ಆಂಧ್ರದ ರಕ್ತ ಚರಿತ್ರೆ ಸೇಡಿಗೆ ಕರ್ನಾಟಕದಲ್ಲಿ ಸ್ಪಾಟ್ ಫಿಕ್ಸ್..!
ತಂದೆ ಕೊಲೆಗೆ ಪ್ರತೀಕಾರವಾಗಿ ಎದುರಾಳಿ ತಂಡದ ಮೂವರನ್ನ ಶಿವಶಂಕರ್ ರೆಡ್ಡಿ ಕೊಲೆ ಮಾಡಿದ್ದನಂತೆ. ಮೂವರ ಹತ್ಯೆಗೆ ಪ್ರತೀಕಾರವಾಗಿ ಶಿವಶಂಕರ್ ರೆಡ್ಡಿ ಮೇಲೆ ಅಟ್ಯಾಕ್ ಮಾಡಿರುವ ಶಂಕೆ.
ಬೆಂಗಳೂರು(ಡಿ.09): ಬೆಂಗಳೂರಿನಲ್ಲಿ ಮದನಪಲ್ಲಿ ರೌಡಿಶೀಟರ್ ಶಿವಶಂಕರ್ ರೆಡ್ಡಿ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಆರ್ ಪುರ ಪೊಲೀಸರು ತನಿಖೆಯನ್ನ ಮುಂದುವರೆಸಿದ್ದಾರೆ. ರೌಡಿ ಶಿವಶಂಕರ್ ರೆಡ್ಡಿ ಮೇಲಿನ ದಾಳಿಯ ಹಿಂದೆ ಫ್ಯಾಮಿಲಿ ರಿವೆಂಜ್ ಇದೆ ಎಂಬ ಸತ್ಯ ಬಯಲಾಗಿದೆ.
2011 ರಲ್ಲಿ ಶಿವಶಂಕರ್ ರೆಡ್ಡಿ ತಂದೆ ಗ್ಯಾಂಗ್‌ವೊಂದು ಕೊಲೆಗೈದಿತ್ತು. ತಂದೆ ಕೊಲೆಗೆ ಪ್ರತೀಕಾರವಾಗಿ ಎದುರಾಳಿ ತಂಡದ ಮೂವರನ್ನ ಶಿವಶಂಕರ್ ರೆಡ್ಡಿ ಕೊಲೆ ಮಾಡಿದ್ದನಂತೆ. ಮೂವರ ಹತ್ಯೆಗೆ ಪ್ರತೀಕಾರವಾಗಿ ಶಿವಶಂಕರ್ ರೆಡ್ಡಿ ಮೇಲೆ ಅಟ್ಯಾಕ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆಂಧ್ರದ ಮದನಪಲ್ಲಿಯಿಂದ ಹಿಂಬಾಲಿಸಿ ಬಂದು ಶಿವಶಂಕರ್ ರೆಡ್ಡಿ ಹತ್ಯೆಗೆ ಪ್ಲಾನ್ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ ಆರ್ ಪುರ ಪೊಲೀಸರು ಈಗಾಗಲೇ ಮದನಪಲ್ಲಿಯಲ್ಲಿ ಬೀಡು ಬಿಟ್ಟಿದ್ದಾರೆ.
ಒಂದು ರಾತ್ರಿ ಎರಡೆರಡು ಬಾರಿ ಸೆಕ್ಸ್ ನಿರಾಕರಿಸಿದ ಪತ್ನಿಯ ಹತ್ಯೆ, ಗಂಡನ ನಾಟಕಕ್ಕೆ ಪೊಲೀಸರೇ ಸುಸ್ತು!
ಫೈರಿಂಗ್ ಗ್ಯಾಂಗ್ ಪತ್ತೆಗೆ ಪೊಲೀಸರು ಮೂರು ವಿಶೇಷ ತಂಡಗಳನ್ನ ರಚನೆ ಮಾಡಿದ್ದಾರೆ. ಮದನಪಲ್ಲಿಯಲ್ಲಿ ಹಳೇ ಪ್ರಕರಣಗಳ ಪೊಲೀಸರು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ. ಮದನಪಲ್ಲಿ ಸೇರಿದಂತೆ ಹಲವಡೆ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಆಂಧ್ರದ ರಕ್ತ ಚರಿತ್ರೆ ಸೇಡಿಗೆ ಕರ್ನಾಟಕದಲ್ಲಿ ಸ್ಪಾಟ್ ಫಿಕ್ಸ್
ಶಿವಶಂಕರ್ ರೆಡ್ಡಿ 17ನೇ ವಯಸ್ಸಿಗೆ ಮೊದಲ ಕೊಲೆಯಲ್ಲಿ ಭಾಗಿಯಾಗಿದ್ದನು. ಇದೇ ಕಾರಣಕ್ಕೆ ಶಿವಶಂಕರ್ ರೆಡ್ಡಿ ಕೊಲೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ. ಮದನಪಲ್ಲಿಯ ಪೆದ್ದಪಲ್ಲಿ ಶಿವಾರೆಡ್ಡಿ ಅಲಿಯಾಸ್ ಶಿವಶಂಕರ್ ರೆಡ್ಡಿಯನ್ನ ಹೊಡೆಯಲು ಆಗಲ್ಲ ಅಂತ ಬೆಂಗಳೂರಿನಲ್ಲಿ ಅಟ್ಯಾಕ್ ಮಾಡಲಾಗಿತ್ತು. ಸುಪಾರಿ ಕಿಲ್ಲರ್ಸ್ ಮೂಲಕ ಕೊಲೆಗೆ ಯತ್ನಿಸಿರುವ ಸಾಧ್ಯತೆ ಇದೆ. ಕೊಲೆ ಪ್ರಕರಣದ ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಶಿವಶಂಕರ್ ರೆಡ್ಡಿ ವೈಎಸ್ಆರ್ ಕಾಂಗ್ರೆಸ್ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದನಂತೆ. ಮದನಪಲ್ಲಿ ವಿಧಾನಸಭಾ ಕ್ಷೇತ್ರದ ಯೂತ್ ಘಟಕದಲ್ಲಿ ಶಿವಶಂಕರ್ ರೆಡ್ಡಿ ಸಕ್ರಿಯವಾಗಿದ್ದಾನೆ ಅಂತ ತಿಳಿದು ಬಂದಿದೆ.