Asianet Suvarna News Asianet Suvarna News

ಮಿಜೋರಾಂ: ಒಂದನೇ ಕ್ಲಾಸ್ ಬಾಲಕಿಯನ್ನು ವಿವಸ್ತ್ರಗೊಳಿಸಿದ ಸರ್ಕಾರಿ ಟೀಚರ್ ಬಂಧನ

Crime News: ಒಂದನೇ ತರಗತಿ ವಿದ್ಯಾರ್ಥಿನಿಯ ಸಮವಸ್ತ್ರವನ್ನು ತೆಗೆದ ಆರೋಪದ ಮೇಲೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯನ್ನು ಬಂಧಿಸಲಾಗಿದೆ

Government school teacher arrested for taking off Class one girl uniform in Mizoram mnj
Author
First Published Aug 28, 2022, 9:32 PM IST

ಮಿಜೋರಾಂ (ಆ. 28): ಮಿಜೋರಾಂನ ಲುಂಗ್ಲೈ ಜಿಲ್ಲೆಯ ತಂಗ್‌ಪುಯಿ ಗ್ರಾಮದಲ್ಲಿ ಒಂದನೇ ತರಗತಿ ವಿದ್ಯಾರ್ಥಿನಿಯ ಸಮವಸ್ತ್ರವನ್ನು ತೆಗೆದ ಆರೋಪದ ಮೇಲೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯನ್ನು ಶನಿವಾರ ಬಂಧಿಸಲಾಗಿದೆ. ಗುರುವಾರ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೇಂದ್ರದ ಸರ್ವ ಶಿಕ್ಷಾ ಅಭಿಯಾನದ ಅಡಿಯಲ್ಲಿ ನೇಮಕಗೊಂಡಿರುವ ಲಾಲ್ಬಿಯಾಕೆಂಗಿ ಎಂದು ಗುರುತಿಸಲಾದ ಗುತ್ತಿಗೆ ಮಹಿಳಾ ಶಿಕ್ಷಕಿಯ ವಿರುದ್ಧ ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, 2015 ರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 

ತನ್ನ ಮಗಳಿಗೆ ಶಾಲೆಯಲ್ಲಿ ಬಾಲಕನೋರ್ವ ಕಿರುಕುಳ ನೀಡುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳ ಅಸಡ್ಡೆಯ ಕಾರಣದಿಂದ ಮಗಳನ್ನು ಶಾಲೆಯಿಂದ ಬಿಡಿಸುವುದಾಗಿ ತಿಳಿಸಿದ ನಂತರ  ಶಿಕ್ಷಕಿ ಈ ರೀತಿ ಮಾಡಿದ್ದಾರೆ ಎಂದು ಬಾಲಕಿಯ ತಾಯಿ ಆರೋಪಿಸಿದ್ದಾರೆ. 

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ಎಫ್‌ಐಆರ್ ದಾಖಲಿಸಿದ ನಂತರ ಲಾಲ್‌ಬಿಯಾಕೆಂಗಿಯನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ರೆಕ್ಸ್ ವಾಂಚೌಂಗ್  ತಿಳಿಸಿದ್ದಾರೆ.ಆಗಸ್ಟ್ 22 ರಂದು ಶಾಲೆಯಲ್ಲಿ ಬಾಲಕನೊಬ್ಬ ತನ್ನ ಮಗಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದು, ಆಕೆಗೆ ಗಂಭೀರ ಗಾಯಗಳಾಗಿದ್ದು, ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯವಿದೆ ಎಂದು ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

ಉತ್ತರ ಪ್ರದೇಶ: ಊಟ ನೀಡಲು ತಡ ಮಾಡಿದಕ್ಕೆ ಮಗಳನ್ನೇ ಕೊಂದ ತಂದೆ

"ಮೂರು ದಿನಗಳ ಕಾಲ ವೈದ್ಯಕೀಯ ಚಿಕಿತ್ಸೆಗೆ ಒಳಗಾದ ನಂತರ ಅವಳು ಮತ್ತೆ ಶಾಲೆಗೆ ಹೋಗಬೇಕೆಂದು ಒತ್ತಾಯಿಸಿದಾಗ, ನಾವು ಗುರುವಾರ (ಆಗಸ್ಟ್ 25) ಅವಳನ್ನು ಶಾಲೆಗೆ ಕಳುಹಿಸಿದ್ದೇವೆ, ಆದರೆ ಅದೇ ಹುಡುಗ ಮತ್ತೆ ಥಳಿಸಿದ್ದಾನೆ," ಎಂದು ತಾಯಿ ಆರೋಪಿಸಿದ್ದಾರೆ.

ಪುಂಡ ಹುಡುಗ ಮತ್ತೆ ತನ್ನ ಮಗಳಿಗೆ ಥಳಿಸಿದ ವಿಷಯ ತಿಳಿದ ಆಕೆಯ ತಾಯಿ ಕೋಪಗೊಂಡು ಶುಕ್ರವಾರ ಶಾಲೆಗೆ ಹೋಗಿ ಬಾಲಕನಿಗೆ ಬೈದು ಬುದ್ಧಿ ಹೇಳಿದ್ದಾರೆ. ಆದರೆ “ಮಧ್ಯಾಹ್ನ, ನನಗೆ ಶಿಕ್ಷಕರಿಂದ ಕರೆ ಬಂತು. ಹುಡುಗನನ್ನು ಬೈಯುವ ಮೂಲಕ ನಾನು ನಿಯಮಗಳನ್ನು ಉಲ್ಲಂಘಿಸಿದ್ದೇನೆ ಎಂದು ನನಗೆ ತಿಳಿಸಿದ್ದಾರೆ" ಎಂದು ಬಾಲಕಿಯ ತಾಯಿ ಆರೋಪಿಸಿದ್ದಾರೆ. 

ಇದರಿಂದ ಕುಪಿತಳಾದ ಮಹಿಳೆ ತಮ್ಮ ಮಗಳನ್ನು  ಮನೆಗೆ ಕರೆತರಲು ಮತ್ತೆ ಶಾಲೆಗೆ ತೆರಳಿದ್ದರು. ತಾಯಿ  ತನ್ನ ಮಗಳನ್ನು ಶಾಲೆಯಿಂದ ಹೊರಗೆ ಕರೆತರುವಂತೆ ಬೆದರಿಕೆ ಹಾಕಿದಾಗ, ಶಿಕ್ಷಕಿ ಮಗಳನ್ನು ಮನೆಗೆ ಕರೆದೊಯ್ಯಲು ಬಯಸಿದರೆ, ಮತ್ತೊಂದು ವಿದ್ಯಾರ್ಥಿಗೆ ಅಗತ್ಯವಿರುವುದರಿಂದ ಅವಳು ತನ್ನ ಸಮವಸ್ತ್ರವನ್ನು ಬಿಟ್ಟು ಹೋಗಬೇಕಾಗುತ್ತದೆ ಎಂದು ಹೇಳಿದರು ಎಂದು ತಾಯಿ ತಿಳಿಸಿದ್ದಾರೆ. 

"ಅವಳು ನನ್ನ ಮಗಳನ್ನು ಇಡೀ ತರಗತಿಯ ಮುಂದೆ ವಿವಸ್ತ್ರಗೊಳಿಸಿದಳು ಮತ್ತು ಕೇವಲ ಅವಳ ಒಳ ಉಡುಪುಗಳೊಂದಿಗೆ ಅವಳನ್ನು ಹೋಗಲು ಬಿಟ್ಟಳು" ಎಂದು ಒಂದನೇ ತರಗತಿಯ ವಿದ್ಯಾರ್ಥಿನಿಯ ತಾಯಿ ದೂರಿದ್ದಾರೆ.

Follow Us:
Download App:
  • android
  • ios