ಬೆಳಗಾವಿ(ಆ.02): ಕೆರೆಗೆ ಜಿಗಿದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಬೆಳಗಾವಿ ತಾಲೂಕಿನ ಯಳ್ಳೂರ ಹತ್ತಿರ ಅರವಳಿಯಲ್ಲಿ ನಡೆದಿದೆ.

ಇಲ್ಲಿನ ಭಾಗ್ಯನಗರದ ಸೋನಾಲಿ ಸಂಜಯ ಸುರೇಕರ (19) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮಧ್ಯಾಹ್ನ ತಮ್ಮ ತಂದೆಯ ದ್ವಿಚಕ್ರ ವಾಹನ ತೆಗೆದುಕೊಂಡು ಯಳ್ಳೂರ ಹತ್ತಿರ ಇರುವ ಅರವಳಿ ಕೆರೆಗೆ ತೆರಳಿದ್ದಾಳೆ. ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದ ಮೊಬೈಲ್‌ ಅನ್ನು ದ್ವಿಚಕ್ರ ವಾಹನದಲ್ಲಿಟ್ಟು ಕೆರೆಗೆ ಹಾರಿದ್ದಾಳೆ. ಈ ಘಟನೆಯನ್ನು ಸ್ಥಳೀಯರು ಪ್ರತ್ಯಕ್ಷವಾಗಿ ನೋಡಿದ್ದರಿಂದ ತಕ್ಷಣ ಘಟನಾ ಸ್ಥಳಕ್ಕೆ ತೆರಳುವಷ್ಟರದಲ್ಲಿ ಯುವತಿ ಮೃತಪಟ್ಟಿದ್ದಾಳೆ. 

ರಾಣಿಬೆನ್ನೂರು: ಕಾರು ತೊಳೆಯಲು ನದಿಗಿಳಿದ ಇಬ್ಬರು ಯುವತಿಯರು ನೀರುಪಾಲು!

ತಕ್ಷಣ ಸ್ಥಳೀಯರು ಯುವತಿ ಮೊಬೈಲ್‌ ಮೂಲಕ ಕುಟುಂಬಸ್ಥರಿಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೋಷಕರು ಬೈಕ್‌ ಹಾಗೂ ಮೊಬೈಲ್‌ ಅನ್ನು ಗುರುತಿಸಿದ್ದಾರೆ. ಈ ಘಟನೆ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ದೌಡಾಯಿಸಿದ ಬೆಳಗಾವಿ ಗ್ರಾಮೀಣ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ನೀರಿನಲ್ಲಿದ್ದ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ. ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.