Asianet Suvarna News Asianet Suvarna News

ಒಂದು ನೋಟು ಕೊಟ್ಟರೆ ನಾಲ್ಕು ನಕಲಿ ನೋಟು ಫ್ರೀ: ಕೋಟಿ ರೂ. ಪೇಪರ್‌ ವಶ

ಬೆಂಗಳೂರಿನ ಹೆಣ್ಣೂರಿನ ಮನೆಯಲ್ಲಿ ನಕಲಿ ನೋಟುಗಳನ್ನು ಸಿದ್ಧಪಡಿಸಿ ಒಂದು ಅಸಲಿ ನೋಟು ಕೊಟ್ಟರೆ, ನಾಲ್ಕು ನಕಲಿ ನೋಟು ನೀಡುತ್ತಿದ್ದ ದಂಧೆಯನ್ನು ಸಿಸಿಬಿ ಪೊಲೀಸರು ಬೇಧಿಸಿದ್ದಾರೆ. ಸ್ಥಳದಲ್ಲಿ ಲಭ್ಯವಾದ 1 ಕೋಟಿ ರೂ. ಮೌಲ್ಯದ ಬ್ಲಾಕ್‌ ಪೇಪರ್, ಕೆಮಿಕಲ್, ನೋಟು ಪ್ರಿಂಟಿಂಗ್ ಮಷಿನ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

Give one note and get four fake notes free Crore Rs Paper possession sat
Author
First Published Dec 14, 2022, 1:35 PM IST

ಬೆಂಗಳೂರು (ಡಿ.14): ಸಿಲಿಕಾನ್‌ ಸಿಟಿ ಬೆಂಗಳೂರು ತಂತ್ರಜ್ಞಾನವಾಗಿ ಬೆಳೆದು ದೇಶಕ್ಕೆ ಪ್ರಸಿದ್ಧಿಯಾಗಿದೆ. ಆದರೆ, ತಂತ್ರಜ್ಞಾನವನ್ನು ದುರುಪಯೋಗಕ್ಕೆ ಬಳಸಿಕೊಳ್ಳುವವರ ಸಂಖ್ಯೆಯೂ ಸಾಕಷ್ಟಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ನಕಲಿ ನೋಟು ಸಿದ್ಧಪಡಿಸಿ ತಂದು, ಒಂದು ಅಸಲಿ ನೋಟನ್ನು ಕೊಟ್ಟರೆ ನಾಲ್ಕು ನಕಲಿ ನೋಟುಗಳನ್ನು ನೀಡುತ್ತಿದ್ದ ಗ್ಯಾಂಗ್‌ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.

ನಕಲಿ ನೋಟು ದಂಧೆ ಮಾಡುತ್ತಿದ್ದ ಆರೋಪಿಗಳು ಒಂದು ನೋಟ್ ಕೊಟ್ಟರೆ, ನಾಲ್ಕು ನೋಟ್ ಆಗುವಂತಹ ಬ್ಲಾಕ್ ಪೇಪರ್‌ಗಳನ್ನು ನೀಡುತ್ತಿದ್ದರು. ಜೊತೆಗೆ, ಕೇವಲ ಬ್ಲಾಕ್ ಪೇಪರ್‌ಗಳನ್ನು ಕೊಡದೇ ಅದಕ್ಕೆ ಬೆರೆಸಲು ಅನುಕೂಲ ಆಗುವಂತೆ ಒಂದಷ್ಟು ಅಯೋಡಿನ್ ಹಾಗೂ ಇತರೆ ರಾಸಾಯನಿಕ (ಕೆಮಿಕಲ್)ಗಳನ್ನು ಕೊಡುತ್ತಿದ್ದರು. ಅಸಲಿ ನೋಟಿ ಕೊಟ್ಟು ಬ್ಲಾಕ್‌ ಪೇಪರ್‌ ಪಡೆದವರು ಮನೆಗೆ ತೆಗೆದುಕೊಂಡು ಹೋಗಿ ಕೆಮಿಕಲ್‌ಗಳನ್ನು ಬೆರೆಸಿ ಅದರಲ್ಲಿ ಬ್ಲಾಕ್‌ ಪೇಪರ್‌ಗಳನ್ನು ಅದ್ದಿದರೆ ನಕಲಿ ನೋಟು ಸಿದ್ಧವಾಗುತ್ತವೆ ಎಂದು ನಂಬಿಸುತ್ತಿದ್ದರು.

1 ಕೋಟಿ ಮೌಲ್ಯದ ಬ್ಲಾಕ್‌ ಪೇಪರ್‌ ವಶ:
ನಕಲಿ ನೋಟು ಅಡ್ಡೆಯಲ್ಲಿ ಅರೋಪಿಗಳ ಬಳಿ ಸುಮಾರು ಒಂದು  ಕೋಟಿ ರೂಪಾಯಿ ಮೌಲ್ಯದ ಬ್ಲಾಕ್ ಪೇಪರ್ ಗಳು ಲಭ್ಯವಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಲ್ಲಿ ನಕಲಿ ಭಾರತೀಯ, ಅಮೇರಿಕ ಸೇರಿ ವಿವಿಧ ವಿದೇಶಿ  ನಕಲಿ ನೋಟುಗಳು ಪತ್ತೆಯಾಗಿವೆ. ಅಡ್ಡೆಯಲ್ಲಿ ಕಲರ್ ಪ್ರಿಂಟರ್ ಹಾಗೂ ಕೆಮಿಕಲ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನು ಆರೋಪಿಗಳು ಯುಎಸ್ ಡಾಲರ್ ಪಡೆದು ನಕಲಿ ಬ್ಲಾಕ್ ಪೇಪರ್‌ಗಳನ್ನು ನೀಡುತ್ತಿದ್ದರು. ಈ ರೀತಿ ನಕಲಿ ನೋಟು ದಂಧೆಯು ಅಮೇರಿಕಾದದಲ್ಲಿ ಹೆಚ್ಚಾಗಿ ನಡೀತಾ ಇದ್ದು ಈಗ ರಾಜ್ಯದಲ್ಲೂ ಆಕ್ಟೀವ್ ಆಗಿದೆ. 

ದೇಶದಲ್ಲಿ ನಕಲಿ ನೋಟು ಪ್ರಮಾಣ ಭಾರೀ ಏರಿಕೆ!

ಖಚಿತ ಮಾಹಿತಿ ಮೇರೆಗೆ ದಾಳಿ: ಈ ಕುರಿತು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಬ್ಲಾಕ್ ಅಂಡ್ ಪೇಪರ್ ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರಕಿತ್ತು. ಹೀಗಾಗಿ ನಮ್ಮ ತಂಡ ದಂಧೆ ನಡೆಯುತ್ತಿದ್ದ ಮನೆ ಮೇಲೆ ದಾಳಿ ಮಾಡಿತ್ತು. ಈ ವೇಳೆ ಮನೆಯಲ್ಲಿ ನೋಟ್ ತಯಾರಿಸುವ ಮಷಿನ್ ಪತ್ತೆಯಾಗಿದೆ. ಆರೋಪಿಗಳು 500 ರೂಪಾಯಿ ಒರಿನಲ್ ನೋಟ್ ಕೊಟ್ಟರೆ, 500 ಮುಖ ಬೆಲೆಯ 4 ನಕಲಿ ಪೇಪರ್ ನೋಟ್‌ಗಳನ್ನು ಕೊಡುತ್ತಿದ್ದರು. ಜೊತೆಗೆ, ನೀವು ಮನೆಗೆ ಹೋಗಿ ಕೆಮಿಕಲ್ ಮಿಕ್ಸ್ ಮಾಡಿದರೆ ನೋಟ್ ಆಗುತ್ತೆ ಎಂದು ನಂಬಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಅಲ್ಲಿ ಲಭ್ಯವಿದ್ದ 1 ಕೋಟಿ ರೂ. ಮೌಲ್ಯದ ಬ್ಲಾಕ್‌ ಪೇಪರ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನು ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದೇವೆ ಎಂದು ತಿಳಿಸಿದರು.

ಬ್ಯಾಂಕಿಗೆ ನಕಲಿ ನೋಟು ಹಾಕಿ ಹೊಸ ನೋಟು ಕೇಳಿದವಳ ಬಂಧನ

ನಕಲಿ ನೋಟಿನ ಪ್ರಮಾಣ ಭಾರಿ ಏರಿಕೆ: ಇನ್ನು ಇದೇ ವರ್ಷ ಮೇ ತಿಂಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ ಬಿಡುಗಡೆ ಮಾಡಿದ್ದ ವರದಿಯಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ 2021-22ನೇ ಸಾಲಿನಲ್ಲಿ ನಕಲಿ ನೋಟುಗಳ ಪ್ರಮಾಣದಲ್ಲಿ ಭಾರಿ ಪರಮಾಣದಲ್ಲಿ ಏರಿಕೆ ಆಗಿತ್ತು ಎಂದು ತಿಳಿದುಬಂದಿತ್ತು. ಇದು ಕೇಂದ್ರ ಸರ್ಕಾರ 2016ರಲ್ಲಿ ಜಾರಿಗೊಳಿಸಿದ ಅಪನದೀಕರಣವನ್ನು ಬಹುವಾಗಿ ವಿರೋಧಿಸಿದ್ದ ವಿಪಕ್ಷಗಳಿಗೆ ಸರ್ಕಾರದ ವಿರುದ್ಧ ಮುಗಿಬೀಳಲು ಹೊಸ ಅಸ್ತ್ರ ಕಲ್ಪಿಸಿದೆ ಎಂದು ಹೇಳಲಾಗಿತ್ತು. 2016ರ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರ ಅಪನಗದೀಕರಣದ ಘೋಷಿಸಿದಾಗ, ಕಪ್ಪುಹಣ ಮತ್ತು ನಕಲಿ ನೋಟುಗಳ ನಿರ್ಮೂಲನೆಯೇ ಮುಖ್ಯ ಉದ್ದೇಶ ಎಂದು ಹೇಳಿತ್ತು. ಆದರೆ ಅಪನಗದೀಕರಣ 5 ವರ್ಷದ ಬಳಿಕವೂ ಸಮಸ್ಯೆ ಕಡಿಮೆಯಾಗುವುದರ ಬದಲು ದ್ವಿಗುಣವಾಗಿರುವುದು ಕಳವಳಕ್ಕೆ ಕಾರಣವಾಗಿದೆ.

Follow Us:
Download App:
  • android
  • ios