Asianet Suvarna News Asianet Suvarna News

ಹತ್ಯೆಯಾದ ಹುಡುಗಿ 7 ವರ್ಷದ ಬಳಿಕ ಜೀವಂತವಾಗಿ ಪತ್ತೆ, ಕೊಲೆ ಆರೋಪಿಗೆ ಮುಗಿದಿಲ್ಲ ಜೈಲು ಶಿಕ್ಷೆ!

7 ವರ್ಷದ ಹಿಂದೆ ಹುಡುಗಿ ಹತ್ಯೆಯಾಗಿದ್ದಾಳೆ. ಈ ಕೊಲೆಯನ್ನು ವಿಷ್ಣು ಎಂಬಾತ ಮಾಡಿದ್ದಾನೆ ಎಂದು ಕೋರ್ಟ್ ತೀರ್ಪು ನೀಡಿತ್ತು. ಇಷ್ಟೇ ಅಲ್ಲ 7 ವರ್ಷ ಶಿಕ್ಷೆಯನ್ನು ವಿಧಿಸಿದೆ. ಆದರೆ ಅದೇ ಹುಡುಗಿ ಇದೀಗ ಪತಿಯೊಂದಿಗೆ ಪ್ರತ್ಯಕ್ಷವಾಗಿದ್ದಾಳೆ. ದುರಂತ ಅಂದರೆ ಶಿಕ್ಷೆ ಅನುಭವಿಸುತ್ತಿರುವ ವಿಷ್ಣು ಇನ್ನೂ ಜೈಲಿನಲ್ಲೇ ಕೊಳೆಯುತ್ತಿದ್ದಾನೆ.

Girl found alive with family after seven years of death but convict still serving jail term for killing her Uttar Pradesh ckm
Author
First Published Dec 6, 2022, 8:25 PM IST

ಅಲಿಘಡ(ಡಿ.06): ನೂರು ಜನ ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು. ನ್ಯಾಯಾಂಗದ ಈ ನೀತಿಯನ್ನು ಹಲವು ಚಾಲಾಕಿಗಳು ತಮಗೆ ಬೇಕಾದಂತೆ ಬದಲಾಯಿಸಿಕೊಳ್ಳುತ್ತಾರೆ. ನಿರಪರಾಧಿಗಳನ್ನೇ ಅಪರಾಧಿಗಳಾಗಿ ಬಿಂಬಿಸಿ, ಪೂರಕ ನಕಲಿ ದಾಖಲೆ ಸೃಷ್ಟಿಸಿ ಶಿಕ್ಷೆಯಾಗುವಂತೆ ಮಾಡುತ್ತಾರೆ. ಇಷ್ಟೇ ಅಲ್ಲ ಅಪರಾಧಿಗಳು ಆರಾಮಾಗಿ ಜೀವನ ಸಾಗಿಸುತ್ತಾರೆ. ಇದಕ್ಕೆ ಪುಷ್ಠಿ ನೀಡುವಂತೆ ಒಂದು ಘಟನೆ ಉತ್ತರ ಪ್ರದೇಶದ ಆಲಿಘಡದಲ್ಲಿ ನಡದಿದೆ. 7 ವರ್ಷದ ಹಿಂದೆ ಹುಡುಗಿ ನಾಪತ್ತೆಯಾಗಿದ್ದಳು. ಈ ಕುರಿತು ದೂರು ದಾಖಲಾಗಿತ್ತು. ಬಳಿಕ ಹುಡುಗಿಯ ಶವವೊಂದು ಪತ್ತೆಯಾಗಿತ್ತು. ಈ ಶವ ಪರಿಶೀಲನೆ ನಡೆಸಲಾಗಿದೆ. ಹುಡುಗಿಯ ಪೋಷಕರನ್ನೂ ಕೇಳಲಾಗಿದೆ. ಪೋಷಕರು ಇದು ತಮ್ಮ ಪುತ್ರಿ ಎಂದರೆ, ಪೊಲೀಸರು ಡಿಎನ್‌ಎ ವರದಿಯನ್ನೂ ತರಿಸಿಕೊಂಡಿದ್ದಾರೆ. ಇದು ನಾಪತ್ತೆಯಾದ ಹುಡುಗಿ ಎಂದು ಖಚಿತವಾಗಿದೆ. ಹುಡುಗಿಯನ್ನು ಕಿಡ್ನಾಪ್ ಮಾಡಿ ಹತ್ಯೆ ಮಾಡಿದ ಆರೋಪದಡಿ ವಿಷ್ಣು ಎಂಬಾತನ ಅರೆಸ್ಟ್ ಮಾಡಲಾಗಿತ್ತು. ಕೋರ್ಟ್ ವಿಚಾರಣೆಯಲ್ಲೂ ವಿಷ್ಣು ಅಪರಾಧಿ ಎಂದು ಸಾಬೀತಾಗಿತ್ತು. 7 ವರ್ಷದ ಶಿಕ್ಷೆ ನೀಡಲಾಗಿದೆ. ಅಪರಾಧಿ ವಿಷ್ಣು ಶಿಕ್ಷೆ ಅವಧಿ ಮುಗಿದಿಲ್ಲ. ಇದೀಗ ನಾಪತ್ತೆಯಾಗಿದ್ದ ಹುಡುಗಿ ಪತಿಯೊಂದಿಗೆ ಪತ್ತೆಯಾಗಿದ್ದಾಳೆ. 

ಹತ್ರಾಸ್ ಜಿಲ್ಲೆಯಲ್ಲಿ ಈ ಯುವತಿ ತನ್ನ ಪತಿಯೊಂದಿಗೆ ಜೀವನ ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿದ ಪೊಲೀಸರು, ಈ ಘಟನೆ ಹಿಂದಿನ ರೋಚಕ ಕತಯೆನ್ನು ಬಹಿರಂಗಪಡಿಸಿದ್ದಾರೆ. 7 ವರ್ಷಗಳ ಹಿಂದೆ ನಡೆದ ಘಟನೆ ಇದು. ಅಂದು ಅಪ್ರಾಪ್ತೆಯಾಗಿದ್ದ ಈ ಹುಡುಗಿ ಏಕಾಏಕಿ ನಾಪತ್ತೆಯಾಗಿದ್ದಳು. ಹುಡುಗಿಯ ಪೋಷಕರು ಪೊಲೀಸರಿಗೂ ದೂರು ನೀಡಿದ್ದರು. ಪೊಲೀಸರು ಪ್ರಕರಣದ ತನಿಖೆ ನಡೆಸಿ ವಿಷ್ಣು ಎಂಬಾತನ ಅರೆಸ್ಟ್ ಮಾಡಿದ್ದರು. ಹುಡುಗಿಯ ನಾಪತ್ತೆ ಪ್ರಕರಣಕ್ಕೂ ವಿಷ್ಣುಗೆ ಲಿಂಕ್ ಇದೆ ಎಂದು ಪೋಷಕರೂ ಅನುಮಾನ ವ್ಯಕ್ತಪಡಿಸಿದ್ದರು.

HUBBALLI AKHIL JAIN MURDER: ಮಗನ ಕೊಲೆಗೆ ವರ್ಷದ ಹಿಂದೆಯೇ ಉದ್ಯಮಿ ಅಪ್ಪ ಪ್ಲಾನ್, ಸಿಕ್ಕಿಬಿದ್ದಿದ್ದು ಹೇಗೆ?

ವಿಷ್ಣು  ಒಂದೆರೆಡು ಬಾರಿ ಈ ಅಪ್ರಾಪ್ತೆ ಹುಡುಗಿಯನ್ನು ಮಾತನಾಡಿಸಿದ್ದ.  ವಿಷ್ಣು ಮನಸಿನ ಮೂಲೆಯಲ್ಲಿ ಸಣ್ಣ ಪ್ರೀತಿಯೊಂದು ಹುಟ್ಟಿತ್ತು ಅನ್ನೋದು ಹುಡುಗಿ ಪೋಷಕರ ಆರೋಪವಾಗಿತ್ತು. ಹುಡುಗಿಯನ್ನು ಹಿಂಬಾಲಿಸಿರುವುದು, ಹುಡುಗಿ ಸ್ನೇಹಿತರಲ್ಲಿ ವಿಚಾರಿಸಿರುವುದು ತನಿಖೆ ವೇಳೆ ಪತ್ತೆಯಾಗಿತ್ತು. ಕೆಲ ದಿನಗಳ ಬಳಿಕ ಹುಡುಗಿಯ ಮೃತದೇಹವೊಂದು ಪತ್ತೆಯಾಗಿತ್ತು. ಈ ವೇಳೆ ಇದು ತಮ್ಮ ಪುತ್ರಿಯ ಮೃತದೇಹ, ಇದು ಪುತ್ರಿಯ ವಸ್ತ್ರಗಳು ಎಂದು ಹುಡುಗಿ ಪೋಷಕರು ಹೇಳಿದ್ದರು. ಇತ್ತ ಡಿಎನ್‌ಎ ವರದಿ ಕೂಡ ವಿಷ್ಮು ವಿರುದ್ಧವಾಗಿ ಬಂದಿತ್ತು.

ಈ ಎಲ್ಲಾ ಸಾಕ್ಷ್ಯಗಳನ್ನು ಪೊಲೀಸರು ಕೋರ್ಟ್ ಮುಂದೆ ಹಾಜರು ಪಡಿಸಿದ್ದರು. ಬಳಿಕ ಸಾಕ್ಷ್ಯಗಳ ಆಧಾರದ ಮೇಲೆ ವಿಷ್ಣುಗೆ 7 ವರ್ಷಗಳ ಶಿಕ್ಷೆ ನೀಡಿತ್ತು. ಆದರೆ ವಿಷ್ಮು ತಾಯಿ ಮಾತ್ರ ತಮ್ಮ ಮಗ ನಿರಪರಾಧಿ ಇದರಲ್ಲೇನು ಷಡ್ಯಂತ್ರವಿದೆ ಎಂದು ಕಣ್ಣೀರು ಹಾಕಿದ್ದರು. ಛಲ ಬಿಡದ ವಿಷ್ಮು ತಾಯಿ ಈ ಪ್ರಕರಣವನ್ನು ಕಳೆದ 7 ವರ್ಷಗಳಿಂದ ತಮ್ಮದೇ ರೀತಿಯಲ್ಲಿ ತನಿಖೆ ಮಾಡಿದ್ದಾರೆ. ಬಳಿಕ ಅಂದು ನಾಪತ್ತೆಯಾದ ಹುಡುಗಿ ಜೀವಂತವಾಗಿದ್ದಾಳೆ. ಪತಿಯೊಂದಿಗೆ ಜೀವನ ಸಾಗಿಸುತ್ತಿದ್ದಾಳೆ ಎಂದು ನೇರವಾಗಿ ಪೊಲೀಸ್ ಸೂಪರಿಡೆಂಟ್ ಭೇಟಿಯಾಗಿ ಮಾಹಿತಿ ನೀಡಿದ್ದರು. 

ಕಳ್ಳನ ತಪ್ಪೊಪ್ಪಿಗೆ ವಿಡಿಯೋ ವೈರಲ್: ಪೊಲೀಸರನ್ನೇ ಬೈಯ್ಯಲು ಶುರು ಮಾಡಿದ ಜನ

ವಿಷ್ಣು ತಾಯಿ ನೀಡಿದ ಮಾಹಿತಿ ಆಧಾರದಲ್ಲಿ ಹತ್ರಾಸ್ ಜಿಲ್ಲೆಗೆ ತೆರಳಿದ ಪೊಲೀಸರಿಗೆ ಅಚ್ಚರಿಯಾಗಿತ್ತು. ಈಕೆಯ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ 7 ವರ್ಷದ ಹಿಂದಿನ ಕತೆ ಬಹಿರಂಗವಾಗಿದೆ. ಅಪ್ರಾಪ್ತೆಯಾಗಿದ್ದ ಈ ಹುಡುಗಿ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಹೀಗಾಗಿ ಪೋಷಕರಿಗೆ ಹೇಳದೆ ಮನೆ ಬಿಟ್ಟಿದ್ದಳು. ಈಕೆ ಬದುಕಿದ್ದಾಳೆ ಅನ್ನೋದು ಹುಡುಗಿಯ ಪೋಷಕರಿಗೂ ತಿಳಿದಿರಲಿಲ್ಲ. ಎಲ್ಲವೂ ಒಕೆ, ಆದರೆ ಯಾವುದೇ ತಪ್ಪು ಮಾಡದೆ ಶಿಕ್ಷೆ ಅನುಭವಿಸುತ್ತಿರುವ ವಿಷ್ಣು ಬಿಡುಗಡೆಗೆ ಪೊಲೀಸರು ಇದೀಗ ಸಾಕ್ಷ್ಯಗಳನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ. ಆದರೆ ವಿಷ್ಣುಗೆ ಇನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.

Follow Us:
Download App:
  • android
  • ios