ರಾಣಿಬೆನ್ನೂರು(ಆ.02): ತುಂಗಭದ್ರಾ ನದಿಯಲ್ಲಿ ಕಾರು ತೊಳೆಯಲು ಹೋಗಿ ಯುವತಿರಿಬ್ಬರು ಮೃತಪಟ್ಟ ಘಟನೆ ಶನಿವಾರ ಸಂಜೆ ತಾಲೂಕಿನ ಹಿರೇಬಿದರಿ ಗ್ರಾಮದ ಜಾಲಿಮರಡಿ ಬಳಿಯಲ್ಲಿ ಸಂಭವಿಸಿದೆ. 

ಹಿರೇಕೆರೂರು ತಾಲೂಕು ಅಬಲೂರು ಗ್ರಾಮದ ಕೀರ್ತಿ ನಿಜಲಿಂಗಪ್ಪ ಇಂಗಳಗುಂದಿ (17) ಹಾಗೂ ಬ್ಯಾಡಗಿ ತಾಲೂಕು ಕಾಟೇನಹಳ್ಳಿ ಗ್ರಾಮದ ಅಭಿಲಾಷಾ ಚಂದ್ರಪ್ಪ ಹಲಗೇರಿ (19) ಮೃತರು. 

ಅಯ್ಯೋ ವಿಧಿಯೇ..! ನೀರಲ್ಲಿ ಮುಳುಗಿ 4 ಪುಟ್ಟ ಕಂದಮ್ಮಗಳು ಸಾವು

ಮೃತರು ತಮ್ಮ ಸೋದರ ಮಾವನ ಜತೆ ಕಾರು ತೊಳೆಯಲು ನದಿ ಬಳಿ ತೆರಳಿದಾಗ ಈ ಘಟನೆ ಜರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.