ಧಾರವಾಡ, (ಡಿ.22): ಗ್ರಾಮ ಪಂಚಾಯತಿ ಅಭ್ಯರ್ಥಿಯೊಬ್ಬ ಡೆತ್​ ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರವ ಘಟನೆ ಜಿಲ್ಲೆಯ ಗರಗ ಗ್ರಾಮದಲ್ಲಿ ನಡೆದಿದೆ. 

ಗ್ರಾಮದ 2ನೇ ವಾರ್ಡ್​​ ಅಭ್ಯರ್ಥಿ ದಾಮೋದರ ಯಲಿಗಾರ(25) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಾಮೋದರ ಯಲಿಗಾರ ಭಾರತೀಯ ಜನತಾ ಪಕ್ಷದ ಕಾರ್ಯಕರ್ತನಾಗಿದ್ದ.

ಹೈಕೋರ್ಟ್ ಬಿಗ್ ಶಾಕ್: ಬಿಎಸ್ ಯಡಿಯೂರಪ್ಪಗೆ ಮತ್ತೆ ಸಂಕಷ್ಟ

ದಾಮೋದರ ಯಲಿಗಾರ ವಿರುದ್ಧ ರಾಜು ಇಜಾರಿ ಎಂಬುವವರ ಸ್ಪರ್ಧೆ ಮಾಡಿದ್ದರು. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂಬುದು ಗೊತ್ತಾಗಿಲ್ಲವಾದರೂ, ಚುನಾವಣೆಯ ಕಾರಣದಿಂದಲೇ ಮಾನಸಿಕವಾಗಿ ಹೀಗೆ ಮಾಡಿಕೊಂಡಿದ್ದಾನೆಂದು ಹೇಳಲಾಗಿದೆ.

ಘಟನೆಯ ಸುದ್ಧಿ ತಿಳಿಯುತ್ತಿದಂತೆ ಗ್ರಾಮಸ್ಥರು ಮನೆ ಮುಂದೆ ಜಮಾವಣೆಯಾಗಿದ್ದು, ಸದ್ಯ, ಗರಗ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.