Asianet Suvarna News Asianet Suvarna News

ಗಂಡನ ತೊರೆದು ಬಾ ಎಂದು ಮಹಿಳೆಗೆ ಯುವಕನ ಕಿರುಕುಳ; ದೂರು ದಾಖಲು

ಪದೇ ಪದೆ ಕರೆ ಮಾಡಿ ಮಹಿಳೆಯ ಜತೆ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬ, ಪತಿಯನ್ನು ಬಿಟ್ಟು ಬರಲು ಒತ್ತಾಯ ಮಾಡುತ್ತಿದ್ದ. ಒಪ್ಪದಿದ್ದಾಗ ಮಹಿಳೆ ಬರುತ್ತಿದ್ದ ಅಟೋ ಅಡ್ಡ ಗಟ್ಟಿ ಅಟೋದಲ್ಲಿ ಆತನೂ ಕುಳಿತು ಅಸಭ್ಯವಾಗಿ ವರ್ತಿದ್ದಾನೆ. ಈತನ ಕಾಟ ತಾಳಲಾರದೆ ಮಹಿಳೆಯು ಪೀಣ್ಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Harassment of woman in auto Complaint against the youth at bengaluru rav
Author
First Published Dec 12, 2023, 6:52 AM IST

ಪೀಣ್ಯ ದಾಸರಹಳ್ಳಿ‌ (ಡಿ.12) :  ಪದೇ ಪದೆ ಕರೆ ಮಾಡಿ ಮಹಿಳೆಯ ಜತೆ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬ, ಪತಿಯನ್ನು ಬಿಟ್ಟು ಬರಲು ಒತ್ತಾಯ ಮಾಡುತ್ತಿದ್ದ. ಒಪ್ಪದಿದ್ದಾಗ ಮಹಿಳೆ ಬರುತ್ತಿದ್ದ ಅಟೋ ಅಡ್ಡ ಗಟ್ಟಿ ಅಟೋದಲ್ಲಿ ಆತನೂ ಕುಳಿತು ಅಸಭ್ಯವಾಗಿ ವರ್ತಿದ್ದಾನೆ. ಈತನ ಕಾಟ ತಾಳಲಾರದೆ ಮಹಿಳೆಯು ಪೀಣ್ಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ನೀನು ನನಗೆ ಬೇಕು, ನಿನ್ನ ಜೊತೆಯಲ್ಲಿ ನಾನು ಮಲಗಬೇಕು ಅಷ್ಟೇ... ಹೀಗೆಂದು 25 ವರ್ಷದ ವಿವಾಹಿತ ಮಹಿಳೆಗೆ ಭಗ್ನ ಪ್ರೇಮಿ ಮನು ನಿರಂತರವಾಗಿ ಮಹಿಳೆಗೆ ಕಾಟ ಕೊಡುತ್ತಿದ್ದಾನೆ. ಬೆಂಗಳೂರು ಉತ್ತರ ತಾಲೂಕಿನ ನೆಲಗದರನಹಳ್ಳಿಯಲ್ಲಿ ಇರುವ ಫೈನಾನ್ಸ್‌ ಸಂಸ್ಥೆಯೊಂದರಲ್ಲಿ ಸಂತ್ರಸ್ತ ಮಹಿಳೆ ಕೆಲಸ ಮಾಡುತ್ತಿದ್ದಾರೆ. ಒಡವೆಗಳನ್ನು ಗಿರವಿ ಇಡಲು ಮತ್ತು ಬಿಡಿಸಿಕೊಳ್ಳಲು ಆರೋಪಿ ಮನು ಬರುತ್ತಿದ್ದ. ಈ ವೇಳೆ ಸ್ವಲ್ಪಮಟ್ಟಿಗೆ ಸಲುಗೆಯಾಗಿದ್ದು, ಬಳಿಕ ಅವರಿಬ್ಬರಿಗೂ ಸ್ನೇಹವಾಗಿತ್ತು.

ದಿನನಿತ್ಯ ಕುಡಿದು ಬಂದು ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ; ಕಾಮುಕ ಶಿಕ್ಷಕನ ವರ್ಗಾವಣೆಗೆ ಗ್ರಾಮಸ್ಥರು ಪಟ್ಟು!

ಮುಂದೆ ಮಹಿಳೆಯ ಮೊಬೈಲ್​ ನಂಬರ್‌ ಪಡೆದು ಪದೇ ಪದೆ ಕರೆ ಮಾಡಿ ಮನು ಆ ಮಹಿಳೆಯ ಜತೆ ಮಾತನಾಡುತ್ತಿದ್ದ. ತನಗೆ ಮದುವೆ ಆಗಿದೆ ಅಂದರೂ ಪತಿಯನ್ನು ಬಿಟ್ಟು ಬರಲು ಒತ್ತಾಯ ಮಾಡುತ್ತಿದ್ದ. ಒಪ್ಪದೆ ಇದ್ದಾಗ ಮಹಿಳೆ ಬರುತ್ತಿದ್ದ ಅಟೋ ಅಡ್ಡ ಗಟ್ಟಿ ಅಟೋದಲ್ಲಿ ಆತನೂ ಕುಳಿತು ಅಸಭ್ಯ ವರ್ತನೆ ತೋರಿದ್ದಾನೆ. ಈ ವೇಳೆ ಅಟೋ ಚಾಲಕನಿಗೂ ಧಮ್ಕಿ ಹಾಕಿದ್ದಾನೆ.

ಮಹಿಳೆಯ ಜೊತೆ ಫೋಟೋ ತಗೆದು ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ. ನಡೆದ ವಿಷಯವನ್ನು ಮಹಿಳೆಯು ತನ್ನ ಪತಿಗೆ ತಿಳಿಸಿದ್ದಾರೆ. ತನ್ನ ಪತ್ನಿಯ ತಂಟೆಗೆ ಬಾರದಂತೆ ಮನುಗೆ ಪತಿ ಎಚ್ಚರಿಕೆ ನೀಡಿದ್ದಾರೆ. ಆದರೂ ಮನು ಮಹಿಳೆಯ ಪತಿಗೂ ಜೀವಬೆದರಿಕೆ ಹಾಕಿದ್ದಾನೆ. ಮಹಿಳೆಯ ಜೊತೆಗಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆಯೊಡ್ಡಿದ್ದಾನೆ. ಇದೀಗ ಭಗ್ನ ಪ್ರೇಮಿ ವಿರುದ್ಧ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮದುವೆಗೆ ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ತಾಯಿ-ಮಗಳೊಂದಿಗೆ ಅಸಭ್ಯ ವರ್ತನೆ; ಮಚ್ಚಿನಿಂದ ಹಲ್ಲೆ!

Follow Us:
Download App:
  • android
  • ios