Asianet Suvarna News Asianet Suvarna News

Mangaluru Crime: ಪೊಲೀಸರ ಹೆಸರಲ್ಲಿ ಡೀಲ್: ಗ್ರಾಪಂ ಸದಸ್ಯನ ಬಂಧನ

*  ಎಸ್‌ಡಿಪಿಐ ಬೆಂಬಲಿತ ಸದಸ್ಯ ಅಬ್ದುಲ್ ಖಾದರ್ ರಿಝ್ವಾನ್ ಬಂಧಿತ ಆರೋಪಿ
*  ಹಲವು ಕಂತುಗಳಲ್ಲಿ ಹಣ ಸುಲಿಗೆ ಮಾಡಿದ್ದ ರಿಝ್ವಾನ್ 
*  ಆರೋಪಿ ಪತ್ತೆಗಾಗಿ ಹುಡುಕಾಟ ನಡೆಸಿದ್ದ ಪೊಲೀಸರು
 

Grama Panchayat Member Arrested For Deal in The Name of Police in Mangaluru grg
Author
Bengaluru, First Published May 14, 2022, 11:05 AM IST

ಮಂಗಳೂರು(ಮೇ.14):  ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಆರೋಪಿಯ ಹೆಸರನ್ನು ಪೊಲೀಸರಲ್ಲಿ ಪ್ರಭಾವ ಬೀರಿ ಮಾತುಕತೆ ನಡೆಸಿ ಪ್ರಕರಣದಿಂದ ಹೆಸರನ್ನು ತೆಗೆಯುತ್ತೇನೆ ಎಂದು ಹೇಳಿ 2.95 ಲಕ್ಷ ಹಣ ಸುಲಿಗೆ ಮಾಡಿದ ಪ್ರಕರಣದಲ್ಲಿ ಭಾಗಿಯಾದ ಎಸ್‌ಡಿಪಿಐ ಪಕ್ಷದ ಬೆಂಬಲಿತ ಗ್ರಾ.ಪಂ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ‌. ಮಂಗಳೂರಿನ(Mangaluru) ಪಾವೂರು ಗ್ರಾ.ಪಂ ಎಸ್‌ಡಿಪಿಐ(SDPI) ಬೆಂಬಲಿತ ಸದಸ್ಯ ಅಬ್ದುಲ್ ಖಾದರ್ ರಿಝ್ವಾನ್ (28) ಬಂಧಿತ ಆರೋಪಿ.

2021ನೇ ಡಿಸೆಂಬರ್ ತಿಂಗಳಲ್ಲಿ ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದರೋಡೆ(Robbery) ಪ್ರಕರಣವೊಂದು ದಾಖಲಾಗಿತ್ತು. ಈ ಪ್ರಕರಣದ ಆರೋಪಿಯು(Accused) ತಲೆ ಮರೆಸಿಕೊಂಡಿದ್ದು, ಈತನ ಪತ್ತೆಗಾಗಿ ಪೊಲೀಸರು ಹುಡುಕಾಡುತ್ತಿದ್ದರು. ಈ ಸಮಯದಲ್ಲಿ ಆತನನ್ನು ಸಂಪರ್ಕಿಸಿದ ಇಬ್ಬರು ವ್ಯಕ್ತಿಗಳು, ಪ್ರಕರಣದಲ್ಲಿ ಹೆಸರು ತೆಗೆಯಲು ಪೊಲೀಸರಿಗೆ ಹಣ ನೀಡಿ ಅವರ ಜೊತೆ ಪ್ರಭಾವ ಬೀರಿ ಮಾತುಕತೆ ನಡೆಸಿ ಕೇಸಿನಿಂದ ಹೆಸರನ್ನು ತೆಗೆಯುತ್ತೇವೆ ಎಂದು ಹೇಳಿಕೊಂಡು ವಂಚಿಸಿದ್ದಾರೆ. 

Mangaluru: ಡ್ರಗ್ಸ್ ನೀಡಿ ಅತ್ಯಾಚಾರವೆಸಗಿ ಬ್ಲ್ಯಾಕ್‌ಮೇಲ್: ಕಾಮುಕನ ಹೆಡೆಮುರಿ ಕಟ್ಟಿದ ಪೊಲೀಸರು

ಆತನಿಂದ 3 ಲಕ್ಷ ಹಣವನ್ನು ಡಿಮ್ಯಾಂಡ್ ಮಾಡಿ ಹಂತ ಹಂತವಾಗಿ ಒಟ್ಟು 2,95,000 ರೂ‌. ಹಣವನ್ನು ಪಡೆದುಕೊಂಡಿದ್ದರು. ಈ ಹಣವನ್ನು(Money) ಪಡೆದ ಬಳಿಕ ಹಣ ನೀಡಿದ ವ್ಯಕ್ತಿಯನ್ನು ಪೊಲೀಸರು ಹುಡುಕಾಡುತ್ತಿದ್ದ ವಿಚಾರವನ್ನು ತಿಳಿದ ಆತ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು(Bail) ಪಡೆದಿದ್ದಾನೆ. ಇದಾದ ನಂತರ ಆತನಿಂದ ಹಣ ಪಡೆದುಕೊಂಡ ವ್ಯಕ್ತಿಗಳಿಂದ ಹಣವನ್ನು ವಾಪಾಸ್ಸು ನೀಡುವಂತೆ ತಿಳಿಸಿದಾಗ ಹಣದ ವಿಚಾರದಲ್ಲಿ ಕರೆ ಮಾಡಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ನಂತರ 30 ಸಾವಿರ ರೂ. ಹಣ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ. ಇದರಿಂದ ಹಣವನ್ನು ಸುಲಿಗೆ ಮಾಡಿದ ಆರೋಪಿಗಳ ವಿರುದ್ಧ ಹಣವನ್ನು ಕಳೆದುಕೊಂಡ ವ್ಯಕ್ತಿಯು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಂತೆ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಹಣವನ್ನು ಸುಲಿಗೆ ಮಾಡಿದ ಪಾವೂರು ಗ್ರಾ.ಪಂನ ಎಸ್ ಡಿಪಿಐ ಬೆಂಬಲಿತ ಸದಸ್ಯ ಅಬ್ದುಲ್ ಖಾದರ್ ರಿಝ್ವಾನ್ ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿಯು ಇನ್ನೋರ್ವ ಆರೋಪಿಯ ಜೊತೆ ಸೇರಿಕೊಂಡು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಹೆಸರನ್ನು ತೆಗೆಯಲು ಸುರತ್ಕಲ್ ಹಾಗೂ ಪಾಂಡೇಶ್ವರ ಪೊಲೀಸರ ಜೊತೆ ಪ್ರಭಾವ ಬೀರಿ ಮಾತುಕತೆ ನಡೆಸಿ ಕೇಸಿನಿಂದ ಹೆಸರನ್ನು ತೆಗೆಯುತ್ತೇವೆ ಎಂದು ನಂಬಿಸಿ ಹಲವು ಕಂತುಗಳಲ್ಲಿ ಹಣವನ್ನು ಸುಲಿಗೆ ಮಾಡಿದ್ದರು. ಈ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯು ಭಾಗಿಯಾಗಿದ್ದು, ಆತನ ಪತ್ತೆ ಕಾರ್ಯ ಮುಂದುವರಿದಿದೆ.
 

Follow Us:
Download App:
  • android
  • ios