆ ಅನೈತಿಕ ಸಂಬಂಧ ಕಾರಣ

ಏನಿದು ಪ್ರಕರಣ?:

ಯಶವಂತಪುರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ದೀಪಾಂಶು ಅಗರ್ವಾಲ್ ಕಳೆದ ಒಂದು ವರ್ಷದಿಂದ ಎಚ್‌ಎಂಟಿ ಲೇಔಟ್‌ನ ಪಜಲ್ಸ್ ಲಿವಿಂಗ್ ಬ್ರವಾಡೋ ಹೌಸ್ ಪಿಜಿಯಲ್ಲಿ ನೆಲೆಸಿದ್ದಾನೆ. ದೀಪಾಂಶು ಕಳೆದ ಜುಲೈನಲ್ಲಿ ಸೆಕೆಂಡ್ ಹ್ಯಾಂಡ್ ರಾಯಲ್‌ ಎನ್‌ಫೀಲ್ಟ್‌ ವಾಹನ ಖರೀದಿಸಿದ್ದ. ಸೆ.18ರಂದು ರಾತ್ರಿ 11 ಗಂಟೆಗೆ ಪಿಜಿ ಅವರಣದಲ್ಲಿ ದ್ವಿಚಕ್ರ ವಾಹನ ನಿಲುಗಡೆ ಮಾಡಿ ಪಿಜಿಗೆ ತೆರಳಿ ನಿದ್ದೆಗೆ ಜಾರಿದ್ದ. ಸೆ.19ರ ಮುಂಜಾನೆ ಸುಮಾರು 2 ಗಂಟೆಗೆ ಪಿಜಿ ಮುಂದೆ ಜನ ಕೂಗಾಡುವ ಶಬ್ದವಾಗಿದೆ. ಬಳಕ ನಿದ್ದೆಯಿಂದ ಎಚ್ಚರಗೊಂಡು ಹೊರಗೆ ಬಂದುನೋಡಿದಾಗ, ರಾಯಲ್ ಎನ್‌ಫೀಲ್ಡ್ ದ್ವಿಚಕ್ರ ವಾಹನ ಸೇರಿದಂತೆ ಮೂರು ದ್ವಿಚಕ್ರ ವಾಹನಗಳು ಬೆಂಕಿಯಿಂದ ಹೊತ್ತಿ ಉರಿಯುತ್ತಿರುವುದು ಕಂಡು ಬಂದಿದೆ. ಬಳಿಕ ಸ್ಥಳೀಯರೊಂದಿಗೆ ಸೇರಿಕೊಂಡು ಮರಳು ಹಾಗೂ ನೀರು ಹಾಕಿ ಬೆಂಕಿ ನಂದಿಸಲು ಪ್ರಯ ತ್ನಿಸಿದ್ದಾರೆ. ಬಳಿಕ ಸುದ್ದಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದರು. ಘಟನೆಯಲ್ಲಿ ರಾಯಲ್ ಎನ್ ಫೀಲ್ಡ್, ಪ್ಯಾಷನ್ ಪ್ರೋ ದ್ವಿ ಚಕ್ರ ವಾಹನಗಳು ಬಹುತೇಕ ಸುಟ್ಟಿದ್ದವು. ಆಕ್ಟಿವಾ ಶೇ.50ರಷ್ಟು ಹಾನಿಯಾಗಿತ್ತು.

ಬೆಂಗಳೂರು: ಹುಡುಗಿ ವಿಚಾರಕ್ಕೆ ಸ್ನೇಹಿತನ ಮೇಲೆ ಟಾಯ್ಲೆಟ್ ಕ್ಲೀನರ್ ಎರಚಿ ಪರಾರಿ..!

ಬೈಕ್‌ಗೆ ಇಟ್ಟ ಬೆಂಕಿಯಲ್ಲೇ ಸಿಗರೆಟ್ ಹಚ್ಚಿದ 

ದೀಪಾಂಶು ನೀಡಿದ ದೂರಿನ ಮೇರೆಗೆ ತನಿಖೆ ಆರಂಭಿಸಿದ್ದ ಪೊಲೀಸರು, ಘಟನಾ ಸ್ಥಳದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ, ಸೆ.19ರಂದು ಮುಂಜಾನೆ ಸುಮಾರು 1.40ಕ್ಕೆ ಅಪರಿಚಿತ ವ್ಯಕ್ತಿ ಪಿಜಿ ಆವರಣಕ್ಕೆ ಬಂದಿದ್ದು, ರಾಯಲ್ ಎನ್‌ಫೀಲ್ಡ್‌ ದ್ವಿಚಕ್ರ ವಾಹನ ದಿಂದ ಪೆಟ್ರೋಲ್ ಸುರಿದುಕೊಂಡು ಬಳಿಕ ಆ ಪೆಟ್ರೋಲ್ ಅನ್ನು ದ್ವಿಚಕ್ರ ವಾಹನಗಳ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ಅದೇ ಬೆಂಕಿಯಲ್ಲಿ ಸಿಗರೆಟ್ ಹಚ್ಚಿಕೊಂಡು ಸ್ಥಳದಿಂದ ಪರಾರಿಯಾಗಿರುವುದು ಸೆರೆಯಾಗಿತ್ತು.

ಹತಾಶೆಯಿಂದ ಬೈಕ್‌ಗಳಿಗೆ ಬೆಂಕಿ 

ಸಿಸಿಟಿವಿ ದೃಶ್ಯಾವಳಿ ಆಧರಿಸಿ, ಆರೋಪಿ ಪುಲ್ಕಿತ್ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಆರೋಪಿಯು ತನಗೆ ರಾಯಲ್ ಎನ್‌ಫೀಲ್ಡ್ ದ್ವಿಚಕ್ರ ವಾಹನದ ಬಗ್ಗೆ ತುಂಬಾ ಆಸೆ ಇತ್ತು. ಆದರೆ, ಖರೀದಿಸಲು ಸಾಧ್ಯವಾಗದೆ ಹತಾಶೆಗೊಂಡಿದ್ದೆ. ಹೀಗಾಗಿ ಪಿಜಿ ಆವರಣದಲ್ಲಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

Latest Videos
Follow Us:
Download App:
  • android
  • ios