Asianet Suvarna News Asianet Suvarna News

6 ನೇ ತರಗತಿ ಮಗಳು ಓದುತ್ತಿಲ್ಲವೆಂದು ಥಳಿಸಿ ಕೊಂದೇ ಬಿಟ್ಟ ತಾಯಿ!

ಪಶ್ಚಿಮ ಬಂಗಾಳದ ಹೌರಾದ ಲಿಲುವಾ ನಗರದಲ್ಲಿ  ಆಘಾತಕಾರಿ  ಘಟನೆಯೊಂದು ನಡೆದಿದ್ದು ಓದುವ ವಿಚಾರಕ್ಕೆ 6 ನೇ ತರಗತಿಯ ಬಾಲಕಿಯೊಬ್ಬಳು ತನ್ನ ತಾಯಿಯಿಂದಲೇ ಸಾವನ್ನಪ್ಪಿದ್ದಾಳೆ.  

Girl  Class 6 Student Dies In west Bengal After Mother Beats Her Over Studies gow
Author
First Published Feb 25, 2024, 4:11 PM IST | Last Updated Feb 25, 2024, 4:11 PM IST

ಕೊಲ್ಕತ್ತಾ(ಫೆ.25): ಪಶ್ಚಿಮ ಬಂಗಾಳದ ಹೌರಾದ ಲಿಲುವಾ ನಗರದಲ್ಲಿ  ಆಘಾತಕಾರಿ  ಘಟನೆಯೊಂದು ನಡೆದಿದ್ದು ಓದುವ ವಿಚಾರಕ್ಕೆ 6 ನೇ ತರಗತಿಯ ಬಾಲಕಿಯೊಬ್ಬಳು ತನ್ನ ತಾಯಿಯಿಂದಲೇ ಸಾವನ್ನಪ್ಪಿದ್ದಾಳೆ.  ಬಾಲಕಿ ಸಾವನ್ನಪ್ಪಿದ ದಿನ ತಾಯಿ-ಮಗಳ ನಡುವೆ ಜಗಳ ನಡೆದಿತ್ತು ಎಂದು ನೆರೆಹೊರೆಯವರು ತಿಳಿಸಿದ್ದಾರೆ. 

ನೆರೆಹೊರೆಯವರ ಪ್ರಕಾರ, ಬಾಲಕಿ ಸಾವನ್ನಪ್ಪಿದ ದಿನ ಮನೆಯಲ್ಲಿ ದೊಡ್ಡದಾಗಿ  ಶಬ್ದ ಕೇಳಿಸಿತು. ಹುಡುಗಿಯ ಹೆಸರು ಅನನ್ಯಾ ಶ್ರೀಸಂ ಎಂದು ತಿಳಿದುಬಂದಿದ್ದು, ತಾಯಿ ಥಳಿಸುತ್ತಿದ್ದಾಗ ಆಕೆ ಸಹಾಯಕ್ಕಾಗಿ ಗೋಗರೆಯುತ್ತಿದ್ದಳು.

ಆಕೆಯ ತಂದೆ ರೈಲ್ವೇಯಲ್ಲಿ ಕೆಲಸ ಮಾಡುತ್ತಿದ್ದು, ಮನೆಯಲ್ಲಿ ಈ ಘಟನೆ ನಡೆದಾಗ ಅವರು ಇರಲಿಲ್ಲ. ಕಿರುಚಾಟ ಕೇಳಿ ನೆರೆಹೊರೆಯವರು ಬಾಲಕಿಯ ಸಹಾಯಕ್ಕೆ ಧಾವಿಸಿದರು.  ಆ ವೇಳೆಗಾಗಲೇ ಅನನ್ಯಾ ತನ್ನ ತಾಯಿಯ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ.   ತಕ್ಷಣ ಅವಳನ್ನು ಲಿಲುವಾ ರೈಲ್ ಆಸ್ಪತ್ರೆಗೆ ಕರೆದೊಯ್ದರು. ಆದರೆ ದುರದೃಷ್ಟವಶಾತ್ ಅವಳು ಬದುಕಲಿಲ್ಲ. ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು. 

ಘಟನೆ ಸಂಬಂಧ ಪೊಲೀಸರು ಸಂಪೂರ್ಣ ತನಿಖೆ ಆರಂಭಿಸಿದ್ದಾರೆ.  ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಮುಂದಿನ ತನಿಖೆಗಾಗಿ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಅವರು ಈಗಾಗಲೇ ನೆರೆಹೊರೆಯವರು ಮತ್ತು ಹುಡುಗಿಯ ತಾಯಿಯನ್ನು ವಿಚಾರಣೆಗೊಳಪಡಿಸಿದ್ದಾರೆ.

ಅಕ್ಕಪಕ್ಕದ ಮನೆಯವರೊಬ್ಬರು ಹೇಳುವ ಪ್ರಕಾರ, ಅನನ್ಯಾಳ ತಾಯಿ ಓದುವ ಕಡೆ ಮಗಳು ಗಮನ ಕೊಡುತ್ತಿಲ್ಲ ಎಂದು ಬೆಳಗ್ಗೆಯಿಂದ ಆಕೆಯನ್ನು ಗದರಿಸುತ್ತಿದ್ದರು. ಅಮ್ಮ ಅದಕ್ಕಾಗಿ ಹೊಡೆದಾಗ ಬಾಲಕಿ ಏರು ಧ್ವನಿಯಲ್ಲಿ ಮಾತನಾಡಿದಳು. ಮತ್ತು ಕಿರುಚಿಕೊಂಡಳು ಈ ವೇಳೆ ಅವಳ ಸಹಾಯಕ್ಕೆ ನೆರೆಹೊರೆಯವರು ಧಾವಿಸಿದರು. ಬಳಿಕ  ನೆಲದ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಹುಡುಗಿಯನ್ನು ಕಂಡು ಆಸ್ಪತ್ರೆಗೆ ಕರೆದುಕೊಂಡು ಹೋದರು. 

ತಾಯಿಯ ವಿರುದ್ಧ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾವುದೇ ಬಂಧನವಾಗಿಲ್ಲ, ಆದರೆ ಎಲ್ಲಾ ಸಾಧ್ಯತೆಗಳಲ್ಲಿ ತಾಯಿಯನ್ನು ಬಂಧಿಸುವ ಪ್ರಕ್ರಿಯೆ ಹೆಚ್ಚಿದೆ.

Latest Videos
Follow Us:
Download App:
  • android
  • ios