* ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಅನುಚಿತ ವರ್ತನೆ* ಸಚಿವ ಮಾಧುಸ್ವಾಮಿ ಬೆಂಬಲಿಗನಿಂದ ಪಿಡಿಓ ಜೊತೆ ಅಸಭ್ಯ ವರ್ತನೆ  * ಪಿಡಿಓ ಹಾಗೂ ಗ್ರಾಮ ಪಂಚಾಯಿತಿ ಸದಸ್ಯನ ಪ್ರಣಯದಾಟ* ಜೆಸಿ ಪುರ ಗ್ರಾಮ ಪಂಚಾಯಿತಿ ಸದಸ್ಯ ವಿಡಿಯೋ ವೈರಲ್

ತುಮಕೂರು, (ಜುಲೈ.02) : ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ‌ ಜೆಸಿ ಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಾಜಿ ಅಧ್ಯಕ್ಷ, ಹಾಲಿ ಗ್ರಾಪಂ ಸದಸ್ಯನೊಬ್ಬ ಪಿಡಿಓ ಜೊತೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಸಚಿವ ಮಾಧುಸ್ವಾಮಿ ಬೆಂಬಲಿಗ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಗ್ರಾಪಂ ಸದಸ್ಯ ಪ್ರಸನ್ನ ಕುಮಾರ್, ಜೆಸಿ ಪುರ ಪಿಡಿಓ ಗ್ರಾಪಂ ಕಚೇರಿಯಲ್ಲೇ ಲೇಡಿ ಪಿಡಿಓ ಜೊತೆ ಅನುಚಿತವಾಗಿ ವರ್ತನೆ ಮಾಡಿದ್ದಾನೆ. ಪದೇ ಪದೇ ಪಿಡಿಓ ಬಳಿ ಹೋಗಿ ಹಿಡಿದುಕೊಳ್ಳುವ ಪ್ರಯತ್ನಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಆ ದೃಶ್ಯಗಳು ಎಲ್ಲೆಡೆ ವೈರಲ್ ಆಗಿವೆ.

ಮಹಿಳೆ ಜತೆ ರಾಸಲೀಲೆ, ಮಕ್ಕಳ ಗುಪ್ತಾಂಗ ಮುಟ್ಟಿ ಆನಂದ: ಶಿಕ್ಷಕನ ಕಾಮದಾಟ ಬಯಲು ಮಾಡಿದ ಚಿಪ್

ಗ್ರಾಮಪಂಚಾಯ್ತಿ ಕಚೇರಿಯನ್ನೇ ಸದಸ್ಯ ಕುಮಾರ ಪಿಡಿಓ ಕೋಮಲ ಅವರ ಬಳಿಗೆ ಹೋಗಿ ಮುಟುವುದಕ್ಕೆ ಹೋಗುವುದು ಹೀಗೆ ಅಸಭ್ಯ ವರ್ತನೆ ಮಾಡಿದ್ದಾನೆ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ‌ ಆಗಿದೆ. ಇದರ ಬೆನ್ನಲ್ಲೇ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಗ್ರಾಮ ಪಂ‌ಚಾಯಿತಿ ಸದಸ್ಯ ಪ್ರಸನ್ನ ಕುಮಾರ್ ಸದಸ್ಯತ್ವ ರದ್ದು ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಲವ್ವಿಡವ್ವಿ ಜೊತೆಗೆ ಪಿಡಿಓ ಲಂಚ ಬಾಕತನದ ಆಡಿಯೋ ವೈರಲ್
ಸದಸ್ಯನ ಜೊತೆ ಪ್ರೇಮಪ್ರಣಯದಾಟದ ಜೊತೆಗೆ PDO ಲಂಚ ಬಾಕತನದ ಆಡಿಯೋ ವೈರಲ್ ಆಗಿದೆ. ಕಚೇರಿ ನೌಕರರ ಸಂಬಳ ನೀಡಲು ಐದು ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾರೆ.ಐಓಗೆ 500 ಕೊಡಿ ನನಗೆ 5000 ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಆಡಿಯೋ ಸಹ ವೈರಲ್ ಆಗಿದೆ.

ಇನ್ನು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಮಧುಗಿರಿಯ ಮಧು ಕಾಮಪುರಾಣ ಬಟಾಬಯಲಾಗಿದೆ. ಮಹಿಳೆಯ ಜೊತೆಗಿನ ಲವ್ವಿಡವ್ವಿ ಫೋಟೋಗಳು ವೈರಲ್ ಆಗಿವೆ. ಮಧುಗಿರಿ ತಾಲ್ಲೂಕಿನ ಬೇಡತ್ತೂರು ಗ್ರಾಮದ ಸದಸ್ಯೆ ಮಂಜುಳ ಜೊತೆಗೆ ಎಂಜಾಯ್ ಮಾಡುತ್ತಿರುವುದು ಹಾಗೂ ಇಬ್ಬರ ಚುಂಬನದ ಫೋಟೋಗಳು ಹರಿದಾಡುತ್ತಿವೆ.

 ಬೆಂಗಳೂರಿನ ಖಾಸಗಿ ಹೋಟೆಲ್ ಗೆ ಕರೆದುಕೊಂಡು‌ ಹೋಗಿ ಎಂಜಾಯ್ ಮಾಡಿದ್ದಾರೆ. ಫೋಟೋ ವೈರಲ್ ಆದ ತಕ್ಷಣ, ಮಧು ಮಧುಗಿರಿಯಿಂದ ಯಾರ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿದ್ದಾರೆ.