ಸಾಲ ಬಾಧೆ ತಾಳಲಾರದೇ ಹಾವೇರಿ ರೈತ ಆತ್ಮಹತ್ಯೆ
ಸಾಲ ಬಾಧೆ ತಾಳಲಾರದೇ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೃಷಿ ಸಚಿವರ ತವರು ಜಿಲ್ಲೆ ಹಾವೇರಿಯಲ್ಲಿ ನಡೆದಿದೆ. ಶೇಕಪ್ಪ ಚಂದ್ರಪ್ಪ ಲಮಾಣಿ( 41) ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ.
ಹಾವೇರಿ( ನ.22): ಸಾಲ ಬಾಧೆ ತಾಳಲಾರದೇ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೃಷಿ ಸಚಿವರ ತವರು ಜಿಲ್ಲೆ ಹಾವೇರಿಯಲ್ಲಿ ನಡೆದಿದೆ. ಶೇಕಪ್ಪ ಚಂದ್ರಪ್ಪ ಲಮಾಣಿ( 41) ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ.
ರಾಣೆಬೆನ್ನೂರು ತಾಲೂಕಿನ ಹುಲ್ಲತ್ತಿ ತಾಂಡಾ (Hullatti Tanda) ಗ್ರಾಮದ ನಿವಾಸಿಯಾಗಿರೋ ಶೇಖಪ್ಪ (Shekhappa) ಇತ್ತೀಚೆಗೆ ಸುರಿದ ಮಳೆಯಿಂದಾದ ಬೆಳೆ ಹಾನಿಯಿಂದಲೂ ಕಂಗೆಟ್ಟಿದ್ದರು ಎನ್ನಲಾಗಿದೆ. ನಿನ್ನೆ ತಡ ರಾತ್ರಿ ವಿಷ (Poison) ಸೇವಿಸಿದ್ದಾರೆ. ಸುದ್ದಿ ತಿಳಿದ ಗ್ರಾಮಸ್ಥರು ರಾಣೆಬೆನ್ನೂರ ಸಾರ್ವಜನಿಕ ಆಸ್ಪತ್ರೆಗೆ (Hospital) ದಾಖಲಿಸಿದ್ದಾರೆ. ಪ್ರಥಮ ಚಿಕೆತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ (Davanagere) ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಇಂದು ಬೆಳಿಗ್ಗೆ 3.10 ಚಿಕಿತ್ಸೆ ಫಲಕಾರಿಯಾಗದೆ ಕೊನೆ ಉಸಿರೆಳೆದಿದ್ದಾರೆ. ಮೃತ ರೈತನಿಗೆ (Farmer)ಪತ್ನಿ ಮತ್ತು ಎರಡು ಮಕ್ಕಳಿದ್ದಾರೆ. ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳೆಗಾಗಿ ಸಾಲ: ಕೃಷಿ ಕಾರ್ಯಕ್ಕಾಗಿ ಹಾಗೂ ಇತರೆ ಕಾರಣಗಳಿಗೆ ರೈತ ಶೇಖಪ್ಪ ಸಾಲ (Loan) ಮಾಡಿಕೊಂಡಿದ್ದನು. ಹೇಗಿದ್ದರೂ ಈ ವರ್ಷ ಉತ್ತಮ ಮಳೆಯಾಗಿದ್ದು, ಬೆಳೆಯೂ (Crop) ಉತ್ತಮವಾಗಿ ಬಂದು ಸಾಲ ತೀರಿಸುವ ನಂಬಿಕೆಯಲ್ಲಿದ್ದನು. ಆದರೆ, ಇತ್ತೇಚೆಗೆ ಸುರಿದ ಅತಿಯಾದ ಮಳೆಯೇ (Heavy Rain) ಈತನ ಬದುಕಿಗೆ ಕೊಳ್ಳಿ ಇಟ್ಟಿದೆ. ಭಾರಿ ಪ್ರಮಾಣದ ಮಳೆಗೆ ಬೆಳೆ ಹಾನಿಯಾಗಿದ್ದು, ಸಂಪೂರ್ಣ ನಾಶವಾಗಿದೆ. ಬೆಳೆ ಕೈಗೆ ಸಿಗದೇ ಸಾಲ ತೀರಲು ಸಾಧ್ಯವಾಗುವುದಿಲ್ಲ ಎಂದರಿತು ವಿಷ ಸೇವಿಸಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.