*  ತಪ್ಪೊಪ್ಪಿಕೊಂಡು ರಾಜೀನಾಮೆ ನೀಡಿದ ಸಿದ್ದಪ್ಪ ಕಂಬಳಿ ಕಾನೂನು ಕಾಲೇಜಿನ ಡಾ. ಶೇಷಗಿರಿ*  ವಿದ್ಯಾರ್ಥಿನಿಯರ ವಾಟ್ಸ್‌ಆ್ಯಪ್‌ಗೆ ನೈಸ್‌, ಸೂಪರ್‌ ಎಂದೆಲ್ಲ ಕಮೆಂಟ್‌ ಮಾಡುತ್ತಿದ್ದ ಅತಿಥಿ ಉಪನ್ಯಾಸಕ*  ವಿದ್ಯಾರ್ಥಿನಿಯರು ಸಂಘಟನೆಗಳ ಮೊರೆ ಹೋಗಿರುವುದು ಪ್ರಾಚಾರ್ಯರಿಗೆ ಅಸಮಾಧಾನ ತಂದಂತಿದೆ 

ಧಾರವಾಡ(ಜೂ.29): ಸರ್‌ ಸಿದ್ದಪ್ಪ ಕಂಬಳಿ ಕಾನೂನು ಕಾಲೇಜಿನ ಅರ್ಥಶಾಸ್ತ್ರ ವಿಷಯದ ಅತಿಥಿ ಉಪನ್ಯಾಸಕ ಡಾ. ಶೇಷಗಿರಿ ವಿದ್ಯಾರ್ಥಿನಿಯರ ಮೊಬೈಲ್‌ಗೆ ವಾಟ್ಸ್‌ಆ್ಯಪ್‌ ಮೂಲಕ ಅಸಭ್ಯ ಸಂದೇಶಗಳನ್ನು ಕಳುಹಿಸಿದ ಪರಿಣಾಮ ಬಹಿರಂಗವಾಗಿ ತಪ್ಪೊಪ್ಪಿಕೊಂಡು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿದ್ಯಾರ್ಥಿನಿಯರ ವಾಟ್ಸ್‌ಆ್ಯಪ್‌ ಸ್ಟೇಟಸ್‌ಗೆ ಆರಂಭದಲ್ಲಿ ನೈಸ್‌, ಸೂಪರ್‌ ಎಂದೆಲ್ಲ ಕಮೆಂಟ್‌ ಮಾಡುತ್ತಿದ್ದ ಶೇಷಗಿರಿ, ಬಳಿಕ ತೀರಾ ಅತಿರೇಕದ ಮೆಸೇಜ್‌ಗಳನ್ನು ಕಳುಹಿಸಿದ್ದಾನೆ. ಇದರಿಂದ ರೋಸಿ ಹೋದ ವಿದ್ಯಾರ್ಥಿನಿಯರು ಈ ಸಂಗತಿಯನ್ನು ಕರ್ನಾಟಕ ರಾಜ್ಯ ಕಾನೂನು ವಿದ್ಯಾರ್ಥಿಗಳ ಸಂಘಟನೆ ಗಮನಕ್ಕೆ ತಂದಿದ್ದಾರೆ. ಸಂಘಟನೆಯವರು ವಿಷಯ ತಿಳಿದು ಕಾಲೇಜಿಗೆ ಹೋಗಿ ಈ ಬಗ್ಗೆ ಕೇಳುತ್ತಿದ್ದಂತೆಯೇ ಶೇಷಗಿರಿ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ಜತೆಗೆ ತನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದಾನೆ.

Hubli Crime News: ಕಾರ್ಪೋರೆಟರ್ ಹತ್ಯೆಗೆ ಪತಿಯಿಂದಲೇ ಯತ್ನ: ದೂರು ದಾಖಲು

ಈ ಸಂಗತಿ ಕಾಲೇಜು ಪ್ರಾಚಾರ್ಯರ ಗಮನಕ್ಕಿಲ್ಲ. ಆದರೆ, ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರಾಚಾರ್ಯ ಡಾ. ಶರತ್‌ ಬಾಬು, ಶೇಷಗಿರಿ ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರ ವಾಟ್ಸ್‌ಆ್ಯಪ್‌ ಸಂದೇಶಕ್ಕೆ ಸಂಬಂ​ಧಿಸಿದಂತೆ ಈ ವರೆಗೂ ತಮಗೆ ದೂರು ಬಂದಿಲ್ಲ ಎನ್ನುತ್ತಾರೆ. ತಮ್ಮ ಬಳಿ ದೂರನ್ನು ಹೇಳಿಕೊಳ್ಳಬೇಕಿದ್ದ ವಿದ್ಯಾರ್ಥಿನಿಯರು ನೇರವಾಗಿ ಸಂಘಟನೆಗಳ ಮೊರೆ ಹೋಗಿರುವುದು ಸಹ ಪ್ರಾಚಾರ್ಯರಿಗೆ ಅಸಮಾಧಾನ ತಂದಂತಿದೆ.