ವಿದ್ಯಾರ್ಥಿನಿ ಮೇಲೆ ಇನ್ಸ್ಟಾಗ್ರಾಮ್‌ ಗೆಳೆಯನಿಂದ ರೇಪ್: ಸಾಮಾಜಿಕ ಜಾಲತಾಣದಲ್ಲಿ ನಗ್ನ ಚಿತ್ರ ಶೇರ್‌

ಕಳೆದ ವಾರ ಮತ್ತೆರಡು ಬಾರಿ ಆಕೆಯನ್ನು ಹೋಟೆಲ್‌ಗೆ ಕರೆದಿದ್ದ ಆತ, ನನ್ನ ಮಗಳ ನಗ್ನ ವಿಡಿಯೋ ಮತ್ತು ಫೋಟೋಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕುವ ಮೂಲಕ ತನ್ನನ್ನು ಭೇಟಿಯಾಗುವಂತೆ ಒತ್ತಡ ಹೇರುತ್ತಿದ್ದ ಎಂದೂ ತಾಯಿ ದೂರಿನಲ್ಲಿ ತಿಳಿಸಿದ್ದಾರೆ. 

girl raped in gurugram hotel by instagram friend says police ash

ಗುರುಗ್ರಾಮ್ (ಫೆಬ್ರವರಿ 2, 2023): ಹರ್ಯಾಣದ ಹೋಟೆಲ್‌ವೊಂದರಲ್ಲಿ 16 ವರ್ಷದ 11ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ "ಇನ್‌ಸ್ಟಾಗ್ರಾಮ್ ಸ್ನೇಹಿತ" ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಬಾಲಕಿಯ ನಗ್ನ ಚಿತ್ರವನ್ನು ಆರೋಪಿ ಆಕೆಯ ತಾಯಿಗೆ ಕಳುಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್‌ ಮಾಡಿದಾಗ ವಿಷಯ ಬೆಳಕಿಗೆ ಬಂದಿದೆ ಎಂದೂ ತಿಳಿದುಬಂದಿದೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಪ್ರಕಾರ, ಆಕೆಯ ಮಗಳು ಕಳೆದ ವರ್ಷ ಉತ್ತರ ಪ್ರದೇಶ ಮೂಲದವರೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸ್ನೇಹ ಬೆಳೆಸಿದ್ದಳು ಮತ್ತು ಆ ಸಮಯದಲ್ಲಿ ನಗ್ನ ವಿಡಿಯೋ ಕರೆಯಲ್ಲಿ ತೊಡಗಿದ್ದಳು. ಬಳಿಕ, ಆರೋಪಿಯು ತನ್ನ ಮಗಳನ್ನು ಗುರುಗ್ರಾಮ್‌ನ ಹೋಟೆಲ್‌ಗೆ ಕರೆದು ಅತ್ಯಾಚಾರ ಎಸಗಿದ್ದಾನೆ ಎಂದು ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕಳೆದ ವಾರ ಮತ್ತೆರಡು ಬಾರಿ ಆಕೆಯನ್ನು ಹೋಟೆಲ್‌ಗೆ ಕರೆದಿದ್ದ ಆತ, ನನ್ನ ಮಗಳ ನಗ್ನ ವಿಡಿಯೋ ಮತ್ತು ಫೋಟೋಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕುವ ಮೂಲಕ ತನ್ನನ್ನು ಭೇಟಿಯಾಗುವಂತೆ ಒತ್ತಡ ಹೇರುತ್ತಿದ್ದ ಎಂದೂ ತಾಯಿ ತಿಳಿಸಿದ್ದಾರೆ. ಅಲ್ಲದೆ, ಮಂಗಳವಾರದಂದು ನನ್ನ ಮಗಳ ನಗ್ನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಆತ ಪೋಸ್ಟ್ ಮಾಡಿದ್ದು, ಅದನ್ನು ನನಗೂ ಕಳುಹಿಸಿದ್ದಾನೆ. ನಾನು ನನ್ನ ಮಗಳನ್ನು ಈ ಬಗ್ಗೆ ಕೇಳಿದಾಗ ಸಂಪೂರ್ಣ ಘಟನೆ ಬಗ್ಗೆ ಹೇಳಿದ್ದಾಳೆ ಎಂದೂ ಸಂತ್ರಸ್ಥೆಯ ತಾಯಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: Pocso case: 13 ವರ್ಷದ ಬಾಲೆ ಗರ್ಭಿಣಿ, ಸ್ವತಃ ತಂದೆಯಿಂದಲೇ ನಡೆದಿದೆ ಪಾಪ ಕೃತ್ಯ!

ದೂರಿನ ನಂತರ, ಆರೋಪಿ ರಾಜ್ ದಿವೇದಿ ವಿರುದ್ಧ ಮಂಗಳವಾರ ಸಂಜೆ ಪೋಕ್ಸೋ ಕಾಯ್ದೆಯ ಸೆಕ್ಷನ್ 8 (ಲೈಂಗಿಕ ದೌರ್ಜನ್ಯ) ಮತ್ತು 12 (ಲೈಂಗಿಕ ಕಿರುಕುಳ), ಐಪಿಸಿಯ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ), ಮತ್ತು ಐಟಿ ಕಾಯ್ದೆಯ ಸೆಕ್ಷನ್ 67 ಎ ಅಡಿಯಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ (ಪಶ್ಚಿಮ) ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಆರೋಪಿಯನ್ನು ಹಿಡಿಯಲು ನಾವು ಶೋಧ ನಡೆಸುತ್ತಿದ್ದೇವೆ. ಅವನು ಕೂಡ ವಿದ್ಯಾರ್ಥಿ ಎಂದು ವರದಿಯಾಗಿದೆ ಎಂದೂ ಮಹಿಳಾ ಪೊಲೀಸ್ ಠಾಣೆ (ಪಶ್ಚಿಮ) ಎಸ್‌ಎಚ್‌ಒ ಇನ್‌ಸ್ಪೆಕ್ಟರ್ ಪೂನಂ ಸಿಂಗ್ ಹೇಳಿದ್ದಾರೆ.

ಇನ್ನೊಂದೆಡೆ, ಕಲಬುರಗಿ ಜಿಲ್ಲೆಯಲ್ಲಿ ಇತ್ತೀಚೆಗೆ 13 ವರ್ಷದ ಬಾಲಕಿ ಗರ್ಭಿಣಿಯಾಗಿದ್ದು, ಇದಕ್ಕೆ ಆಕೆಯ ಜನ್ಮದಾತನೇ ಕಾರಣ ಎನ್ನುವ ಅಘಾತಕಾರಿ ಸುದ್ದಿ ವರದಿಯಾಗಿತ್ತು. ಹೌದು ! ತನ್ನ ಅಪ್ರಾಪ್ತ ಮಗಳ ಮೇಲೆ ಸ್ವತಃ ತಂದೆಯೇ ಅತ್ಯಾಚಾರ ನಡೆಸಿರುವ ವಿಚಾರ, ಬಾಲಕಿ ಗರ್ಭ ಧರಿಸುವುದರೊಂದಿಗೆ ಬೆಳಕಿಗೆ ಬಂದಿದೆ. 

ಇದನ್ನೂ ಓದಿ: Bengaluru: ಮೂರೂವರೆ ವರ್ಷದ ಬಾಲಕಿ ರೇಪ್‌, ಹತ್ಯೆ: ತಾಯಿಯ ಪ್ರಿಯತಮನಿಂದಲೇ ಕೃತ್ಯ

ಕಲಬುರಗಿ ಜಿಲ್ಲೆ ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ನೀಚ ಕೃತ್ಯ ಸಂಭವಿಸಿದೆ. ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ 13 ವರ್ಷದ ಬಾಲಕಿ ನಿನ್ನೆ ಜೇವರ್ಗಿಯ ಸರಕಾರಿ ಆಸ್ಪತ್ರೆಗೆ ಬಂದಿದ್ದಳು. ಆ ಬಾಲಕಿಗೆ ತೀವ್ರ ಹೊಟ್ಟೆ ನೋವಿನ ಸಮಸ್ಯೆಯಿತ್ತು. ಜೊತೆಗೆ ವಾಂತಿಯಾಗುತ್ತಿತ್ತು. ಹೊಟ್ಟೆ ನೋವಿನ ಲಕ್ಷಣಗಳನ್ನು ಗಮನಿಸಿ ವೈದ್ಯರು ಸಮಗ್ರ ತಪಾಸಣೆ ನಡೆಸಿದ್ದಾರೆ. ಆಗ ಬಾಲಕಿ 2 ತಿಂಗಳ ಗರ್ಭಿಣಿ ಎನ್ನುವ ಸತ್ಯ ಬಯಲಾಗಿತ್ತು.

13 ವರ್ಷದ ಅಪ್ರಾಪ್ತ ಮತ್ತು ಅವಿವಾಹಿತ ಬಾಲಕಿ ಎರಡು ತಿಂಗಳ ಗರ್ಭಿಣಿ ಎನ್ನುವ ವಿಚಾರ ತಪಾಸಣೆಯಲ್ಲಿ ಗೊತ್ತಾಗುತ್ತಿದ್ದಂತೆಯೇ ಸ್ವತಃ ವೈದ್ಯರೂ ದಂಗಾಗಿದ್ದಾರೆ. ಬಾಲಕಿಗೆ ಈ ಬಗ್ಗೆ ಸಮಾಧಾನದಿಂದ ವಿಚಾರಿಸಿದಾಗ, ಅಮ್ಮ ಹೊಲಕ್ಕೆ ಹೋದಾಗ ಒಂದಿನ ಮಧ್ಯಾಹ್ನ ತನ್ನ ಅಪ್ಪನೇ  ಅತ್ಯಾಚಾರ ನಡೆಸಿದ್ದಾನೆ ಎನ್ನುವ ವಿಚಾರ ಬಹಿರಂಗಪಡಿಸಿದ್ದಳು. 

ಇದನ್ನೂ ಓದಿ: 'ಪರೀಕ್ಷೆಯಲ್ಲಿ ಒಳ್ಳೆ ಮಾರ್ಕ್ಸ್‌ ಕೊಡ್ತೀನಿ..' 16 ವರ್ಷದ ವಿದ್ಯಾರ್ಥಿಗೆ ಪುಸಲಾಯಿಸಿ ರೇಪ್‌ ಮಾಡಿದ ಶಿಕ್ಷಕಿ!

Latest Videos
Follow Us:
Download App:
  • android
  • ios