Gadag Crime: ಶಿಕ್ಷಕಿಯ ಮೇಲಿನ ಮೋಹದಾಸೆಗೆ ಆಕೆಯ ಮಗನನ್ನು ಕೊಂದ ಅತಿಥಿ ಶಿಕ್ಷಕ

ಹದ್ಲಿ ಗ್ರಾಮದಲ್ಲಿ ವಿದ್ಯಾರ್ಥಿ ಕೊಲೆ ಮಾಡಿದ್ದ ಅತಿಥಿ ಶಿಕ್ಷಕ ಬಂಧನ
ತ್ರಿವಳಿ ಪ್ರೇಮಕಥೆಗೆ ಬಲಿಯಾದ ಅಮಾಯಕ ಮಗು
ಮದುವೆಯಾಗಿದ್ದರೂ ಲವ್ವಿ- ಡವ್ವಿ ನಡೆಸುತ್ತಿದ್ದ ಶಿಕ್ಷಕರು

Guest teacher who killed her son for his infatuation with the teacher sat

ಗದಗ (ಡಿ.21): ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಭರತ್‌ನನ್ನು ಹತ್ಯೆ ಮಾಡಿ, ಅತಿಥಿ ಶಿಕ್ಷಕಿ ಗೀತಾ ಬಾರಕೇರ ಹಾಗೂ ಸಹಶಿಕ್ಷಕ ಸಂಗನಗೌಡ ಪಾಟೀಲ ಅವರ ಮೇಲೆ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿ ಮುತ್ತಪ್ಪ ಹಡಗಲಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಮುತ್ತಪ್ಪ ನರಗುಂದ ಪಟ್ಟಣ ಸಮೀಪ ಇರುವ ರೋಣ ಕ್ರಾಸ್‌ ಬಳಿ ಮಂಗಳವಾರ ಪೊಲೀಸರ ಬಲೆಗೆ ಬಿದ್ದಿದ್ದಾನೆ. 'ಹದ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿದ್ದ ಮುತ್ತಪ್ಪ ಹಡಗಲಿ ಹಾಗೂ ಗೀತಾ ಬಾರಕೇರ ಅವರ ನಡುವೆ ಮೊದಲಿನಿಂದಲೂ ಸಲುಗೆ ಇತ್ತು. ಶಾಲೆಯಿಂದ ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಗೀತಾ ಬಾರಕೇರ ಸಹ ಶಿಕ್ಷಕ ಸಂಗನಗೌಡ ಪಾಟೀಲ ಜತೆಗೆ ಆಪ್ತವಾಗಿ ನಡೆದುಕೊಂಡಿದ್ದು, ಇವರಿಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು. ಎಂದು ಪೊಲೀಸರು ತಿಳಿಸಿದ್ದಾರೆ.

ಅತಿಥಿ ಶಿಕ್ಷಕಿಯೊಂದಿಗೆ ಸಲುಗೆ ಇತ್ತು: ವಿದ್ಯಾರ್ಥಿ ಸಾವಿಗೆ ಕಾರಣನಾದ ಆರೋಪಿ ಮುತ್ತಪ್ಪನನ್ನು ಬಂಧಿಸಲಾಗಿದೆ. ಆತನನ್ನು ವಿಚಾರಿಸಲಾಗಿ, ಗೀತಾ ಮತ್ತು ನನ್ನ ನಡುವೆ ಸಲುಗೆ ಇತ್ತು ಎಂದು ತಿಳಿಸಿದ್ದಾನೆ. ಅಲ್ಲದೇ, ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಆಕೆ ಸಹ ಶಿಕ್ಷಕನೊಂದಿಗೆ ಆಪ್ತವಾಗಿ ನಡೆದುಕೊಂಡಿದ್ದು ಸಿಟ್ಟು ತರಿಸಿತ್ತು. ಈ ಕಾರಣದಿಂದಲೇ, ಗೀತಾಗೆ ಸಂಬಂಧಪಟ್ಟವರು ಯಾರೇ ಸಿಕ್ಕರೂ ಹೊಡೆದು ಹಾಕಬೇಕು ಎಂದು ನಿರ್ಧರಿಸಿದ್ದಾಗಿ ಆರೋಪಿ ತಿಳಿಸಿದ್ದಾನೆ ಎಂದು ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವ ಪ್ರಕಾಶ್‌ ದೇವರಾಜು ತಿಳಿಸಿದ್ದಾರೆ.

Gadag Crime: ವಿದ್ಯಾರ್ಥಿ ಕೊಲೆಗೈದ ಅತಿಥಿ ಶಿಕ್ಷಕನ ಬಂಧನ

ವಾಟ್ಸಾಪ್‌ ಚಾಟಿಂಗ್‌ ಮಾಹಿತಿ ಲಭ್ಯ: ಮುತ್ತಪ್ಪ ಮತ್ತು ಗೀತಾ ನಡುವೆ ನಡೆದಿರುವ ವಾಟ್ಸ್‌ಆ್ಯಪ್‌ ಚಾಟ್‌, ಫೋಲ್‌ ಕಾಲ್‌ ಹಿಸ್ಟರಿ ಸಿಕ್ಕಿದೆ. ಆದರೆ, ಆರೋಪಿ ಹೇಳುವಂತೆ ಇವರಿಬ್ಬರ ನಡುವೆ ಸಲುಗೆ ಇತ್ತೇ ಎಂಬುದು ದೃಢಪಡಲು ಇನ್ನಷ್ಟು ಸಾಕ್ಷಿ, ಮಾಹಿತಿ ಕಲೆ ಹಾಕಬೇಕಿದೆ. ಈಗ ಸಿಕ್ಕಿರುವ ಹೇಳಿಕೆ ಪ್ರಕಾರ ಆತ ಗೀತಾ ಮೇಲಿನ ಮೋಹದಿಂದ ಈ ಕೃತ್ಯ ಎಸಗಿರುವುದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ. ಇಬ್ಬರ ನಡುವಿನ ಸಲುಗೆ ಹೊರತು ಪಡಿಸಿ ಕೊಲೆ ಹಾಗೂ ಹಲ್ಲೆಗೆ ಬೇರೆ ಕಾರಣ ಇತ್ತೇ ಎಂಬುದು ಹೆಚ್ಚಿನ ವಿಚಾರಣೆ ಬಳಿಕ ತಿಳಿದುಬರಲಿದೆ ಎಂದು ತಿಳಿಸಿದ್ದಾರೆ.

ಗೀತಾ ಸ್ಥಿತಿ ಗಂಭೀರ:    ಶಿಕ್ಷಕ ಮುತ್ತಪ್ಪನಿಂದ ಹಲ್ಲೆಗೊಳಗಾಗಿ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾವನ್ನಪ್ಪಿದ ವಿದ್ಯಾರ್ಥಿಯ ತಾಯಿ ಮತ್ತು ಅತಿಥಿ ಶಿಕ್ಷಕಿ ಗೀತಾ ಬಾರಕೇರ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಇನ್ನು ಕೆಲಸ ಮಾಡುವ ಸ್ಥಳದಲ್ಲಿ ಸರಿಯಾಗಿ ಇರದಿದ್ದರೆ ಏನಾಗುವುದು ಎನ್ನುವುದಕ್ಕೆ ತ್ರಿವಳಿ ಪ್ರೇಮಕಥೆಯ ಘಟನೆ ಸಾಕ್ಷಿಯಾಗಿದೆ.

Gadag Crime: ಶಾಲೆಯಲ್ಲಿಯೇ 4ನೇ ತರಗತಿ ವಿದ್ಯಾರ್ಥಿಯನ್ನು ಹೊಡೆದು ಕೊಂದ ಅತಿಥಿ ಶಿಕ್ಷಕ

ಶಾಲೆಯಲ್ಲಿ ಭಯದ ವಾತಾವರಣ: ಇನ್ನು ಶಾಲೆಯಲ್ಲಿ ಇಬ್ಬರು ಶಿಕ್ಷಕರು ಮತ್ತು ಒಬ್ಬ ಶಿಕ್ಷಕಿ ಎಲ್ಲರೂ ಮದುವೆ ಆಗಿದ್ದವರು. ಆದರೆ, ತ್ರಿವಳಿ ಪ್ರೇಮ ಪ್ರಕರಣದಲ್ಲಿ ಗೀತಾ ಬಾರಿಕೇರ ಎನ್ನುವ ಶಿಕ್ಷಕಿ, ಕೊಲೆ ಆರೋಪಿ ಮುತ್ತಪ್ಪ ಹಡಗಲಿ ಎನ್ನುವವರ ಜೊತೆಗೆ ಸಲುಗೆಯಿಂದ ಇದ್ದರು. ಆದರೆ, ಇತ್ತೀಚೆಗೆ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಮತ್ತೊಬ್ಬ ಸಹಶಿಕ್ಷಕರೊಂದಿಗೆ ಗೀತಾ ಸಲುಗೆಯಿಂದ ಇರುವುದನ್ನು ಮುತ್ತಪ್ಪ ನೋಡಿದ್ದಾನೆ. ಇದಾದ ನಂತರ ಗೀತಾ ಜೊತೆಗಿದ್ದವರನ್ನು ಕೊಲೆ ಮಾಡುವುದಾಗಿ ನಿರ್ಧರಿಸಿ ಶಾಲೆಯಲ್ಲಿ 4ನೇ ಓದುತ್ತಿದ್ದ ಗೀತಾ ಬಾರಿಕೇರ ಅವರ ಪುತ್ರ ಭರತ್‌ನನ್ನು ಸಲಿಕೆಯಿಂದ ತೆಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಘಟನೆ ನಡೆದು ಮೂರು ದಿನಗಳಾದರೂ ವಿದ್ಯಾರ್ಥಿಗಳು ಶಾಲೆಗೆ ಬರಲು ಹೆದರುತ್ತಿದ್ದಾರೆ. 

Latest Videos
Follow Us:
Download App:
  • android
  • ios