Asianet Suvarna News Asianet Suvarna News

Hubballi Akhil Jain Murder: ಮಗನ ಕೊಲೆಗೆ ವರ್ಷದ ಹಿಂದೆಯೇ ಉದ್ಯಮಿ ಅಪ್ಪ ಪ್ಲಾನ್, ಸಿಕ್ಕಿಬಿದ್ದಿದ್ದು ಹೇಗೆ?

ನಾಲ್ಕು ದಿನದ ಹಿಂದೇ ನಾಪತ್ತೆಯಾಗಿದ್ದ  ಹುಬ್ಬಳ್ಳಿಯ ಖ್ಯಾತ ಉದ್ಯಮಿ ಪುತ್ರ  ಅಖಿಲ್ ಜೈನ್ ತನ್ನ ತಂದೆಯ ಯೋಜನೆಯಂತೆಯೇ ಕೊಲೆಯಾಗಿದ್ದಾನೆ. ಅಖಿಲನ ದುಶ್ಚಟದಿಂದ ಬೇಸತ್ತಿದ್ದ ತಂದೆ  ಭರತ್ ಜೈನ್  ವರ್ಷದ ಹಿಂದೆಯೇ  ಕೊನೆಗೆ ಪ್ಲಾನ್ ಮಾಡಿದ್ದ ಎಂಬ ವಿಚಾರ ಬಹಿರಂಗವಾಗಿದೆ. ಘಟನೆಯ ಸಂಪೂರ್ಣ ವಿವರ ಇಲ್ಲಿದೆ.

Hubballi  Jeweller businessman Bharat Jain arrested  over son Akhil Jain murder case gow
Author
First Published Dec 6, 2022, 7:21 PM IST

ಹುಬ್ಬಳ್ಳಿ (ಡಿ.6): ನಾಲ್ಕು ದಿನದ ಹಿಂದೇ ನಾಪತ್ತೆಯಾಗಿದ್ದ  ಹುಬ್ಬಳ್ಳಿಯ ಖ್ಯಾತ ಉದ್ಯಮಿ ಪುತ್ರ  ಅಖಿಲ್ ಜೈನ್ ತನ್ನದೇ ತೋಟದ ಮನೆಯಲ್ಲಿ ಕೊಲೆಯಾಗಿದ್ದಾನೆ. ಅದು ಆತನ ತಂದೆಯಿಂದಲೇ ಸುಪಾರಿ ಪಡೆದಿದ್ದ ಹಂತಕರು ಕತ್ತು ಹಿಸುಕು ಕೊಲೆ ಮಾಡಿದ್ದಾರೆ. ಅಷ್ಟೇ ಅಲ್ಲ ತನ್ನ ಪುತ್ರನನ್ನು ಹಂತಕರ ಕೈಗೆ ಒಪ್ಪಿಸಿ ಬರುವಾಗ ಭರತ್ ಜೈನ್, ಪುತ್ರನ ಮೈ ಮೇಲಿದ್ದ ಚಿನ್ನದ ಚೈನ್ ( Gold chain), ರಿಂಗ್( Ring) ಕೈಯಲ್ಲಿ ಕಟ್ಟಿಕೊಂಡಿದ್ದ ವಾಚ್( Wrist watch) ಬಿಚ್ಚಿಸಿಕೊಂಡು ಬಂದಿದ್ದ ಅನ್ನೊದು ಬೆಳಕಿಗೆ ಬಂದಿದೆ. ತಂದೆಯೇ ಮಗನನ್ನು ಕೊಲೆ ಮಾಡಿಸಿದ ವಿಚಾರ, ನಾಗರಿಕ ಸಮಾಜವೇ ಬೆಚ್ಚಿ ಬೀಳುವಂತೆ ಮಾಡಿದೆ.  ಹೆತ್ತು-ಹೊತ್ತು ಸಾಕು ಸಲುಹಿದ ಕೋಟ್ಯಧಿಪತಿ ತಂದೆ ತನ್ನ  ಪುತ್ರನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ನ ಯಾರೂ ನಂಬಲು ಸಾದ್ಯವಿಲ್ಲ. ಆದ್ರೇ  ಪೊಲೀಸ್ ವಿಚಾರಣೆ ವೇಳೆ ಸ್ವತಃ ಅಖಿಲ ಜೈನ್ ತಂದೆ ಭರತ್ ಜೈನ್ ಬಾಯ್ಬಿಟ್ಟಿದ್ದಾನೆ. ಮಗ ಅಖಿಲ್ ಜೈನ್ ವ್ಯಕ್ತಿತ್ವ ಸರಿ ಇರಲಿಲ್ಲ ಎನ್ನುವುದು ತಂದೆ ಭರತ್ ಅವರ ಆರೋಪ. ಅಪ್ಪ ಹೇಳಿದ ಹಾಗೆ, ‘‘ಅಖಿಲ್‌ನಿಗೆ ಕುಡಿತದ ಚಟವಿತ್ತು. ದುಡ್ಡು ಹಾಳು ಮಾಡುತ್ತಿದ್ದ, ತನ್ನ ಕೆಲಸದಲ್ಲಿ ಸಾಥ್ ನೀಡುತ್ತಿರಲಿಲ್ಲ. ಹಣಕ್ಕಾಗಿ ಮನೆಯಲ್ಲಿ ಜಗಳ ಕಾಯುತ್ತಿದ್ದನಂತೆ’’ ಅದೇ ಕಾರಣಕ್ಕೆ 10 ಲಕ್ಷಕ್ಕೆ‌ ಸುಪಾರಿ ಕೊಟ್ಟ ಕೊಲೆ‌ ಮಾಡಿಸಿದೆ ಅಂತ ಬಾಯ್ಬಿಟ್ಟಿದ್ದಾನೆ.

ಅಪ್ಪನ ಕಟ್ಟು ಕಥೆ ಹೇಗಿತ್ತು ಗೊತ್ತಾ?
ಅಪ್ಪ, ಭರತ್ ಜೈನ್ ಕಳೆದ ಶನಿವಾರ ಡಿಸೆಂಬರ್. 3ರಂದು ದೊಡ್ಡ ಹೈಡ್ರಾಮಾವನ್ನೆ  ಸೃಷ್ಟಿಸಿದ್ದ. ಹುಬ್ಬಳ್ಳಿ ಕೇಶ್ವಾಪುರದ ಅರಿಹಂತ ಕಾಲೋನಿಯಲ್ಲಿ ಮನೆ ಹೊಂದಿರುವ ಭರತ ತನ್ನ ಸಂಬಂಧಿಕರನ್ನ ಕರೆಯಿಸಿ, ‘‘ನನ್ನ ಮಗ ಅಖಿಲ್ ದೇವರಗುಡಿ ಹಾಳದ ಬಳಿಯ ಗುಡ್ಡದ ಮೇಲಿಂದ ಬೀಳುತ್ತೇನೆಂದು ವಿಡಿಯೋ ಕಾಲ್ ಮಾಡಿ ಹೇಳಿದ್ದಾನೆ. ಬಿದ್ದಂತೆಯೂ ವಿಡಿಯೋ ಕೂಡ ಕಾಣಿಸಿದೆ’’ ಎಂದು ಕಥೆ ಕಟ್ಟಿದ್ದಾನೆ. ನೆರೆಹೊರೆಯವರ ಸಲಹೆ ಪಡೆದವರಂತೆ ನಟಿಸಿದ್ದ, ಆದ್ರೇ ಈತನ ಡ್ರಾಮಾ ಕೆಲ ಹೊತ್ತಲೇ ಭರತ್ ಗೆ ಮುಳುಗು ನೀರು ತರಲಿದೆ ಎಂಬ ಸಣ್ಣ ಸುಳಿವು ಇರಲಿಲ್ಲ.. ಹೇಳಿ ಕೇಳಿ ಭರತ್ ಹುಬ್ಬಳ್ಳಿ ಮಟ್ಟಿಗೆ ಫೇಮಸ್ ಉದ್ಯಮಿ.  ಬ್ಯುಸಿನೆಸ್ ಸ್ಕೂಲ್,  ಆಭರಣ ವ್ಯಾಪಾರ, ರಿಯಲ್ ಎಸ್ಟೇಟ್ ವ್ಯವಹಾರ, ಅಂತಲೇ ಮಾಡಿಕೊಂಡಿದ್ದ ಕೋಟ್ಯಾಧಿಪತಿ.  ಖ್ಯಾತ ಉದ್ಯಮಿ ಪುತ್ರ ನಾಪತ್ತೆಯಾಗಿದ್ದಾನೆ ಅಂದ‌ಕೂಡಲೇ ನಾಪತ್ತೆ ಪ್ರಕರಣ ದಾಖಲಾಗಿತ್ತು. ಭರತ್ ಸಹೋದರ ಮನೋಜ್ ಜೈನ್  ಕೇಶ್ವಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದ. 

ನಾಪತ್ತೆ ಪ್ರಕರಣದ ದೂರಿನಲ್ಲಿ ಏನಿತ್ತು? 
ಡಿಸೆಂಬರ್ ಒಂದರಂದು ಭರತ್ ಜೈನ್ ತನ್ನ ಪುತ್ರನೊಂದಿಗೆ ಕಾರಿನಲ್ಲಿ ಕಲಘಟಗಿ ಬಳಿಯ ತನ್ನದೇ ತೋಟದ ಮನೆಗೆ ಹೋಗಿದ್ದ, ತೋಟದಲ್ಲಿ ಕೆಲಸದ ಇದಿದ್ದರಿಂದ ಪುತ್ರ ಮನೆಗೆ ಮರಳಲಿಲ್ಲ, ಆತನ ಸ್ನೇಹಿತರು ಬರ್ತಾರೆ ನಾನು ಇಲ್ಲಿಯೇ ಉಳಿದುಕೊಳ್ಳುವುದಾಗಿ ಹೇಳಿದಕ್ಕೆ ಪುತ್ರನನ್ನು ಅಲ್ಲಿಯೇ ಬಿಟ್ಟು ನಾನು ಮನೆಗೆ ಮರಳಿದೆ. ಎರಡು ದಿನವಾದ್ರು ಮಗ ಮನೆಗೆ ಬರಲಿಲ್ಲ. ಡಿಸೆಂಬರ್ ೩ರ   ಸಂಜೆ ‘‘ನನ್ನ ಮಗ ಅಖಿಲ್ ದೇವರಗುಡಿ ಹಾಳದ ಬಳಿಯ ಗುಡ್ಡದ ಮೇಲಿಂದ ಬೀಳುತ್ತೇನೆಂದು ವಿಡಿಯೋ ಕಾಲ್ ಮಾಡಿ ಹೇಳಿದ್ದಾನೆ. ಬಿದ್ದಂತೆಯೂ ವಿಡಿಯೋ ಕೂಡ ಕಾಣಿಸಿದೆ’’ ಎಂದು ಪೊಲೀಸರಿಗೆ ದೂರು ನೀಡಿದ್ದರು.

ಆದ್ರೇ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೊಂದು ಹೈಪ್ರೋಫೈಲ್ ಕೇಸ್ ಆಗಿದ್ದರಿಂದ ತನಿಖೆಯ ಇಂಚಿಚ್ಚು ಮಾಹಿತಿ ಕಲೆ‌ಹಾಕಲು‌ ಶುರುಮಾಡಿದ್ದರು. ಭರತ ನೀಡಿದ ದ್ವಂದ್ವ ಹೇಳಿಕೆಯನ್ನು ಕೇಶ್ವಾಪುರ ಠಾಣೆಯ ಇನ್‌ಸ್ಪೆಕ್ಟರ್ ಜಗದೀಶ ಹಂಚಿನಾಳ, ಪೊಲೀಸ್‌ಗಣ್ಣಿನಿಂದ ನೋಡಲು ಶುರುಮಾಡ್ತಾರೆ. ಭರತ ನೀಡಿದ ಹೇಳಿಕೆಯಂತೆ ಅಖಿಲ್‌ನ ಮೊಬೈಲ್ ಕೊನೆ ಲೊಕೇಷನ್ ದೇವರಗುಡಿಹಾಳದಲ್ಲಿಯೇ ಬಂದಿದೆ. ದೇವರಗುಡಿಹಾಳ ಬಳಿ ಅಖಿಲ್ ಶವಕ್ಕಾಗಿ ಪೊಲೀಸರು ತಡಕಾಡಿದ್ದಾರೆ. ಆದರೆ, ಶವ ಸಿಕ್ಕಿಲ್ಲ. ಬಳಿಕ‌ ಭರತ್ ಕರೆಗಳ ಮಾಹಿತಿ ಕಲೆಹಾಕಿದಾಗ ಭರತ್ ಗೆ ಪುತ್ರನಿಂದ ವಿಡಿಯೋ ಕಾಲ್ ಬಂದಿದ್ದು ಸುಳ್ಳು ಅನ್ನೊದು ಗೊತ್ತಾಗಿದೆ. ಇದಾದ ಬಳಿಕ ಭರತ್ ತನ್ನ ಪುತ್ರನೊಂದಿಗೆ ಕಾರಿನಲ್ಲಿ ತೆರಳುವಾಗ, ಮತ್ತೋರ್ವ ವ್ಯಕ್ತುಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದು ಗೊತ್ತಾಗುತ್ತೆ. ಅಲ್ಲಿಯವರೆಗೆ ಸುಮ್ಮನಿದ್ದ ಇನ್ಸ್ಪೆಕ್ಟರ್ ಜಗದೀಶ್ ಹಂಚಿನಾಳ, ಪೊಲೀಸ್ ಭಾಷೆಯಲ್ಲಿ ತಂದೆ ಭರತನನ್ನೇ ವಿಚಾರಣೆಗೆ ಒಳಪಡಿಸಿದಾಗ ಅಸಲಿಯತ್ತು ಬಯಲಿಗೆ ಬಂದಿದೆ. ತಾನೇ ಮಗನ ಕೊಲೆ ಮಾಡಿಸಿದ್ದು ಎಂದು ಭರತ ಬಾಯಿಬಿಟ್ಟಿದ.

ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ, ಜ್ಯುವೆಲ್ಲರಿ ಶಾಪ್ ಒಳಗೆ ನುಗ್ಗಿ ಥಳಿತ

ಸ್ಥಳೀಯ ಹಂತಕರಿಗೆ ಸುಪಾರಿ:
ಮಗನ ಉಪಟಳ ಹೆಚ್ಚಾಗಿದೆ ಎನ್ನುವ ಕಾರಣಕ್ಕೆ ಸ್ಥಳೀಯ ಹಂತಕರಿಗೆ ಭರತ ಜೈನ್ ಸುಪಾರಿ ನೀಡಿದ್ದನಂತೆ. ಸುಮಾರು 10 ಲಕ್ಷ ರೂ. ನೀಡಿ ಮಗನನ್ನು ಕೊಲ್ಲುವಂತೆ ಸಲಾವುದ್ದೀನ್ ಮೌಲ್ವಿಗೆ ಸೂಚಿಸಿದ್ದಾನೆ. ಭರತನಿಂದ ಹಣ ಪಡೆದ ನಾಲ್ವರ ತಂಡ ಕಲಘಟಗಿ ರಸ್ತೆಯಲ್ಲಿನ ಭರತ್ ಗೆ ಸೇರಿ‌ತೋಟದ ಮನೆಯಲ್ಲಿ ಅಖಿಲ್‌ನನ್ನು ಕತ್ತು ಹಿಸುಕಿ ಕೊಲೆ ಮಾಡಿದ. ಬಳಿಕ ಸ್ವಲ್ಪ ದೂರದಲ್ಲಿರುವ ಕಬ್ಬಿನ ಹೊಲದಲ್ಲಿ ಹಂತಕರು, ಅಖಿಲನ ಶವ ಹೂತಿದ್ದಾರೆ. ಎಸ್ಕೆಪ್ ಆಗಿದ್ದರು. ಪೊಲೀಸರು ಸುಪಾರಿ ಹಂತಕರನ್ನು  ಎಡೆಮುರಿಕಟ್ಡಿದ ಬಳಿಕ ಕೊಲೆಯಾದ ಅಖಿಲ್ ಶವ ಪತ್ತೆಯಾಗಿದೆ. ಕೊಲೆಯಾದ ಅಖಿಲ್ ಐದು ದಿನದ‌ಬಳಿಕ ಅಖಿಲ್ ಮೃತದೇಹವನ್ನು ಹೊರತೆಗೆಯಲಾಗುತ್ತಿದೆ.

Hubli Crime: ಉಪಟಳ ತಾಳಲಾರದೆ ಮಗನನ್ನೇ ಕೊಲೆ ಮಾಡಿಸಿದ ತಂದೆ

ಸಾಕ್ಷ್ಯ ನುಡಿದ ಮೊಬೈಲ್ ಫೋನ್
ಮಗನ ಕೊಲೆ ಮಾಡಿಸಲು ಭರತ ಒಂದು ವರ್ಷದ ಹಿಂದೆಯೇ ಯೋಜನೆ ರೂಪಿಸಿದ್ದ. ಸೂಕ್ತ ಸಮಯಕ್ಕಾಗಿ ಹೊಂಚು ಹಾಕಿ ಕುಳಿತಿದ್ದ. ಸ್ಥಳೀಯ ಹಂತಕರಿಗೆ ಆಗಾಗ ಕರೆ ಮಾಡುತ್ತಿದ್ದ. ಹಳೆ‌ ಹುಬ್ಬಳ್ಳಿಯ ಸಲಾವುದ್ದೀನ್ ಮೌಲ್ವಿಗೆ ಸುಪಾರಿ ನೀಡಿದ್ದು ಇದಕ್ಕೆ ಭರತ್ ಜೈನ್ ಮೊಬೈಲ್ ಫೋನ್ ಸಾಕ್ಷ್ಯ ನುಡಿದಿದೆ. ಅಷ್ಟೇ ಅಲ್ಲದೇ ತಂದೆಯ ಸಮ್ಮುಖದಲ್ಲಿ ತನ್ನ ಪುತ್ರನನ್ನು ಭರತ್ ಹಂತಕ ಕೈಗೆ ಒಪ್ಪಿಸಿದ್ದ, ಸಾಲದಕ್ಕೆ ಆತನ ಮೈಮೇಲಿದ್ದ ಚಿನ್ನದ ಉಂಗುರ, ಚೈನ್, ಹಾಗು ಕೈಯಲ್ಲಿದ್ದ ವಾಚ್ ಬಿಚ್ಚಿಕೊಂಡು ಮನೆಗೆ ಬಂದು ತಣ್ಣಗೆ ಮಲಗಿದ್ದ. ಇದಾದ ಬಳಿಕ ಅಂದ್ರೆ ಡಿಸೆಂಬರ್ ಒಂದರ ರಾತ್ರಿಯೇ ಅಖಿಲ್ ಹಂತಕರ ಕೈಯಲ್ಲಿ ಕೊಲೆಯಾಗಿದ್ದ ಅನ್ನೊದು ತನಿಖೆಯದ‌ ಬಯಲಾಗಿದೆ.

Follow Us:
Download App:
  • android
  • ios