Asianet Suvarna News Asianet Suvarna News

ದಿನನಿತ್ಯ ಕುಡಿದು ಬಂದು ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ; ಕಾಮುಕ ಶಿಕ್ಷಕನ ವರ್ಗಾವಣೆಗೆ ಗ್ರಾಮಸ್ಥರು ಪಟ್ಟು!

ಮದ್ಯ ಸೇವಿಸಿ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಸಿದ ಶಿಕ್ಷಕನ ವಿರುದ್ಧ ಶಾಲೆಯ ಎದುರು ಪೋಷಕರು ಪ್ರತಿಭಟನೆ ನಡೆಸಿದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ರಂಟವಾಳ ಗ್ರಾಮದಲ್ಲಿ ನಡೆದಿದೆ.

A teacher Bad behavior with female students case Parents protest against him at tumakuru rav
Author
First Published Nov 28, 2023, 11:05 AM IST

ತುಮಕೂರು (ನ.28) : ಮದ್ಯ ಸೇವಿಸಿ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಸಿದ ಶಿಕ್ಷಕನ ವಿರುದ್ಧ ಶಾಲೆಯ ಎದುರು ಪೋಷಕರು ಪ್ರತಿಭಟನೆ ನಡೆಸಿದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ರಂಟವಾಳ ಗ್ರಾಮದಲ್ಲಿ ನಡೆದಿದೆ.

ಶಿಕ್ಷಕ ಲಕ್ಷ್ಮೀ ಕಾಂತ್ ವಿರುದ್ಧ ಗ್ರಾಮಸ್ಥರ ಆರೋಪ. ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ರಂಟವಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿರುವ ಲಕ್ಷ್ಮೀಕಾಂತ್, ದಿನನಿತ್ಯ ಕುಡಿದುಬಂದು ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ ತೋರುತ್ತಿರುವ ಶಿಕ್ಷಕ. ವಿದ್ಯಾರ್ಥಿನಿಯರಿಗೆ ಹಣದ ಆಸೆ ತೋರಿಸುವುದು, ನಾನು ನಿಮ್ಮ ತಂದೆ ಸ್ನೇಹಿತರೆಂದು ಹೇಳಿ ಮಕ್ಕಳ ದೇಹ ಸ್ಪರ್ಶಿಸುವುದು ಖಾಸಗಿ ಅಂಗ ಸ್ಪರ್ಶಿಸುವುದು ಮಾಡುತ್ತಿದ್ದ ವಿಕೃತ ಶಿಕ್ಷಕ.

ಮೆಟ್ರೋದಲ್ಲಿ ಭಿಕ್ಷೆ ಬೇಡಿ ದಂಡ ಕಟ್ಟಿದ್ದಾಯ್ತು, ಇದೀಗ ದೇಣಿಗೆ ಸಂಗ್ರಹಿಸಲು ಹೋಗಿ ತಗ್ಲಾಕೊಂಡ ಮತ್ತೊರ್ವ ಮಹಿಳೆ!

 ಶಿಕ್ಷಕನ ಇಂಥ ವರ್ತನೆಯಿಂದ ವಿದ್ಯಾರ್ಥಿನಿಯರು ಶಾಲೆಗೆ ಹೋಗಲು ಹೆದರುತ್ತಿರುವ ಮಕ್ಕಳು. ಶಿಕ್ಷಕನ ವರ್ತನೆ ಬಗ್ಗೆ ಪೋಷಕರ ಬಳಿ ಅಳಲು ತೋಡಿಕೊಂಡಿರುವ ವಿದ್ಯಾರ್ಥಿನಿಯರು. ಹೀಗಾಗಿ ಕಾಮುಕ ಶಿಕ್ಷಕನ ವರ್ಗಾವಣೆ ಮಾಡುವಂತೆ ರಂಟವಾಳ ಗ್ರಾಮಸ್ಥರು ಶಾಲೆ ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.

Follow Us:
Download App:
  • android
  • ios