ಅಹಮದಾಬಾದ್( ಜ.  13)  ಉಚಿತವಾಗಿ ಏನಾದರೂ ಸಿಗುತ್ತದೆ ಎಂದರೆ ನನಗೆ ಒಂದಿರಲಿ..ನಮ್ಮ ಅಪ್ಪನಿಗೆ ಒಂದು ಇರಲಿ ಎಂಬ ಮಾತು ಬಹಳ ಹಿಂದಿನಿಂದ ಚಾಲ್ತಿಯಲ್ಲಿದೆ. ಆದರೆ ಇದೆ ಫ್ರೀ ಮಾತಿಗೆ ಮರುಳಾದ ಯುವತಿ ಸಂಕಷ್ಟಕ್ಕೆ ಸಿಲುಕಿದ್ದಾಳೆ.. ಇದು ಒಳ ಉಡುಪಿನ ಸುದ್ದಿ...

ಡಿಸೆಂಬರ್  3   ರಂದು ಯುವತಿಯ ಮೊಬೈಲಕ್ ಗೆ ಸಂದೇಶವೊಂದು ಬಂದಿದೆ.  ನೋಂದಣಿ ಮಾಡಿಕೊಂಡರೆ ಉಚಿತವಾಗಿ ಇನ್ನರ್ ವೇರ್ ಸಿಗಲಿದೆ ಎಂದು ಹೇಳಲಾಗಿದೆ. ಇದನ್ನು ನಂಬಿದ ಯುವತಿ ನೋಂದಣಿ ಮಾಡಿಕೊಂಡು ತನ್ನ ಪೋನ್ ನಂಬರ್ ನ್ನು ನೀಡಿದ್ದಾಳೆ. ಕೆಲ ದಿನಗಳ ನಂತರ ಮತ್ತೆ ಸಂದೇಶವೊಂದು ಬಂದಿದ್ದು ನಿಮ್ಮ ಪೋಟೋ ಕಳುಹಿಸಿಕೊಟ್ಟರೆ ಒಳಉಡುಪು ಸಿಗಲಿದೆ ಎಂದಿದ್ದಾರೆ.

ಹೀಗಾದರೆ ಬ್ರಾ ಬದಲಾಯಿಸಲೇಬೇಕು

ಇದೆಲ್ಲ ನಡೆದು ಒಂದು  ವಾರದ ನಂತರ ಮತ್ತೊಂದು ಸಂದೇಶ ಬಂದಿದ್ದು ಯುವತಿ ಶಾಕ್ ಆಗಿದ್ದಾರೆ. ನಿಮ್ಮ ನಗ್ನ ಪೋಟೋ  ಕಳಿಸಿಕೊಟ್ಟರೆ ಉಚಿತವಾಗಿ ಇನ್ನರ್ ವೇರ್ ಸಿಗಲಿದೆ ಎಂದು ಆಫರ್ ಇಡಲಾಗಿದೆ. ಯುವತಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಬೇರೆ ಬೇರೆ  ನಂಬರ್ ನಿಂದ ಅಶ್ಲೀಲ ಮೆಸೇಜ್ ಗಳು  ಬರಲು ಆರಂಭಿಸಿದ್ದು ಯುವತಿ ಪೋನ್ ನಂಬರ್ ಬದಲಾಯಿಸಬೇಕಾದ ಸ್ಥಿತಿ ಬಂದಿದೆ.