Gadag: ಶ್ರಾವಣ ಶನಿವಾರವೇ ಹನುಮ ಮೂರ್ತಿಯನ್ನು ಕಳ್ಳತನ ಮಾಡಿದ ಕಿಡಿಗೇಡಿಗಳು
ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ವ್ಯಪ್ತಿಯಲ್ಲಿನ ಆಂಜನೇಯ ಮೂರ್ತಿಯನ್ನ, ಕಿಡಿಗೇಡಿಗಳು ಶ್ರಾವಣ ಶನಿವಾರದ ಬೆಳಗಿನ ಜಾವ ಕಳ್ಳತನ ಮಾಡಿದ್ದಾರೆ. ಶ್ರಾವಣ ಶನಿವಾರದ ಬೆಳಗಿನ ಪೂಜೆಗೆ ಅಂತಾ ಅರ್ಚಕರು ಹನುಮನ ಕಟ್ಟೆಗೆ ತೆರಳಿದ್ದ ಸಮಯ ಪ್ರಕರಣ ಬೆಳಕಿಗೆ ಬಂದಿದೆ.
ಗದಗ (ಆ.06): ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ವ್ಯಪ್ತಿಯಲ್ಲಿನ ಆಂಜನೇಯ ಮೂರ್ತಿಯನ್ನ, ಕಿಡಿಗೇಡಿಗಳು ಶ್ರಾವಣ ಶನಿವಾರದ ಬೆಳಗಿನ ಜಾವ ಕಳ್ಳತನ ಮಾಡಿದ್ದಾರೆ. ಶ್ರಾವಣ ಶನಿವಾರದ ಬೆಳಗಿನ ಪೂಜೆಗೆ ಅಂತಾ ಅರ್ಚಕರು ಹನುಮನ ಕಟ್ಟೆಗೆ ತೆರಳಿದ್ದ ಸಮಯ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮಾರುತಿ ದೇವಸ್ಥಾನದ ಕಮಿಟಿ ಸದಸ್ಯರು ಸೇರಿ ಸಭೆ ಮಾಡಿದ್ದು, ಸಂಜೆಯೊಳಗೆ ಮೂರ್ತಿಯನ್ನ ವಾಪಾಸ್ ತಂದಿಡದಿದ್ದರೆ ಪೊಲೀಸ್‌ಗೆ ದೂರು ಕೊಡೋದಾಗಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿ ವೀಡಿಯೋ ಹರಿಬಿಟ್ಟ ಕಮಿಟಿ ಸದಸ್ಯರು, ಐತಿಹಾಸಿಕ ಮೂರ್ತಿಯನ್ನ ಕಳ್ಳತನ ಮಾಡಲಾಗಿದೆ. ಪೂಜೆಗೆ ಬಂದಿರುವ ಭಕ್ತರಿಗೆ ಸ್ವಾಮಿ ವಿಗ್ರಹ ಇಲ್ಲದ್ದನ್ನ ಕಂಡು ಅತೀವ ನೋವಾಗಿದೆ. ಸಂಜೆಯೊಳಗೆ ವಿಗ್ರಹವನ್ನ ತಂದಿಡಬೇಕೆಂದು ಕೇಳಿದ್ದಾರೆ. ಇಲ್ಲವಾದಲ್ಲಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
Gadag: ಅಸಾಮಾನ್ಯ ಹೊಟ್ಟೆ, ಅಜ್ಜನ ನರಕಯಾತನೆ: ವೃದ್ಧನಿಗೆ ಬೇಕಿದೆ ಸಹಾಯ
ಉದ್ಭವ ಮೂರ್ತಿಗೆ ವಿಗ್ರಹ ಆಕಾರ ನೀಡಿದ್ದ ಗ್ರಾಮಸ್ಥರು: ಸೂರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನೂರಾರು ವರ್ಷದ ಹಿಂದೆ ಹನುಮ ಕಲ್ಲು ರೂಪದಲ್ಲಿ ಉದ್ಭವಿಸಿದ್ದಂತೆ. ಇತ್ತೀಚೆಗೆ ಹನುಮನ ಮೂರ್ತಿ ರೂಪ ನೀಡಲಾಗಿತ್ತು. ಇಷ್ಟಾರ್ಥ ಸಿದ್ಧಿಯಿಂದಾಗಿ ಹನುಮ ದೇವಾಲಯ ಸುತ್ತಲ ಊರಿನಗೆ ಹೆಚ್ಚು ಪ್ರಚಲಿತವಾಗಿತ್ತು. ಸದ್ಯ ಮೂರ್ತಿ ಕಳ್ಳತನವಾಗಿರೋದು ಭಕ್ತರಲ್ಲಿ ದಿಗ್ಭ್ರಮೆ ಉಂಟು ಮಾಡಿದೆ.
ಸದ್ಯ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ವಿಗ್ರಹ ನಾಪತ್ತೆಯಾದ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಭಕ್ತರ ಭಾವನೆ ಜೊತೆ ಆಟ ವಾಡ್ತಿರೋ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿರೋ ಗ್ರಾಮಸ್ಥರು, ಮೂರ್ತಿಯನ್ನ ವಾಪಾಸ್ ತಂದಿಡುವಂತೆ ಮನವಿ ಮಾಡಿದ್ದಾರೆ. ದೇವಸ್ಥಾನ ಕಮಿಟಿ ಮನವಿಗೆ ಕಿಡಿಗೇಡಿಗಳ ಮನಸ್ಸು ಕರಗುತ್ತಾ, ಸಂಜೆಯೊಳಗೆ ಆಂಜನೆಯ ಮೂರ್ತಿ ವಾಪಾಸ್ ಬರುತ್ತಾ? ಅನ್ನೋದು ಸದ್ಯದ ಪ್ರಶ್ನೆ.
ದೇವಸ್ಥಾನ ಹುಂಡಿ ಒಡೆದು ಹಣ ಕಳ್ಳತನ: ದೇವಸ್ಥಾನದ ಕಬ್ಬಿಣದ ಹುಂಡಿಯನ್ನು ಮುರಿದು ಖದೀಮರು ಹುಂಡಿ ಹಣ ಕದ್ದು ಪರಾರಿಯಾಗಿರುವ ಘಟನೆ ಪಟ್ಟಣದ ಕುಂಬಾರ ಓಣಿಯ ನೀಲಗಂಗಾ ದೇವಸ್ಥಾನದಲ್ಲಿ ಬುಧವಾರ ಸಂಭವಿಸಿದೆ. ಕಳೆದ ಎರಡು ವರ್ಷಗಳಿಂದ ಕೊರೋನಾದಿಂದ ಜಾತ್ರೆ ನಡೆಯದ ಕಾರಣ ಹುಂಡಿಯಲ್ಲಿ ಹೆಚ್ಚು ಹಣ ಸಂಗ್ರಹವಾಗಿರುತ್ತದೆ ಎಂದು ತಿಳಿದ ಕಳ್ಳರು ಈ ಕೃತ್ಯ ಎಸಗಿದ್ದಾರೆ.
Gadag: ಒಂದು ರೂಪಾಯಿಗೆ ಕೆ.ಜಿ ಟೊಮೆಟೋ: ರಸ್ತೆಗೆ ಸುರಿದು ರೈತರ ಆಕ್ರೋಶ
ಮಂಗಳವಾರ ರಾತ್ರಿ ಕಳ್ಳರು ದೇವಾಲಯದ ಹುಂಡಿಗಳನ್ನು ಒಡೆದು ಹುಂಡಿಯಲ್ಲಿನ ಹಣ ದೋಚಿ ಪರಾರಿಯಾಗಿದ್ದಾರೆ. ಕಳ್ಳರ ಕೈಚಳಕ ಪೊಲೀಸ್ ತನಿಖೆ ಮೂಲಕ ತಿಳಿದು ಬರಬೇಕಿದೆ. ದೇವಸ್ಥಾನ ಪೂಜಾರಿ ಮಲ್ಲಯ್ಯ ಕೆಲೂರ ಅಂದಾಜು . 25 ಸಾವಿರ ಹಣ ಕಳ್ಳತನವಾಗಿದೆ ಎಂದು ದೂರು ನೀಡಿದ್ದಾರೆ. ಪಿಎಸ್‌ಐ ಸೋಮನಗೌಡ ಗೌಡ್ರ, ಕ್ರೈಂ ಪಿಎಸ್‌ಐ ಎಸ್.ಆರ್. ನಾಯಕ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.