ಬೆಂಗಳೂರು, [ಜ.04]:  ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಿ ಸಾಮಾನ್ಯ ಜನರನ್ನ ಯಾಮಾರಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಪ್ರಸಾದ್ ಎನ್ನುವ ನಕಲಿ ಬ್ಯಾಂಕ್ ಅಧಿಕಾರಿಯನ್ನು ಬೆಂಗಳೂರಿನ ಹಲಸೂರು ಗೇಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೆಸರಿಗೆ ಮಸಾಜ್ ಪಾರ್ಲರ್ : ಒಳಗೆ ವಿದೇಶಿ ಯುವತಿಯರನ್ನಿಟ್ಟುಕೊಂಡು ದಂಧೆ

 ಸಾಮಾನ್ಯ ಜನರನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಸೈಬರ್ ಕ್ರಿಮಿನಲ್ ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ಮಾತಿನ ವರಸೆಯಿಂದ ಐದಾರು ನಿಮಿಷದಲ್ಲಿ ಹಣ ಎಗರಿಸುತ್ತಿದ್ದ. 

ಬ್ಯಾಂಕ್ ಅಧಿಕಾರಿ ರೀತಿ ತಾಂತ್ರಿಕ ಮಾಹಿತಿ ನೀಡಿ ಜನರನ್ನು ಖೆಡ್ಡಾಗೆ ಕೆಡವುತ್ತಿದ್ದ.  ರವಿ ಎಂಬುವರಿಗೆ ಬ್ಯಾಂಕ್ ಅಧಿಕಾರಿ ಎಂದು ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆದ ಆರೋಪಿ ಒಂದೇ ಗಂಟೆಯಲ್ಲಿ 5 ಬಾರಿ OTP  ಪಡೆದು 97 ಸಾವಿರ ರೂ. ಟ್ರಾನ್ಸ್ ಫರ್ ಮಾಡಿಕೊಂಡಿದ್ದಾನೆ. 

ಇದೇ ರೀತಿ 10ಕ್ಕೂ ಹೆಚ್ಚು ಜನರಿಗೆ  ಲಕ್ಷ ಲಕ್ಷ ಹಣ ಎಗರಿಸಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಆರೋಪಿಯನ್ನು ಹಲಸೂರು ಗೇಟ್ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹೀಗಾಗಿ ನೀವು ಸೈಬರ್ ಕ್ರಿಮಿನಲ್ ಗಳಿಂದ ಎಚ್ಚರದಿಂದ ಇರುವುದು ಒಳಿತು. 

ಯಾರೇ ಫೋನ್ ಮಾಡಿ ನಿಮ್ಮ ಕ್ರೆಡಿಟ್ ಕಾರ್ಡ್ ಅಥವಾ ಬ್ಯಾಂಕಿನ ಮಾಹಿತಿ ಕೇಳಿದ್ರೆ ಕೊಡಬಾರದು. ಮೋಸ ಹೋಗುವರು ಇರುವ ತನಕ ಮೋಸ ಮಾಡುವವರು ಇರುತ್ತಾರೆ.