ಬೆಳಗಾವಿ(ಜು.03): ಇನ್ಸಾಸ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಯೋಧನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ನಗರದಲ್ಲಿ ಇಂದು(ಶುಕ್ರವಾರ) ನಡೆದಿದೆ. ಹರಿಯಾಣ ಮೂಲದ ಅಮೀರ್ ಖಾನ್(24) ಎಂಬುವರೇ ಆತ್ಮಹತ್ಯೆಯ ಮಾಡಿಕೊಂಡ ಯೋಧನಾಗಿದ್ದಾರೆ.  

ಬೆಳಗಾವಿ ತಾಲೂಕಿನ ಸಾಂಬ್ರಾದಲ್ಲಿರುವ ಏರ್‌ಫೋರ್ಸ್ ಟ್ರೇನಿಂಗ್ ಸ್ಕೂಲ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಮೀರ್ ಖಾನ್ ಅವರು ಗಾರ್ಡ್ ರೂಮ್‌ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 

ಜೀವನದಲ್ಲಿ ಜಿಗುಪ್ಸೆ: ನೇಣಿಗೆ ಶರಣಾದ ಆಶಾ ಕಾರ್ಯಕರ್ತೆ

ಗುಂಡು ಹಾರಿಸಿಕೊಂಡ ತಕ್ಷಣವೇ ಯೋಧನನ್ನ ಬೆಳಗಾವಿ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆಗೂ ಮುನ್ನ ಯೋಧ ಅಮೀರ್ ಖಾನ್ ಮೃತಪಟ್ಟಿದ್ದಾರೆ. ಯೋಧನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.