ಇಬ್ಬರು ಮಕ್ಕಳೊಂದಿಗೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕೋಲಾರ ತಾಲೂಕು ಉಪ್ಪುಕುಂಟೆ ಗ್ರಾಮದಲ್ಲಿ  ನಡೆದಿದೆ. ಮೃತ ಮಹಿಳೆ ಸರ್ಕಾರಿ ಬಸ್ ಡಿಪೋದಲ್ಲಿ  ಮೆಕಾನಿಕ್ ಕೆಲಸ ಮಾಡುತ್ತಿದ್ದಳು.

ಕೋಲಾರ (ಜೂ.20): ಇಬ್ಬರು ಮಕ್ಕಳೊಂದಿಗೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕೋಲಾರ ತಾಲೂಕು ಉಪ್ಪುಕುಂಟೆ ಗ್ರಾಮದಲ್ಲಿ ನಡೆದಿದೆ. ಮತರನ್ನು ತಾಯಿ ಸುಗುಣ (26), ಮಕ್ಕಳಾದ ಪ್ರೀತಂಗೌಡ (9) ನಿಶಿತಾಗೌಡ (6) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಮುರಳಿ ಎಂಬುವರೊಂದೊಗೆ ಸುಗುಣ ಮದುವೆಯಾಗಿತ್ತು. ಪತಿ‌ ಪತ್ನಿ ಇಬ್ಬರು ಸರ್ಕಾರಿ ಬಸ್ ಡಿಪೋದಲ್ಲಿ ಕೆಲಸ ಮಾಡುತ್ತಿದ್ದರು. ಪತಿ ಮುರಳಿ ಸರ್ಕಾರಿ ಬಸ್ ಡಿಪೋದಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದರೆ, ಪತ್ನಿ ಸುಗುಣ ಮೆಕಾನಿಕ್ ಕೆಲಸ ಮಾಡುತ್ತಿದ್ದಳು. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪರಪುರುಷನ ಜೊತೆ ಅನೈತಿಕ ಸಂಬಂಧ, ಪ್ರಿಯಕರನಿಂದಲೇ ಹೆಣವಾದ್ಲು ಪ್ರಿಯತಮೆ!

ಮಂಜು​ನಾಥ ಆತ್ಮ​ಹತ್ಯೆ ಪ್ರಕ​ರ​ಣ: ನಾಲ್ವರು ಪೊಲೀಸರ ವಿರುದ್ಧ ಎಫ್‌ಐಆರ್‌
ಹೊಳೆಹೊನ್ನೂರು: ಗಂಡನ ಆತ್ಮ​ಹ​ತ್ಯೆಗೆ ಪೊಲೀ​ಸರು ನೀಡಿದ ಮಾನ​ಸಿಕ, ದೈಹಿಕ ಹಿಂಸೆಯೇ ಕಾರಣ ಎಂದು ಆರೋ​ಪಿಸಿ ಪತ್ನಿ ದಾಖ​ಲಿ​ಸಿದ್ದ ದೂರಿನ ಹಿನ್ನೆಲೆ ಹೊಳೆ​ಹೊ​ನ್ನೂರು ಠಾಣೆಯ ನಾಲ್ವರು ಪೊಲೀ​ಸ​ರ ವಿರುದ್ಧ ಎಫ್‌​ಐ​ಆರ್‌ ದಾಖ​ಲಾ​ಗಿದೆ.

ಜೂನ್‌ 11ರಂದು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಆರೋ​ಪದ ಮೇಲೆ 112ರ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು, ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರು. ಆದರೆ ವಿಚಾರಣೆ ಪೂರ್ತಿಯಾದ ಬಳಿಕ ಅವರನ್ನು ಪೋಷಕರ ಜೊತೆಗೆ ಕಳುಹಿಸಲಿಲ್ಲ. ಈ ಘಟ​ನೆ​ಯಿಂದ ಮನನೊಂದಿದ್ದ ಮಂಜುನಾಥ (28) ಎಂಬಾ​ತ​ ಘಟನೆ ನಡೆದ ನಾಲ್ಕು ದಿನಗಳ ನಂತರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದನು.

ಗಂಡ ಆತ್ಮ​ಹ​ತ್ಯೆಗೆ ಶರ​ಣಾ​ಗಲು ಪೋಲೀಸರು ನೀಡಿದ ಮಾನಸಿಕ ಮತ್ತು ದೈಹಿಕ ಹಿಂಸೆ ಕಾರ​ಣ​ವಾ​ಗಿದೆ. ಇದರಿಂದ ಪತಿ ಮಂಜು​ನಾಥ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ಕಮಲಾಕ್ಷಿ ಅಂದೇ ಠಾಣೆಗೆ ದೂರು ನೀಡಿದ್ದರು. ಆದರೆ, ಪ್ರಕರಣವನ್ನು ಪೊಲೀಸರು ಲಘುವಾಗಿ ಪರಿಗಣಿಸಿದ್ದ ಹಿನ್ನೆಲೆ ಮೃತನ ಕುಟುಂಬದವರ ಒತ್ತಾ​ಯದ ಮೇರೆಗೆ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಹೊಳೆಹೊನ್ನೂರು ಠಾಣೆಯ ಪೊಲೀಸ್‌ ಸಿಬ್ಬಂದಿ ಬಿಲಾಲ…, ಲಿಂಗೇಗೌಡ, ಸುದರ್ಶನ್‌ ಹಾಗೂ ವಿಶ್ವನಾಥ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಆಶ್ರಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಸ್ವಾಮೀಜಿ ಅರೆಸ್ಟ್‌

ಕೌಟುಂಬಿಕ ಕಲಹ: ಗೃಹಿಣಿ ಆತ್ಮಹತ್ಯೆ
ಮೈಸೂರು: ಕೌಟುಂಬಿಕ ಕಲಹದಿಂದ ಮನನೊಂದು ಗೃಹಿಣಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಕೇರ್ಗಳ್ಳಿಯ ನ್ಯಾಯಾಂಗ ಬಡಾವಣೆಯಲ್ಲಿ ಭಾನುವಾರ ನಡೆದಿದೆ. ನ್ಯಾಯಾಂಗ ಬಡಾವಣೆಯ ನಿವಾಸಿ ಭಾಸ್ಕರ್‌ ಎಂಬವರ ಪತ್ನಿ ಲಿಲ್ಲಿ ಶಾಲಿನಿ(35) ಆತ್ಮಹತ್ಯೆ ಮಾಡಿಕೊಂಡವರು. ಇವರು ಆಟೋ ಚಾಲಕ ಭಾಸ್ಕರ್‌ ಅವರನ್ನು ವಿವಾಹವಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಪತಿಯೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದ ಲಿಲ್ಲಿ ಶಾಲಿನಿ ಅವರು, ಭಾನುವಾರ ಮಧ್ಯಾಹ್ನ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಜಯಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.