Asianet Suvarna News Asianet Suvarna News

ಗುವಾಹಟಿಯಲ್ಲಿ ಬಾಂಬ್ ಇಟ್ಟು ಬಂದಿದ್ದ ಶಂಕಿತ ಉಗ್ರ ಬೆಂಗಳೂರಿನಲ್ಲಿ ಬಂಧನ!

ಬೆಂಗಳೂರು ಗ್ರಾಮಾಂತರದಲ್ಲಿ ಅಸ್ಸಾಂ ಎನ್ಐಎ ಅಧಿಕಾರಿಗಳು ಶಂಕಿತ ಉಗ್ರನನ್ನು ಬಂಧಿಸಿದ್ದಾರೆ. ಬಂಧಿತನನ್ನು ಗಿರಿಶ್ ಬೋರಾ ಅಲಿಯಾಸ್‌ ಗೌತಮ್ ಎಂದು ಗುರುತಿಸಲಾಗಿದ್ದು, ಈತ ಉಲ್ಫಾ ಸಂಘಟನೆಗೆ ಸೇರಿದ್ದಾನೆ ಎಂದು ತಿಳಿದುಬಂದಿದೆ. 

guwahati bomb case Suspected terrorist arrested in bengaluru gow
Author
First Published Sep 26, 2024, 3:25 PM IST | Last Updated Sep 26, 2024, 3:25 PM IST

ಬೆಂಗಳೂರು (ಸೆ.26):  ಬೆಂಗಳೂರಿನಲ್ಲಿ ಮತ್ತೋರ್ವ ಶಂಕಿತ ಉಗ್ರನ ಬಂಧಿಸಲಾಗಿದೆ. ಅಸ್ಸಾಂ ಎನ್ಐಎ ಅಧಿಕಾರಿಗಳಿಂದ ಶಂಕಿತ ಉಗ್ರನನ್ನು ನಿನ್ನೆ ಬಂಧಿಸಲಾಗಿದೆ. ಬಂಧಿತ ಶಂಕಿತ ಉಗ್ರನನ್ನು ಗಿರಿಶ್ ಬೋರಾ ಅಲಿಯಾಸ್‌ ಗೌತಮ್ ಎಂದು ಗುರುತಿಸಲಾಗಿದೆ.

ಬೆಂಗಳೂರು ಗ್ರಾಮಾಂತರದ ಜಿಗಣಿಯಲ್ಲಿ ಶಂಕಿತ ಉಗ್ರನನ್ನು ಬಂಧಿಸಲಾಗಿದ್ದು, ಈತ ಉಲ್ಫಾ ಸಂಘನೆಗೆ ಸೇರಿದ್ದಾನೆ ಎಂದು ತಿಳಿದುಬಂದಿದೆ. ಗುವಾಹಟಿಯಲ್ಲಿ IED ಬಾಂಬ್ ಇಟ್ಟು ಬೆಂಗಳೂರಿಗೆ ಬಂದಿದ್ದ. ಫ್ಯಾಮಿಲಿ ಸಮೇತ ಬೆಂಗಳೂರಿಗೆ ಬಂದು ವಾಸ ಮಾಡುತ್ತಿದ್ದ. ಮಾತ್ರವಲ್ಲ  ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿಯಾಗಿ ಕೆಲಸಕ್ಕೆ ಸೇರಿದ್ದ. 
ಗೌತಮ್ ಎನ್ನುವ ಹೆಸರಲ್ಲಿ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದ.

ಈ ಬಗ್ಗೆ  ಪಕ್ಕಾ ಮಾಹಿತಿ ಆಧರಿಸಿ ಶಂಕಿತ ಉಗ್ರನನ್ನು ಅಸ್ಸಾಂ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಕಳೆದ ಆಗಷ್ಟ್ ನಲ್ಲಿ ಗುವಾಹಟಿಯಲ್ಲಿ ಬಾಂಬ್ ಇಟ್ಟಿದ್ದ. ಸುಮಾರು ಐದು IED ಬಾಂಬ್ ಗಳನ್ನ ಇಟ್ಟು ಬೆಂಗಳೂರಿನ ಜಿಗಣಿಗೆ ಬಂದು ವಾಸವಿದ್ದ. ಇಲ್ಲಿಯೂ ಒಂದಷ್ಟು ಪ್ಲಾನ್ ಗಳನ್ನ ನಡೆಸ್ತಿದ್ದ ಎಂದು ಶಂಕೆ ಇದೆ.

ಬಂಧಿತನಿಂದ ಮೊಬೈಲ್ ಮತ್ತು ಒಂದಷ್ಟು ದಾಖಲೆಗಳು ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಎನ್ಐಎ ಅಧಿಕಾರಿಗಳು  ಅಸ್ಸಾಂಗೆ ಕರೆದೊಯ್ದಿರೋದ್ದಾರೆ.

Latest Videos
Follow Us:
Download App:
  • android
  • ios