ಯಾದಗಿರಿ: ಕಿರುಕುಳ ಕೊಡ್ತಿದ್ದಾನೆಂದು ಸಾಲ ಕೊಟ್ಟವನನ್ನೇ ಕೊಂದ!

ಸಾಲ ಕೇಳುವ ನೆಪದಲ್ಲಿ ಕಿರುಕುಳ ಕೊಡುತ್ತಿದ್ದಾನೆಂದು ಬೇಸತ್ತು ಸಾಲ ಕೊಟ್ಟವನನ್ನೇ ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ರಾಜನಕೊಳೂರು ಗ್ರಾಮದ ಜಮೀನಿನಲ್ಲಿ ನಡೆದಿದೆ.

He killed the lender for harassing him at yadgir rav

ಯಾದಗಿರಿ (ಫೆ.19): ಸಾಲ ಕೇಳುವ ನೆಪದಲ್ಲಿ ಕಿರುಕುಳ ಕೊಡುತ್ತಿದ್ದಾನೆಂದು ಬೇಸತ್ತು ಸಾಲ ಕೊಟ್ಟವನನ್ನೇ ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ರಾಜನಕೊಳೂರು ಗ್ರಾಮದ ಜಮೀನಿನಲ್ಲಿ ನಡೆದಿದೆ.

ರಾಜಾಸಾಬ(38) ಸಾಲಗಾರನಿಂದ ಕೊಲೆಯಾದ ದುರ್ದೈವಿ. ರಾಜಾಸಾಬನಿಂದ ಸಾಲ ಪಡೆದಿದ್ದ ವಿರೇಶ ಕೊಲೆ ಮಾಡಿರುವ ಆರೋಪಿ. ರಾಜಾಸಾಬನ ಬಳಿ ಸಾಲ ಪಡೆದಿದ್ದ ವಿರೇಶ. ಬಳಿಕ ಸಾಲ ವಾಪಸ್ ಕೊಡಲು ವಿಳಂಬವಾಗಿದ್ದಕ್ಕೆ ರಾಜಾಸಾಬ ಕಿರುಕುಳ ಕೊಡ್ತಿದ್ದನಂತೆ. ದಿನನಿತ್ಯ ಹೀಗೆ ಕಿರುಕುಳ ಕೊಡ್ತಿರೋದಕ್ಕೆ ಬೇಸತ್ತು ರಾಜಾಸಾಬನ ಕೊಲೆ ಮಾಡಿರುವ ವಿರೇಶ.

Assembly election: ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಶಾಸಕನ ಹತ್ಯೆಗೆ ಸ್ಕೆಚ್

ಸಾಲ ಕೊಡುತ್ತೇನೆಂದು ತಮ್ಮ ಊರು ಬಲಶೆಟ್ಟಿಹಾಳಗೆ ಕರೆಸಿಕೊಂಡಿದ್ದ ವಿರೇಶ. ಸಾಲ ಕೊಡುತ್ತೇನೆಂದ ವಿರೇಶನ ಮಾತು ಕೇಳಿ ಬಲಶೆಟ್ಟಿಹಾಳಗೆ ಹೋಗಿದ್ದ ರಾಜಾಸಾಬ. ಈ ವೇಳೆ ಕೊಡಲಿಯಿಂದ ರಾಜಾಸಾಬನ ಕುತ್ತಿಗೆ ಹಾಗೂ ತಲೆಗೆ ಹೊಡೆದು ತೀವ್ರವಾಗಿ ಹಲ್ಲೆ ಮಾಡಿ ಊರಿಗೆ ಬಂದಿದ್ದ ವಿರೇಶ. ಬಳಿಕ ಹಲ್ಲೆ ಮಾಡಿರುವ ಬಗ್ಗೆ ಮನೆಯವರಿಗೆ ತಿಳಿಸಿದ್ದಾನೆ. ಘಟನಾ ಸ್ಥಳಕ್ಕೆ ಕುಟುಂಬಸ್ಥರು ಹೋದಾಗ ರಕ್ತದ ಮಡುವಿನಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ರಾಜಾಸಾಬ. ಕುತ್ತಿಗೆ, ತಲೆಗೆ ಬಲವಾದ ಏಟು ಬಿದ್ದಿದ್ದರಿಂದ ತೀವ್ರ ರಕ್ತಸ್ರಾವ ಆಗಿದ್ರಿಂದ ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯೆ ರಾಜಾಸಾಬ ಸಾವು.

ಘಟನೆ ಮಾಹಿತಿ ತಿಳಿದ ಬಳಿಕ ಹುಣಸಗಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆರೋಪಿ ವಿರೇಶನ ವಶಕ್ಕೆ ಪಡೆದ ಪೊಲೀಸರು. ಸದ್ಯ ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ವಿಚಾರಣೆ ಮುಂದುವರಿಸಿದ್ದಾರೆ.

ಇಬ್ಬರು ಯುವಕರ ಕಗ್ಗೊಲೆ: ದೊಡ್ಡಬೆಳವಂಗಲ ಉದ್ವಿಗ್ನ

ದೊಡ್ಡಬಳ್ಳಾಪುರ: ರಾಜಕೀಯ ನಾಯಕರೊಬ್ಬರ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಕ್ರಿಕೆಟ್‌ ಪಂದ್ಯಾವಳಿ ವೇಳೆ ಕ್ಷುಲ್ಲಕ ಕಾರಣಕ್ಕೆ ನಡೆದ ಘರ್ಷಣೆಯಲ್ಲಿ ಇಬ್ಬರು ಯುವಕರ ಬರ್ಬರ ಹತ್ಯೆ ನಡೆದ ತಾಲೂಕಿನ ದೊಡ್ಡಬೆಳವಂಗಲದಲ್ಲಿ ಶನಿವಾರ ಉದ್ವಿಗ್ನ ಸ್ಥಿತಿ ಮುಂದುವರೆದಿತ್ತು.

ಅಮಾಯಕ ಯುವಕರ ಹತ್ಯೆ ನಡೆದ ಸ್ಥಳಕ್ಕೆ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ನಂತರ ಮೃತ ಯುವಕರ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಕೊಲೆ ಆರೋಪಿಗಳನ್ನು 24 ಗಂಟೆಗಳ ಒಳಗೆ ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದರು.

Bengaluru News: ಒಂಟಿ ಮಹಿಳೆ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌; ಬರ್ತಡೇ ಗಿಫ್ಟ್‌ಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ..!

ದೊಡ್ಡಬೆಳವಂಗಲ ಗ್ರಾಮದಲ್ಲಿ ಜೋಡಿ ಕೊಲೆಯಿಂದ ಪ್ರಕ್ಷುಬ್ದ ವಾತಾವರಣ ಶನಿವಾರವೂ ಮುಂದುವರಿದಿತ್ತು. ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಹೊಸೂರು-ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದರು. ಕೊಲೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಒಂದು ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆ ನಡೆಸಲಾಯಿತು.

Latest Videos
Follow Us:
Download App:
  • android
  • ios