ಆಕೆಗೆ ತಾಳಿ ಕಟ್ಟಿ ಕರೆತಂದವನ್ನೇ ಯಾರೂ ಮಾಡಲೇಬಾರದ್ದಂತಹ ಪೈಶಾಚಿಕ ಕೃತ್ಯವನ್ನು ಮಾಡಿದರೆ ಅಳುವುದಾದರೂ ಯಾರ ಬಳಿ, ಇಂತಹದ್ದೊಂದು ಸಂದಿಗ್ಧ ಸ್ಥಿತಿಗೆ ಸಿಕ್ಕ ಹೆಣ್ಣೊಬ್ಬಳು ಕಡೆಗೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಹಾಗಿದ್ದರೆ ಗಂಡ ಮಾಡಿದ್ದೇನು ಇಲ್ಲಿದೆ ನೋಡಿ ಡಿಟೇಲ್ ಸ್ಟೋರಿ...

ಪುಣೆ: ಹೆಣ್ಣಿಗೆ ಮದುವೆ ಮಾಡಿ ಗಂಡನ ಮನೆಗೆ ಕಳಹಿಸಿಕೊಡುವ ವೇಳೆ ಬಹುತೇಕ ಎಲ್ಲಾ ಹೆಣ್ಮಕ್ಕಳ ತವರು ಮನೆಯವರು ಇನ್ನೂ ನಿನ್ನ ಪಾಲಿಗೆ ಎಲ್ಲವೂ ಅವನೇ ನಿನ್ನ ಎಲ್ಲಾ ಕಷ್ಟ ಸುಖಗಳಿಗೆ ಅವನೇ ಪರಿಹಾರ ಎಲ್ಲವನ್ನೂ ನಮ್ಮವರೆಗೆ ತರುವಂತಿಲ್ಲ, ನಿಮ್ಮ ಕಷ್ಟ ಸುಖ ಏನಿದ್ದರೂ ನೀವೇ ಪರಿಹರಿಸಿಕೊಳ್ಳಬೇಕು ತಗ್ಗಿ ಬಗ್ಗಿ ಬಾಳಬೇಕು ಅಂತ ಹೇಳಿ ಕಳಿಸುತ್ತಾರೆ. ಬಹುತೇಕ ಭಾರತೀಯ ಕುಟುಂಬಗಳು ಮದುವೆಯಾದ ಹೆಣ್ಣು ತವರಿನಿಂದ ಹೊರಡುವಾಗ ಇದನ್ನು ಹೇಳಿಯೇ ಹೇಳಿರುತ್ತಾರೆ.

ಆದರೆ ತವರು ಮನೆಯವರ ಮಾತು ನಂಬಿ ಆತನೇ ಸರ್ವಸ್ವ ಎಂದು ನಂಬಿ ಬಂದ ಹೆಣ್ಣಿಗೆ ,ಆಕೆಗೆ ತಾಳಿ ಕಟ್ಟಿ ಕರೆತಂದವನ್ನೇ ಯಾರೂ ಮಾಡಲೇಬಾರದ್ದಂತಹ ಪೈಶಾಚಿಕ ಕೃತ್ಯವನ್ನು ಮಾಡಿದರೆ ಅಳುವುದಾದರೂ ಯಾರ ಬಳಿ, ಇಂತಹದ್ದೊಂದು ಸಂದಿಗ್ಧ ಸ್ಥಿತಿಗೆ ಸಿಕ್ಕ ಹೆಣ್ಣೊಬ್ಬಳು ಕಡೆಗೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಹಾಗಿದ್ದರೆ ಗಂಡ ಮಾಡಿದ್ದೇನು ಇಲ್ಲಿದೆ ನೋಡಿ ಡಿಟೇಲ್ ಸ್ಟೋರಿ...

ಇಎಂಐ ಇನ್ಸ್ಟಾಲ್ಮೆಂಟ್‌ಗಾಗಿ ಹೆಂಡ್ತಿಗೆ ಬ್ಲ್ಕಾಕ್‌ಮೇಲ್:

ಮೊದಲೆಲ್ಲಾ ವರದಕ್ಷಿಣೆ ಕಿರುಕುಳಕ್ಕೆ ಹೆಣ್ಣು ಮಕ್ಕಳು ಬಲಿ ಆಗ್ತಿದ್ದರು. ಆದರೆ ವರದಕ್ಷಿಣೆ ಕಿರುಕುಳ ಕಡಿಮೆ ಆಗಿದೆಯಾದರೂ ಕಿರುಕುಳದ ಸ್ವರೂಪಗಳು ಬದಲಾಗಿವೆಯಷ್ಟೇ ಇಲ್ಲೂ ಇದೆ ಕತೆ. ಗಂಡ ಕಾರಿಗಾಗಿ ಲೋನ್ ಮಾಡಿದ್ದು, ಇಎಂಐ ಇನ್ಸ್ಟಾಲ್‌ಮೆಂಟ್ ತುಂಬುವುದಕ್ಕಾಗಿ ಹೆಂಡ್ತಿಗೆ ತನ್ನ ತವರಿನಿಂದ ಒಂದೂವರೆ ಲಕ್ಷ ರೂಪಾಯಿ ಕೇಳಿಕೊಂಡು ಬರುವಂತೆ ಗಂಡ ಪೀಡಿಸಲು ಶುರು ಮಾಡಿದ್ದಾನೆ. ಆದರೆ ತವರಿನಿಂದ ಹಣ ಕೇಳುವಂತಹ ಸ್ಥಿತಿಯಲ್ಲಿ ಆಕೆ ಇರಲಿಲ್ಲ, ಹಾಗೂ ಗಂಡನ ಬೇಡಿಕೆಯನ್ನು ನಿರಾಕರಿಸುತ್ತಾ ಬಂದಿದ್ದಾಳೆ.

ಹೆಂಡ್ತಿ ಸ್ನಾನದ ವೀಡಿಯೋ ರೆಕಾರ್ಡ್ ಮಾಡಿದ ಗಂಡ

ಪರಿಣಾಮ ಮಾನಸಿಕ ಹಾಗೂ ದೈಹಿಕವಾಗಿ ನಿರಂತ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಬರೀ ಇಷ್ಟೇ ಆಗಿದ್ದರೆ ಆಕೆ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಳೋ ಇಲ್ಲವೋ, ಆದರೆ ತನ್ನೆ ಕಿರುಕುಳಕ್ಕೆ ಬಗ್ಗದ ಹೆಂಡ್ತಿಗೆ ಬುದ್ಧಿ ಕಲಿಸಲು ಗಂಡ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದು, ಆಕೆ ಸ್ನಾನ ಮಾಡುವುದು ಸೇರಿದಂತೆ ಆಕೆಯ ಖಾಸಗಿ ಕ್ಷಣಗಳನ್ನು ವೀಡಿಯೋ ರೆಕಾರ್ಡ್‌ ಮಾಡಿಕೊಂಡಿದ್ದಾನೆ.

4 ವರ್ಷದ ಹಿಂದೆ ಮದುವೆ:

ಇದಾದ ನಂತರ ಆಕೆಗೆ ವೀಡಿಯೋ ಬಯಲು ಮಾಡುವುದಾಗಿ ಹೇಳಿ ಬ್ಲ್ಯಾಕ್ ಮೇಲ್ ಮಾಡಲು ಶುರು ಮಾಡಿದ್ದು, ಇದರಿಂದ ಧೃತಿಗೆಟ್ಟ ಯುವತಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ. ಪುಣೆಯ ಅಂಬೇಗಾಂವ್‌ನಲ್ಲಿ ಈ ಘಟನೆ ನಡೆದಿದ್ದು,ದೂರು ನೀಡಿದ 30 ವರ್ಷದ ಮಹಿಳೆ 2020ರಲ್ಲಿ ಅಂದರೆ 4 ವರ್ಷದ ಹಿಂದಷ್ಟೇ ಈ ಬ್ಲಾಕ್‌ಮೇಲ್ ಮಾಡುವ ಗಂಡನನ್ನು ಮದುವೆಯಾಗಿದ್ದಳು.

ಘಟನೆಗೆ ಸಂಬಂಧಿಸಿದಂತೆ ಪತಿ ಹಾಗೂ ಇತರ ಆರು ಜನರ ವಿರುದ್ಧ ಕೇಸು ದಾಖಲಾಗಿದೆ. ಹಾಗೂ ಆರೋಪಿ ಪತಿ ಬಳಿ ಇದ್ದ ತಾಂತ್ರಿಕ ಸಾಕ್ಷ್ಯಗಳು, ವೀಡಿಯೋ ದೃಶ್ಯಾವಳಿಗಳನ್ನು ಪರೀಕ್ಷೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇಬ್ಬರು ಸರ್ಕಾರಿ ಉದ್ಯೋಗಿಗಳೇ:

ಈ ಘಟನೆಯಲ್ಲಿ ಮತ್ತೊಂದು ಆಘಾತಕಾರಿ ವಿಚಾರ ಏನಂದ್ರೆ ಇಬ್ಬರು ಸುಶಿಕ್ಷಿತರು ಇಬ್ಬರು ಸರ್ಕಾರಿ ಉದ್ಯೋಗಿಗಳು ಎಂಬುದು ತಿಳಿದು ಬಂದಿದೆ. ಅಕ್ಷರಜ್ಞಾನದ ಅರಿವಿರುವ ಕಾನೂನಿನ ಬಗ್ಗೆ ತಿಳಿದಿರುವ ಸರ್ಕಾರಿ ಉದ್ಯೋಗಿಯೋರ್ವನೇ ಈ ರೀತಿ ವಿಕೃತ ಕೃತ್ಯವೆಸಗಿದರೆ ಸಮಾಜದ ಕತೆ ಏನು? ಒಟ್ಟಿನಲ್ಲಿ ಉನ್ನತ ಶಿಕ್ಷಣ ಒಳ್ಳೆಯ ಹುದ್ದೆ ನಿಮಗೆ ಸೂಕ್ಷ್ಮತೆ, ಲೋಕಜ್ಞಾನ ನೀಡುತ್ತದೆ ಎಂಬುದು ದೊಡ್ಡ ಸುಳ್ಳು. ಅವಿದ್ಯಾವಂತನಿಗಿರುವ ಲೋಕಜ್ಞಾನ ಕೆಲ ಸುಶಿಕ್ಷಿತರಿಗೆ ಇರುವುದಿಲ್ಲ ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ…