ಬೆಂಗಳೂರು: ಮನೆ ಬೀಗ ಮುರಿದು ₹11.75 ಲಕ್ಷ ಬೆಲೆಯ ಚಿನ್ನ, .5 ಲಕ್ಷ ಹಣ ಕಳ್ಳತನ
ಯಾರು ಇಲ್ಲದ ವೇಳೆ ಬೀಗ ಮುರಿದು ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಲಾಕರ್‌ನಲ್ಲಿದ್ದ .5 ಲಕ್ಷ ನಗದು ಸೇರಿದಂತೆ .11.75 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು (ಫೆ.10) : ಯಾರು ಇಲ್ಲದ ವೇಳೆ ಬೀಗ ಮುರಿದು ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಲಾಕರ್‌ನಲ್ಲಿದ್ದ .5 ಲಕ್ಷ ನಗದು ಸೇರಿದಂತೆ .11.75 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶಾಂತಿನಗರದ ಸ್ವಸ್ತಿಕ್ ಕ್ರಾಸ್‌ನಲ್ಲಿ ಶಿಕ್ಷಕಿ ಅನುಪಮಾ ಪೈ (46) ಅವರ ತವರು ಮನೆಯಲ್ಲಿ ಫೆ.7ರಂದು ದುಷ್ಕರ್ಮಿಗಳು ಈ ದುಷ್ಕೃತ್ಯ ಎಸಗಿದ್ದಾರೆ.
ದೂರುದಾರರಾದ ಅನುಪಮಾ ಅವರು ಫೆ.7ರಂದು ಬೆಳಗ್ಗೆ 7ಕ್ಕೆ ತವರು ಮನೆಗೆ ಬಂದಿದ್ದರು. ಅಂದು ಸಂಜೆ 4ಕ್ಕೆ ಕಾರ್ಯ ನಿಮಿತ್ತ ಜಯನಗರಕ್ಕೆ ತೆರಳಿದ್ದರು. ಎಂದಿನಂತೆ ಅನುಪಮಾ ಅವರ ವೃದ್ಧ ತಂದೆ-ತಾಯಿ ಸಂಜೆ 5ಕ್ಕೆ ಲಾಲ್‌ಬಾಗ್ ಉದ್ಯಾನಕ್ಕೆ ವಾಯು ವಿಹಾರಕ್ಕೆ ತೆರಳಿದ್ದರು. ವಾಯು ವಿಹಾರ ಮುಗಿಸಿ ಸಂಜೆ 6.40ರ ಸುಮಾರಿಗೆ ಮನೆಗೆ ವಾಪಾಸಾದಾಗ ಮನೆಗಳವು ಪ್ರಕರಣ ಬೆಳಕಿಗೆ ಬಂದಿದೆ.
Crime News: ದೇವಸ್ಥಾನದಲ್ಲಿ ಕದ್ದು ಪರಾರಿಯಾಗಲು ಯತ್ನ; ಅನ್ಯಕೋಮಿನ ಕಳ್ಳರಿಗೆ ಜನರಿಂದ ಬಿತ್ತು ಗೂಸಾ
ದುಷ್ಕರ್ಮಿಗಳು ಮನೆಯ ಮುಖ್ಯದ್ವಾರದ ಬೀಗ ಮೀಟಿ ಮನೆ ಪ್ರವೇಶಿಸಿದ್ದಾರೆ. ಬಳಿಕ ಬೆಡ್‌ರೂಮ್‌ಗೆ ನುಗ್ಗಿ ಬೀರುವಿನ ಲಾಕರ್ ತೆರೆದು .5 ಲಕ್ಷ ನಗದು ಸೇರಿದಂತೆ ಸುಮಾರು 150 ಗ್ರಾಂ ತೂಕದ ಚಿನ್ನಾಭರಣ, ಡೆಬಿಡ್ ಕಾರ್ಡ್‌ಗಳು ಸೇರಿದಂತೆ ವಿವಿಧ ದಾಖಲೆ ಕದ್ದು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಕಳ್ಳತನಕ್ಕೂ ಮುನ್ನ ಮನೆಯ ಸಿಸಿಟಿವಿ ಕ್ಯಾಮರಾಗಳನ್ನು ಒಡೆದು ಹಾನಿಗೊಳಿಸಿದ್ದಾರೆ. ಅನುಪಮಾ ಅವರ ತಂದೆಗೆ ಆರೋಗ್ಯ ಸರಿ ಇಲ್ಲದ ಸಂದರ್ಭದಲ್ಲಿ ಆರೈಕೆಗೆ ಬರುತ್ತಿದ್ದ ಶಂಕರ್ ಎಂಬ ವ್ಯಕ್ತಿ ಮನೆಗೆ ನುಗ್ಗಿ ಕಳ್ಳತನ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಬಡ್ಡಿ ಆಡುತ್ತಿದ್ದ ವಿದ್ಯಾರ್ಥಿನಿ ಹಠಾತ್ ಕುಸಿದು ಬಿದ್ದು ಸಾವು
ಆನೇಕಲ್: ಕಾಲೇಜಿನ ವಾರ್ಷಿಕೋತ್ಸವ ಅಂಗವಾಗಿ ಕಬಡ್ಡಿ ಆಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ಹಠಾತ್ತನೆ ಸಾವಿಗೀಡಾದ ಘಟನೆ ಅತ್ತಿಬೆಲೆ ಠಾಣಾ ವ್ಯಾಪ್ತಿ ಮಂಚನಹಳ್ಳಿ ರಸ್ತೆಯ ಸೈಂಟ್ ಫಿಲೋಮಿನಾ ಪಿಯು ಕಾಲೇಜಿನÜಲ್ಲಿ ನಡೆದಿದೆ.
ಸಂಗೀತಾ (16) ಮೃತ ವಿದ್ಯಾರ್ಥಿನಿ. ಧಾರವಾಡ ಮೂಲದ ಈಕೆಯ ತಂದೆ ರಮೇಶ ಶಾನವಾಡ ಕಾರ್ಮಿಕರಾಗಿದ್ದಾರೆ. ತಾಯಿ ಗೃಹಿಣಿ ಅತ್ತಿಬೆಲೆ ಕೈಗಾರಿಕಾ ಪ್ರದೇಶದ ಇಚ್ಛಂಗೂರಿನಲ್ಲಿ ವಾಸವಿದ್ದಾರೆ. ವಿದ್ಯೆ, ಕ್ರೀಡೆ, ಹಾಗೂ ಸಾಂಸ್ಕೃತಿಕ ವಿಭಾಗದಲ್ಲಿ ಆಕೆ ಚುರುಕಾಗಿದ್ದಳು.
ಫುಡ್ ಪಾಯ್ಸನ್‌ಗೆ ನರ್ಸಿಂಗ್ ವಿದ್ಯಾರ್ಥಿಗಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು
ಕಬಡ್ಡಿ ಪಂದ್ಯದಲ್ಲಿ ರೈಡರ್ ಆಗಿ ಎದುರಿನ ತಂಡದ ಕಡೆ ತೆರಳಿದ ಈಕೆ ವಾಪಸ್ ಬಂದು ಗೆರೆ ಪಟ್ಟೆಯ ಮೇಲೆ ನಿಂತವಳು ಹಾಗೆಯೇ ಕುಸಿದು ಬಿದ್ದಳು. ಕೂಡಲೇ ಸಹಪಾಠಿಗಳು ಹಾಗೂ ಶಿಕ್ಷಕರು ಈಕೆಯನ್ನು ಸಮೀಪದ ಆಸ್ಪತ್ರೆಗೆ ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ದರು. ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು.