ಕಾಲೇಜಿನಲ್ಲಿ ಒಬ್ಬ, ಇನ್ಸ್ ಟಾಗ್ರಾಮ್ ನಲೊಬ್ಬ ನ ಜೊತೆ ಲವ್ವಿ ಡವ್ವಿ- ಬ್ಲಾಕ್‌ಮೇಲ್‌ನಿಂದ ಯುವತಿ ಸೂಸೈಡ್!
ಇಬ್ಬರು ಲವರ್ ಗಳ ಕಿರುಕಳದಿಂದ ಬೇಸತ್ತ ಆಂಧ್ರದ ಟೆಕ್ಕಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ, ಬಾಗೇಪಲ್ಲಿಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ (ಜೂ.30)- ಇಬ್ಬರು ಲವರ್ ಗಳ ಕಿರುಕಳದಿಂದ ಬೇಸತ್ತ ಆಂಧ್ರದ ಟೆಕ್ಕಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ, ಬಾಗೇಪಲ್ಲಿಯಲ್ಲಿ ನಡೆದಿದೆ.
ಆಂಧ್ರದ ಧರ್ಮಾವರಂ ಮೂಲದ 22 ವರ್ಷದ ಯುವತಿ ನಿಹಾರಿಕ ಚಿತ್ರಾವತಿ(Niharika) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಿಹಾರಿಕಾ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಬಿಟೆಕ್ ಪದವಿ ಮುಗಿಸಿ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ನಿಹಾರಿಕಾ ಕಳೆದ ಶನಿವಾರ ಚಿತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕೊಡಗು: ವಿರಾಜಪೇಟೆಯಲ್ಲಿ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ, ಕಾರಣ ನಿಗೂಢ?
ಇಬ್ಬರೊಂದಿಗೆ ಲವ್ ಸ್ಟೋರಿ ಹೇಗೆ
ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ ಟೆಕ್ ಪದವಿ ವ್ಯಾಸಂಗ ಮಾಡುತ್ತಿದ್ದ ವೇಳೆ ಚೌವ ವಂಶಿದಾರ್ ಎಂಬ ಯುವಕನ ಜೊತೆ ಪ್ರೀತಿ ಪ್ರೇಮದಲ್ಲಿ ಓಡಾಡುತ್ತಿದ್ದಳು. ಇದರ ಬೆನ್ನೆಲ್ಲೇ ನಿಹಾರಿಕಾ ಇನ್ಸ್ಟಾಗ್ರಾಮ್(Instagram) ನಲ್ಲಿ ಪರಿಚಯ ಮಾಡಿಕೊಂಡ ಅಜಯ್ ಎಂಬಾತನ ಜೊತೆಯೂ ಬೆಂಗಳೂರಿನಲ್ಲಿ ಸುತ್ತಾಡಿಕೊಂಡು ಅಜಯ್ ಜೊತೆ ಪ್ರೀತಿಯಲ್ಲಿ ಮುಳುಗಿದ್ದಳು.
ಕೆಲ ದಿನಗಳ ಹಿಂದೆ ನಿಹಾರಿಕಾ ಇಬ್ಬರು ಯುವಕರ ಜೊತೆಯೂ ಓಡಾಟ ಮಾಡಿದ ಫೋಟೋಗಳು ವೈರಲ್ ಆಗಿದೆ. ಹೀಗಾಗಿ ಇಬ್ಬರು ಯುವಕರು ನಿಹಾರಿಕಗೆ ತಮ್ಮ ಬಳಿ ಇರುವ ಫೋಟೋಗಳನ್ನು ಕುಟುಂಬದವರಿಗೆ ತೋರಿಸುತ್ತೇನೆ ಎಂದು ಬ್ಲಾಕ್ ಮೇಲ್ ಮಾಡಿದ್ದಾರೆ. ಜೊತೆಗೆ ಪ್ರತಿದಿನ ಕೂಡ ಹಿಂಸೆ ನೀಡುತ್ತಿದ್ದರು. ಇದರಿಂದ ಬೇಸತ್ತ ನಿಹಾರಿಕಾ ಊರಿಗೆ ಬರುವುದಾಗಿ ಹೇಳಿ ಬಾಗೇಪಲ್ಲಿಯ ಚಿತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆತ್ಮಹತ್ಯೆಗೂ ಮೊದಲೇ ಕುಟುಂಬಕ್ಕೆ ವಿಡಿಯೋ ಕಾಲ್ ಮೂಲಕ ಸುಳಿವು
ಬೆಂಗಳೂರಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬರುವುದಾಗಿ ನಿಹಾರಿಕಾ ಕುಟುಂಬಕ್ಕೆ ತಿಳಿಸಿದಳು. ಅದರಂತೆ ಕಳೆದ ಶನಿವಾರ ನಿಹಾರಿಕಾ ಬೆಂಗಳೂರಿನಿಂದ ಧರ್ಮಾವರಂ ಬಸ್ ನಲ್ಲಿ ಬರುತ್ತಿದ್ದ ವೇಳೆ ಕುಟುಂಬದವರಿಗೆ ವಿಡಿಯೋ ಕಾಲ್ ಮಾಡಿ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ಬಳಿಕ ನಾಲ್ಕು ದಿನಗಳು ಕಳೆದರು ನಿಹಾರಿಕ ಮನೆಗೆ ಬರಲಿಲ್ಲ ಇದರಿಂದ ಪೋಷಕರು ಕೂಡ ಭಯ ಬೀತರಾಗಿ ಹುಡುಕಾಟ ನಡೆಸಿದ್ದರು.
24 ಪುಟಗಳ ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ: ಪ್ರಿಯಕರನಿಗೆ 'ಐ ಲವ್ ಯೂ' ಸಂದೇಶ!
ಬಾಗೇಪಲ್ಲಿಯ ಚಿತ್ರಾವತಿ ನದಿಯ ಬಳಿ ಯುವತಿಯ ಶವ ಪತ್ತೆಯಾಗಿತ್ತು ವಿಚಾರ ನಡೆಸಿದಾಗ ಇದು ನಿಹಾರಿಕಾ ಮೃತ ದೇಹ ಎಂದು ಪತ್ತೆಯಾಗಿದೆ. ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ