ಶಾಲಾ ಪಿಕ್‌ನಿಕ್‌ನಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ, ಬಸ್ ಸಿಬ್ಬಂದಿಯ ಅಸಲಿ ಆಟ ಬಯಲು!
ಶಾಲಾ ಪ್ರವಾಸದ ಸಂಭ್ರಮದಲ್ಲಿದ್ದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಬಸ್ ಸಿಬ್ಬಂದಿಯೇ ಲೈಂಗಿಕ ಕಿರುಕುಳ ನೀಡಿದ ಘಟನೆ ವರದಿಯಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಭಾರಿ ಸಂಖ್ಯೆಯಲ್ಲಿ ಪೋಷಕರು ಶಾಲೆಗೆ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ.
ಮುಂಬೈ(ಫೆ.22) ಪಠ್ಯದ ಜೊತೆಗೆ ಶಾಲಾ ಮಕ್ಕಳ ಪ್ರವಾಸ ಅತೀ ಅವಶ್ಯಕ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳ ಪ್ರವಾಸಕ್ಕೆ ಹೋಗಿ ಸುರಕ್ಷಿತವಾಗಿ ಮರಳಿ ಮನೆ ಸೇರುವವರೆಗೆ ಪೋಷಕರ ಎದೆಬಡಿತ ಹೆಚ್ಚಾಗಿರುತ್ತದೆ. ಇದಕ್ಕೆ ಹಲವು ಕಾರಣಗಳೂ ಇವೆ. ಇದೀಗ ಶಾಲಾ ಮಕ್ಕಳ ಪಿಕ್‌ನಿಕ್‌ನಲ್ಲಿ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಪಿಕ್‌ನಿಕ್ ವೇಳೆ 8ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರಿಗೆ ಬಸ್ ಸಿಬ್ಬಂದಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಮುಂಬೈನ ಥಾಣೆಯಲ್ಲಿ ನಡೆದಿದೆ.
ಖಾಸಗಿ ಶಾಲೆ ಮಕ್ಕಳ ಪಿಕ್‌ನಿಕ್ ಆಯೋಜಿಸಿತ್ತು. 8ನೇ ತರಗತಿ ವಿದ್ಯಾರ್ಥಿಗಳು ಈ ಸಂಭ್ರಮದಲ್ಲಿ ಬಸ್ ಹತ್ತಿದ್ದಾರೆ. ಮುಂಬೈ ಹೊರವಲಯ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಪಿಕ್‌ನಿಕ್ ತೆರಳಲಾಗಿದೆ. ಇದಕ್ಕಾಗಿ ಖಾಸಗಿ ಬಸ್ ಬುಕ್ ಮಾಡಲಾಗಿದೆ. ಆದರೆ ವಿದ್ಯಾರ್ಥಿನಿಯರು ಬಸ್ ಹತ್ತುವ ವೇಳೆ, ಪ್ರಯಾಣದ ವೇಳೆ ಸೇರಿದಂತೆ ಹಲವು ಸಮಯದಲ್ಲಿ ವಿದ್ಯಾರ್ಥಿನಿಯರನ್ನು ಅಸಭ್ಯವಾಗಿ ಸ್ಪರ್ಶಿಸಿ ಕಿರುಕುಳ ನೀಡಿದ್ದಾನೆ. ವಿದ್ಯಾರ್ಥಿನಿಯರ ತೊಡೆ, ಎದೆ, ದೇಹದ ಹಲವು ಭಾಗಗಳನ್ನು ಅಚಾನಕ್ಕಾಗಿ ಸ್ಪರ್ಶಿಸಿದಂತೆ ನಟಿಸಿದ್ದಾನೆ. ಈ ಕುರಿತು ಪಿಕ್‌ನಿಕ್‌ನಿಂದ ಮರಳಿದ ವಿದ್ಯಾರ್ಥಿನಿಯರು ಪೋಷಕರಲ್ಲಿ ಹೇಳಿದ್ದಾರೆ.
ಅಪ್ರಾಪ್ತ ಬಾಲಕನನ್ನು ಸೆಕ್ಸ್‌ಗೆ ಬಳಸಿದ ಆರೋಪ, ಕೋರ್ಟ್‌ಗೆ ಹಾಜರಾಗಿ ಮೌನಕ್ಕೆ ಶರಣಾದ ನಟಿ!
ಲೈಂಗಿಕ ಕಿರುಕುಳ ಕುರಿತು ಹಲವು ವಿದ್ಯಾರ್ಥಿನಿಯರು ಪೋಷಕರಲ್ಲಿ ಹೇಳಿಕೊಂಡಿದ್ದಾರೆ. ಹೀಗಾಗಿ ಶಾಲೆಗೆ ಆಗಮಿಸಿದ ಪೋಷಕರು ಈ ಮಾಹಿತಿ ತಿಳಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ವೇಳೆ ಬಸ್‌ನಲ್ಲಿ ಈರೀತಿಯ ಘಟನೆ ನಡೆದಿರುವ ಕುರಿತು ನಮಗೆ ಮಾಹಿತಿ ಇಲ್ಲ ಎಂದು ಪಿಕ್‌ನಿಕ್ ವೇಳೆ ವಿದ್ಯಾರ್ಥಿಗಳ ಜೊತೆ ತೆರಳಿದ್ದ ಮೂವರು ಶಿಕ್ಷಕ-ಶಿಕ್ಷಕಿಯರು ಹೇಳಿದ್ದಾರೆ. ಈ ಮಾತು ಮಕ್ಕಳ ಪೋಷಕರನ್ನು ಮತ್ತಷ್ಟು ಕೆರಳಿಸಿದೆ. ಇತ್ತ ಶಾಲೆ ಕೂಡ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಪೋಷಕರು ನೇರವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಸ್ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 27 ವರ್ಷದ ಈತ ಹಲವು ವರ್ಷಗಳಿಂದ ಈ ರೀತಿ ಶಾಲಾ ಪಿಕ್‌ನಿಕ್, ಪ್ರವಾಸ ಸೇರಿದಂತೆ ಹಲವು ದೂರ ಪ್ರಯಾಣದಲ್ಲಿ ಬಸ್ ಸಿಬ್ಬಂದಿಯಾಗಿ ಕೆಲಸ ಮಾಡಿದ್ದಾನೆ. ಇದೀಗ ಈ ಹಿಂದೆ ಕೂಡ ಇದೇ ರೀತಿಯ ದೌರ್ಜನ್ಯ ನೀಡಿರುವ ಸಾಧ್ಯತೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮಕ್ಕಳು, ಪೋಷಕರು, ಶಾಲಾ ಶಿಕ್ಷಕರ ಹೇಳಿಕೆಯನ್ನು ಪಡೆಯಲಾಗಿದೆ.
ಇತ್ತ ಪೋಷಕರು ಶಾಲೆಗೆ ಜಮಾಯಿಸಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಮಕ್ಕಳ ಸುರಕ್ಷತೆ ಕುರಿತು ಬೇಜವಾಬ್ದಾರಿಯಿಂದ ವರ್ತಿಸಲಾಗಿದೆ. ಮಕ್ಕಳ ಜೊತೆ ತೆರಳಿದ ಶಿಕ್ಷಕರು ಮಕ್ಕಳ ಸಂಪೂರ್ಣ ಸುರಕ್ಷತೆಯ ಜವಾಬ್ದಾರಿ ತೆಗೆದುಕೊಳ್ಳಬೇಕು. ಮಜಾ ಮಾಡಲು ತೆರಳುವುದಲ್ಲ. ಪ್ರವಾಸದ ಮಜಾ ಅನುಭವಿಸಲು ನಿಮ್ಮ ಕುಟುಂಬ, ಆಪ್ತರ ಜೊತೆ ತೆರಳಿ ಶಾಲಾ ಮಕ್ಕಳ ಜೊತೆ ಅಲ್ಲ ಎಂದು ಪೋಷಕರು ಪ್ರತಿಭಟನೆ ಮಾಡಿದ್ದಾರೆ. ಇದರ ಪರಿಣಾಮ ಮೂವರು ಶಿಕ್ಷಕರನ್ನು ಶಾಲಾ ಆಡಳಿತ ಮಂಡಳಿ ಅಮಾನತು ಮಾಡಿದೆ.
ಅಪ್ರಾಪ್ತೆಗೆ ಅನ್ಯಕೋಮಿನ ಯುವಕನಿಂದ ಕಿರುಕುಳ: ಆರೋಪಿ ಬಂಧಿಸಿ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲು