Asianet Suvarna News Asianet Suvarna News

ಬಾಯ್‌ಫ್ರೆಂಡ್‌ನ ಮರ್ಮಾಂಗ ಕತ್ತರಿಸಿ ಟಾಯ್ಲೆಟ್‌ ಹಾಕಿದ ಗೆಳತಿ, ಕಾರಣ ಕೇಳಿ ಪೊಲೀಸರೇ ಶಾಕ್!

ಕೆಲ ವರ್ಷಗಳಿಂದ ಪ್ರೀತಿಯಲ್ಲಿದ್ದರು. ಪ್ರೀತಿ ಗಾಢವಾಗಿದೆ. ದೈಹಿಕ ಸಂಪರ್ಕವೂ ನಡೆದಿದೆ. ಹೀಗೆ ಮುಂದುವರಿಯುತ್ತಿದ್ದಂತೆ ಮದುವೆಗೆ ಗೆಳತಿ ಒತ್ತಾಯಿಸಿದ್ದಾಳೆ. ಮದುವೆ ಫಿಕ್ಸ್ ಆಗಿದೆ, ದಿನಾಂಕ ಹತ್ತಿರ ಬಂದಿದೆ. ಇದರ ನಡುವೆ ಸಮ್ಮಿಲನಕ್ಕೆ ಬಂದ ತನ್ನ ಬಾಯ್‌ಫ್ರೆಂಡ್‌ನ ಖಾಸಗಿ ಅಂಗವನ್ನೇ ಕತ್ತರಿಸಿ ಟಾಯ್ಲೆಟ್‌ಗೆ ಹಾಕಿ ಫ್ಲಶ್ ಮಾಡಿದ್ದಾಳೆ.ಕಾರಣ ಕೇಳಿ ಪೊಲೀಸರೇ ದಂಗಾಗಿದ್ದಾರೆ.
 

Girlfriend cut boyfriend private part and flushed it down toilet at Bihar ckm
Author
First Published Jul 1, 2024, 7:33 PM IST

ಪಾಟ್ನಾ(ಜು.01) ಸುದೀರ್ಘ ವರ್ಷಗಳ ಪ್ರೀತಿ ಕೊನೆಗೂ ಮದುವೆಯ ಅರ್ಥ ಪಡೆದಿದೆ. ಪ್ರೀತಿ ಗಾಢವಾಗಿದ್ದ ಕಾರಣ ದೈಹಿಂಕ ಸಂಪರ್ಕ ಹಲವು ಬಾರಿ ನಡೆದಿದೆ. ಇದರ ನಡುವೆ  ಬಾಯ್‌ಫ್ರೆಂಡ್‌ಗೆ ಮದುವೆಯಾಗುವಂತೆ ಹೇಳಿದ್ದರೂ ಮುಂದೂಡಿದ್ದ. ಆದರೆ ಕೊನೆಗೆ ಒಪ್ಪಿಕೊಂಡ ಖುಷಿಯಲ್ಲಿ ತಯಾರಿಗಳು ಆರಂಭಗೊಂಡಿದೆ. ಮದುವೆ ದಿನಾಂಕ ಹತ್ತಿರಬಂದಿದೆ. ಇದರ ನಡುವೆ ಬಾಯ್‌ಫ್ರೆಂಡ್ ಸಮ್ಮಿಲನಕ್ಕೆ ಬಂದಿದ್ದಾನೆ. ಈ ಪ್ರಣಯ ಹಕ್ಕಿಗಳಿಗೆ ಸರಸ ಸಲ್ಲಾಪ ಹೊಸದಾಗಿರಲಿಲ್ಲ. ಆದರೆ ಸಮ್ಮಿಲನ ಬಂದವನ ಮರ್ಮಾಂಗ ಕತ್ತರಿಸಿದ ಗೆಳತಿ ಟಾಯ್ಲೆಟ್‌ಗೆ ಹಾಕಿ ಫ್ಲಶ್ ಮಾಡಿದ್ದಾಳೆ. ಈ ಘಟನೆ ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದಿದೆ. ಕಾರಣ ಕೇಳಿದ ಪೊಲೀಸರು ಇಬ್ಬರ ವಿರುದ್ದವೂ ಪ್ರಕರಣ ದಾಖಲಿಸಿದ್ದಾರೆ. ಬಾಯ್‌ಫ್ರೆಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಗೆಳತಿ ಜೈಲು ಪಾಲಾಗಿದ್ದಾಳೆ.

ಮಧೌರದ 12ನೇ ವಾರ್ಡ್‌ನ ಕೌನ್ಸಿಲರ್‌ ವೇದಪ್ರಕಾಶ್‌ಗೆ ಅದೇ ವಲಯದ ನರ್ಸಿಂಗ್ ಹೋಮ್ ಮಾಲಕಿ ಜೊತೆಗೆ ಪ್ರೀತಿ ಶುರುವಾಗಿದೆ. ಆಕೆಯ ಹಿಂದೆ ಬಿದ್ದು ಪ್ರೀತಿ ನಿವೇದನೆ ಮಾಡಿದ್ದಾನೆ. ಆಕೆಯೂ ಒಪ್ಪಿಕೊಂಡಿದ್ದಾಳೆ. ಬಳಿಕ ಪ್ರೀತಿ ಗಾಢವಾಗಿದೆ. ಆತ್ಮೀಯರಾಗಿದ್ದಾರೆ. ಇದರ ನಡುವೆ ದೈಹಿಕ ಸಂಪರ್ಕವೂ ಬೆಳೆದಿದೆ. ಹೀಗೆ ನಿರಂತರವಾಗಿ ನಡೆಯುತ್ತಲೇ ಇತ್ತು.

ನಡು ರಸ್ತೆಯಲ್ಲಿ ಯುವತಿಗೆ ಖಾಸಗಿ ಅಂಗ ತೋರಿಸಿ ಹಸ್ತಮೈಥುನ, ಕಾಮುಕನ ಅಸಹ್ಯ ದೃಶ್ಯ ಸೆರೆ!

ಇತ್ತ ಗಳೆತಿ ಮದುವೆಗೆ ಹಲವು ಬಾರಿ ಒತ್ತಾಯಿಸಿದ್ದಾಳೆ. ಈ ವೇಳೆ ಒಂದೊಂದೆ ಕಾರಣ ನೀಡಿದ ವೇದಪ್ರಕಾಶ್ ಮದುವೆಯನ್ನು ಮುಂದೂಡಿದ್ದಾನೆ. ಪ್ರೀತಿ, ಲೈಂಗಿಕ ಸಂಪರ್ಕ ಸುದೀರ್ಘ ವರ್ಷಗಳಿಂದ ಮುಂದುವರಿಯುತ್ತಾ ಬಂದಿದೆ. ಕೊನೆಗೆ ಮದುವೆ ಗೆಳತಿಯ ಒತ್ತಾಯ ಹೆಚ್ಚಾಗಿದೆ. ಹಲವು ಬಾರಿ ಒತ್ತಾಯಿಸಿದ ಕಾರಣ ಮದುವೆಗೆ ಒಪ್ಪಿಕೊಂಡಿದ್ದಾನೆ. 

ಇತ್ತ ತಯಾರಿಗಳು ಆರಂಭಗೊಂಡಿದೆ. ಮದುವೆ ದಿನಾಂಕ ಫಿಕ್ಸ್ ಮಾಡಲಾಗಿದೆ. ಮಂಟಪ ಬುಕ್ ಮಾಡಲಾಗಿದೆ. ಮನೆಯಲ್ಲಿ ಸಂಭ್ರಮ ಶುರುವಾಗಿದೆ. ಮದುವೆ ದಿನಾಂಕ ಹತ್ತಿರಬರುತ್ತಿದ್ದಂತೆ ನಾನು ಮದುವೆಯಾಗಲ್ಲ ಎಂದು ಹೇಳತೊಡಗಿದೆ. ನಾವು ಹೀಗೆ ಇರೋಣ, ಮದುವೆ ಯಾಕೆ ಎಂದು ಪ್ರಶ್ನಿಸಲು ಆರಂಭಿಸಿದ್ದ. 

ವೇದಪ್ರಕಾಶ್ ಮನ ಒಲಿಸಲು ಹಲವು ಪ್ರಯತ್ನ ಮಾಡಿದ್ದಾಳೆ. ಆದರೆ ಆತ ಮಾತ್ರ ಮದುವೆ ಯಾಕೆ, ಹೀಗೆ ಇದ್ದರೆ ಒಕೆ ಎನ್ನುತ್ತಲೇ ಬಂದಿದ್ದಾನೆ. ಮದುವೆ ದಿನಾಂಕ ಹತ್ತಿರಬಂದಿದೆ. ಗೆಳತಿ ಮೆಹಂದಿ ಹಾಕಿದ ಬೆನ್ನಲ್ಲೇ ಕರೆ ಮಾಡಿದ ವೇದಪ್ರಕಾಶ್ ಮದುವೆ ಕ್ಯಾನ್ಸಲ್ ಮಾಡಲು ಸೂಚಿಸಿದ್ದಾನೆ. ತಾಳ್ಮೆ ಕಳೆದುಕೊಳ್ಳದ ಗೆಳತಿ, ಫೋನ್‌ನಲ್ಲಿ ಬೇಡ, ಭೇಟಿಯಾಗಿ ಮಾತನಾಡೋಣ ಎಂದಿದ್ದಾಳೆ. 

ಬಾಯ್‌ಫ್ರೆಂಡ್ ಭೇಟಿಯಾದ ಮೊದಲು ನಾವು ಎಂದಿನಂತೆ ಲೈಂಗಿಕ ಕ್ರಿಯೆಯಲ್ಲಿ ತೊಡಗೋಣ, ಬಳಿಕ ಮದುವೆ ಕುರಿತು ಮಾತನಾಡೋಣ ಎಂದಿದ್ದಾಳೆ. ಅಣ್ಣ ಫುಲ್ ಖುಷಿಯಾಗಿದ್ದಾನೆ. ಆದರೆ ತಾಳ್ಮೆಯಿಂದಲೇ ಇದ್ದ ಗೆಳತಿ, ವೇದಪ್ರಕಾಶ್ ಮರ್ಮಾಂಗ ಕತ್ತರಿಸಿದ್ದಾಳೆ. ಬಳಿಕ ಟಾಯ್ಲಟ್ ಹಾಕಿ ಫ್ಲಶ್ ಮಾಡಿದ್ದಾಳೆ. ಇತ್ತ ಚೀರಾಡುತ್ತಾ ಪೊಲೀಸರಿಗೆ ಫೋನ್ ಮಾಡಿ ವೇದಪ್ರಕಾಶ್ ಅಸ್ವಸ್ಥಗೊಂಡು ಕುಸಿದು ಬಿದಿದ್ದಾನೆ. 

ಅಕ್ರಮ ಸಂಬಂಧ ಶಂಕೆ, ಪತ್ನಿಯ ಗುಪ್ತಾಂಗಕ್ಕೆ ಕಬ್ಬಿಣ ಚೈನ್‌ನಿಂದ ಬೀಗ ಹಾಕಿದ ಪತಿ!

ಪೊಲೀಸರು ಸ್ಥಳಕ್ಕೆ ಧಾವಿಸಿ ವೇದಪ್ರಕಾಶ್‌ನನ್ನು ಆಸ್ಪತ್ರೆದಾಖಲಿಸಿದ್ದಾರೆ. ಇತ್ತ ಗೆಳತಿಯನ್ನು ಬಂಧಿಸಿದ್ದಾರೆ. ಬಂಧನ ಬಳಿಕ ಪೊಲೀಸರಿಗೆ ಕಾರಣ ಹೇಳಿದ್ದಾಳೆ. ಇಷ್ಟೇ ಅಲ್ಲ ನಾನು ಆತನ ಮರ್ಮಾಂಗ ಕತ್ತರಿಸಿದ್ದಕೆ ಯಾವುದೇ ಪಶ್ಚಾತ್ತಾಪ ಇಲ್ಲ. ಆತ ಇನ್ನೆಂದು ದೈಹಿಕ ಸಂಪರ್ಕ ಮಾಡಬಾರದು. ಪ್ರೀತಿ ನಾಟಕ, ದೈಹಿಕ ಸಂಪರ್ಕಕ್ಕೆ ಒಕೆ ಎನ್ನುವ ಈತ ದೊಡ್ಡ ಪಾಪಿ ಎಂದು ಪೊಲೀಸರಿಗೆ ಹೇಳಿದ್ದಾಳೆ.
 

Latest Videos
Follow Us:
Download App:
  • android
  • ios