Asianet Suvarna News Asianet Suvarna News

ಚಿಕ್ಕಮಗಳೂರಿನಲ್ಲಿ ಲವ್ ಜಿಹಾದ್ ಆರೋಪ, ತಂಗಿಯ ಫೋಟೋ ಜಾಲತಾಣದಲ್ಲಿ ಹಾಕಿದವನ ವಿರುದ್ಧ ಅಣ್ಣನ ದೂರು

ಕಾಫಿನಾಡಲ್ಲಿ ಮತ್ತೆ ಲವ್ ಜಿಹಾದ್ ಆರೋಪ ಕೇಳಿ ಬಂದಿದ್ದು, ಸಹೋದರಿಯ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಕ್ಕೆ. ಕೊಪ್ಪ ಮೂಲದ ಮೊಹಮ್ಮದ್ ರೋಫ್ ಮೇಲೆ ಸಹೋದರ ಠಾಣೆಗೆ ದೂರು ನೀಡಿದ್ದಾನೆ. ಯುವತಿಯ ಅಣ್ಣ  ಲವ್ ಜಿಹಾದ್ ಪಿತೂರಿ ಆರೋಪ ಮಾಡಿದ್ದರು. ದೂರಿನಲ್ಲಿ ಸೆನ್ ಇನ್ಸೆಪೆಕ್ಟರ್ ಜಾಕೀರ್ ಹುಸೇನ್ ಮೇಲೆಯೂ ಕ್ರಮಕೈಗೊಳ್ಳದ ಆರೋಪ. 

Girl s brother complaint lodged on suspected love jihad case in Chikkamagaluru gow
Author
First Published Nov 19, 2022, 9:25 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ನ.19): ಕಾಫಿನಾಡಲ್ಲಿ ಮತ್ತೆ ಲವ್ ಜಿಹಾದ್ ಆರೋಪ ಕೇಳಿ ಬಂದಿದ್ದು, ಇದು ಖಾಕಿಯ ನೆರಳಲ್ಲೇ ನಡೆದಿದ್ಯಾ ಎಂಬ ಅನುಮಾನ ಆರೋಪ ಕೇಳಿಬಿಂದಿದೆ. ದುಬೈನಲ್ಲಿರುವ ಅನ್ಯ ಕೋಮಿನ ಯುವಕ ಮತ್ತೊಂದು ಕೋಮಿನ ಯುವತಿಯ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಯುವತಿಯ ಅಣ್ಣ 20 ದಿನಗಳ ಹಿಂದೆಯೇ ದೂರು ನೀಡಿದ್ದಾನೆ. ಆದ್ರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಠಾಣೆಯಿಂದ ಠಾಣೆಗೆ ಅಲೆದರೂ ಅಣ್ಣನಿಗೆ ಮಾನಸಿಕ ನೆಮ್ಮದಿ ಸಿಗಲಿಲ್ಲ. ತಂಗಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಬರೋದು ನಿಲ್ಲಲಿಲ್ಲ. ಕೊನೆಗೆ ಅಣ್ಣಾ, ಇನ್ಸ್ ಪೆಕ್ಟರ್ ವಿರುದ್ಧ ಎಸ್ಪಿಗೆ ದೂರು ನೀಡಿದ್ದಾರೆ.

ಯುವತಿಯ ಅಣ್ಣನಿಂದ ಲವ್ ಜಿಹಾದ್ ಪಿತೂರಿ ಆರೋಪ: ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣ ನಿವಾಸಿ ಮಹಮದ್ ರೌಫ್ ಸದ್ಯ ದುಬೈನಲ್ಲಿ ಇದ್ದಾನೆ. ಇನ್ನು ಈಕೆ ಮಾನಸ. ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಶಾನುವಳ್ಳಿ ನಿವಾಸಿ. ಇವರಿಬ್ಬರು ಸ್ನೇಹಿತರೋ, ಪ್ರೇಮಿಗಳೋ ಗೊತ್ತಿಲ್ಲ. ಆದ್ರೆ, ಈ ಮಹಮದ್ ಮಾನಸಾಳ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಇದನ್ನ ಕಂಡ ಅಣ್ಣಾ ಅವನಿಗೂ ವಾರ್ನ್ ಮಾಡಿ ಅಕ್ಟೋಬರ್ 31ಕ್ಕೆ ದೂರು ನೀಡಿದ್ದಾನೆ.

ಹರಿಹರಪುರ ಪೊಲೀಸರು ಅಯ್ಯೋ. ಇದು ಸೈಬರ್ ಕೇಸ್. ಸೆನ್ ಸ್ಟೇಷನ್ ನಲ್ಲಿ ದೂರು ಕೊಡಬೇಕು ಅಂತ ತಲೆತೊಳೆದುಕೊಂಡಿದ್ದಾರೆ. ಮಾನಸಾಳ ಅಣ್ಣಾ ಸೈಬರ್ ಠಾಣೆಯಲ್ಲೂ ದೂರು ನೀಡಿದ್ದಾನೆ. ಆದರೆ, ಸೆನ್ ಕ್ರೈಂ ಇನ್ಸ್ ಪೆಕ್ಟರ್ ನಾಸೀರ್ ಹುಸೇನ್ ದೂರು ನೀಡಿ 20 ದಿನವಾದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಇನ್ಸ್ ಪೆಕ್ಟರ್ ವಿರುದ್ಧ ಎಸ್ಪಿಗೂ ದೂರು ನೀಡಿದ್ದಾರೆ. ಇದೊಂದು ಲವ್ ಜಿಹಾದ್ ಪ್ರಕರಣ. ಇದರಿಂದ ನಮಗೆ ಮಾನಸಿಕ ನೆಮ್ಮದಿ ಇಲ್ಲದಂತಾಗಿದೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಸೂಕ್ತಕ್ರಮ ಕೈಗೊಂಡು ನಮಗೆ ಮಾನಸಿಕ ನೆಮ್ಮದಿ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.  

ಸೂಕ್ತ ಕ್ರಮದ ಭರವಸೆ ನೀಡಿದ ಎಸ್ ಪಿ: ವಿಷಯ ಯುವತಿ ಅಣ್ಣನ ಗಮನಕ್ಕೆ ಬಂದ ಕೂಡಲೇ ಹರಿಹರಪುರ ಪೊಲೀಸರಿಗೆ ದೂರು ನೀಡಿದ್ದಾನೆ. ಮೇಲೆಂದ ಮೇಲೆ ಫೋಟೋ ಬರುತ್ತಿದೆ. ಅಕೌಂಟ್ ಡಿಲಿಟ್ ಮಾಡಿ ಕೊಡಿ ಎಂದು ಮನವಿ ಮಾಡಿದ್ದಾನೆ. ಹರಿಹರಪುರ ಪೊಲೀಸರು ಇದು ಸೈಬರ್ ಕೇಸ್ ನೀವು ಸೆನ್ ಠಾಣೆಗೆ ದೂರು ನೀಡಿ ಎಂದಿದ್ದಾರೆ. ಚಿಕ್ಕಮಗಳೂರಿಗೆ ಬಂದು ದೂರು ನೀಡಿದ್ದಾನೆ. ಆದರೆ, ಸೆನ್ ಪೊಲೀಸರು ಪ್ರಕರಣ ಪಡೆದು ಯಾವುದೇ ಕ್ರಮಕೈಗೊಂಡಿಲ್ಲ.

Love jihad: ಲವ್‌ ಜಿಹಾದ್‌ಗೆ ಸಿಲುಕಿದ ಹಿಂದೂ ಮಹಿಳೆಯ ನರಳಾಟ

 

ಸೆನ್ ಕ್ರೈಂ ಇನ್ಸ್ ಪೆಕ್ಟರ್ ಜಾಕೀರ್ ಹುಸೇನ್ ನೆಪಕ್ಕೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಯುವತಿ ಅಣ್ಣ ಇನ್ಸ್ ಪೆಕ್ಟರ್ ವಿರುದ್ಧವೇ ಎಸ್ಪಿಗೆ ದೂರು ನೀಡಿದ್ದಾನೆ. ಎಸ್ಪಿ ಪ್ರಕರಣದ ಪೂರ್ವಪರವನ್ನೆಲ್ಲಾ ಚೆಕ್ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು  ಎಸ್ ಪಿ ಉಮಾಪ್ರಶಾಂತ್ ಭರವಸೆ ನೀಡಿದ್ದಾರೆ. 

ಗೆಳತಿ ಮತಾಂತರಕ್ಕೆ ಯತ್ನಿಸಿದ್ದ ಸೂಫಿಯಾನ್‌ಗೆ ಗುಂಡೇಟು..! ಪ್ರೇಯಸಿ ಹತ್ಯೆಗೈದ ಪಾಪಿ ಎನ್‌ಕೌಂಟರ್‌ ಬಳಿಕ ಸೆರೆ

ಒಟ್ಟಾರೆ, ಮಲೆನಾಡಲ್ಲಿ ಲವ್ ಜಿಹಾದ್ ಇನ್ನೂ ನಿಂತಿಲ್ಲ ಅನ್ನೋದಂತು ಸಾಬೀತಾಗಿದೆ. 20 ದಿನದ ಹಿಂದೆಯೇ ದೂರು ನೀಡಿದರು ಕ್ರಮ ಕೈಗೊಂಡು, ಒಂದು ಅಕೌಂಟ್ ಕ್ಲೋಸ್ ಮಾಡಿಸದ ಪೊಲೀಸರು ದುಬೈನಲ್ಲಿರೋ ಅವನನ್ನ ಕರೆತಂದು ಕ್ರಮಕೈಗೊಳ್ತಾರಾ. ಇದು ಸಾಧ್ಯವಾ ಎಂಬ ಪ್ರಶ್ನೆ ಮೂಡೋದು ಸಹಜ. ಇದು ಸೂಕ್ಷ್ಮ ವಿಚಾರ. ಬೇಗನೆ ಒಂದು ಗತಿ ಕಾಣಿಸ್ಬೇಕು. ಇಲ್ಲ ಮತ್ತೊಂದು ರೂಪ ಪಡ್ಕೊಳ್ಳುತ್ತೆ. ಇನ್ನಾದ್ರು ಪೊಲೀಸರು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ನೊಂದ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಿಕೊಡಬೇಕಿದೆ.

Follow Us:
Download App:
  • android
  • ios