Asianet Suvarna News Asianet Suvarna News

ಉಡುಪಿ ಜೈಲಿನಲ್ಲಿ ಗರುಡ ಗ್ಯಾಂಗ್‌ ಆರೋಪಿಗಳಿಂದ ದಾಂಧಲೆ

ವಿಚಾರಣಾ ಕೈದಿಗಳಾದ ಮುಹಮ್ಮದ್ ಆಶಿಕ್ ಮತ್ತು ಮಹಮ್ಮದ್ ಸಕ್ಲೀನ್, ಪ್ರಿಸನರ್ಸ್ ಕಾಲ್ ಸಿಸ್ಟಂ ಕರೆ ಮಾಡಲು ತಡವಾಯಿತೆಂದು ಹೇಳಿ ಕರ್ತವ್ಯದಲ್ಲಿದ್ದ ಜೈಲ‌ರ್ ಎಸ್‌.ಎ. ಶಿರೋಳ ಅವರ ಜೊತೆ ಜಗಳ ತೆಗೆದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿ ಜೋರಾಗಿ ಕೂಗಾಡಿದ್ದಾರೆ. 

Garuda Gang Accused Attempted Assault on Jail Staff in Udupi grg
Author
First Published Jun 26, 2024, 12:15 PM IST

ಹಿರಿಯಡ್ಕ(ಜೂ.26): ಉಡುಪಿಯಲ್ಲಿ ಇತ್ತೀಚೆಗೆ ನಡೆದಿದ್ದ ಗರುಡ ಗ್ಯಾಂಗ್ ವಾರ್ ಪ್ರಕರಣದ ಆರೋಪಿಗಳಿಬ್ಬರು ಹಿರಿಯಡ್ಕ ಜಿಲ್ಲಾ ಕಾರಾಗೃಹದಲ್ಲಿ ದಾಂಧಲೆ ನಡೆಸಿ, ಜಿಲ್ಲಾ ಅಧೀಕ್ಷಕರು ಮತ್ತು ಸಿಬ್ಬಂದಿಯ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಸಂಭವಿಸಿದೆ. 

ವಿಚಾರಣಾ ಕೈದಿಗಳಾದ ಮುಹಮ್ಮದ್ ಆಶಿಕ್ ಮತ್ತು ಮಹಮ್ಮದ್ ಸಕ್ಲೀನ್, ಪ್ರಿಸನರ್ಸ್ ಕಾಲ್ ಸಿಸ್ಟಂ ಕರೆ ಮಾಡಲು ತಡವಾಯಿತೆಂದು ಹೇಳಿ ಕರ್ತವ್ಯದಲ್ಲಿದ್ದ ಜೈಲ‌ರ್ ಎಸ್‌.ಎ. ಶಿರೋಳ ಅವರ ಜೊತೆ ಜಗಳ ತೆಗೆದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿ ಜೋರಾಗಿ ಕೂಗಾಡಿದ್ದಾರೆ. 

ಹಲ್ಲೆಯಾಗುವ ಭೀತಿ: ತುಮಕೂರಿಗೆ ದರ್ಶನ್ ಸಹಚರರ ಶಿಫ್ಟ್‌ಗೆ ಪೊಲೀಸರ ಮನವಿ

ಅಲ್ಲದೆ ಅಧೀಕ್ಷಕರ ಕಚೇರಿಯಿಂದ ಕರೆದುಕೊಂಡು ಹೋಗುವಾಗ ಸಿಬ್ಬಂದಿಯೊಂದಿಗೆ ಮತ್ತೆ ಗಲಾಟೆ ಅರಂಭಿಸಿ ಸಿಬ್ಬಂದಿಯನ್ನು ತಳ್ಳಿ ಕೊಠಡಿಯಲ್ಲಿದ್ದ ಬೆಂಕಿ ನಂದಿಸುವ ಯಂತ್ರವನ್ನು ತೆಗೆದು ಹೊಡೆಯಲು ಪ್ರಯತ್ನಿಸಿದ್ದಾರೆ. ಬಳಿಕ ಅಡುಗೆ ಕೋಣೆಯಲ್ಲಿರುವ ದೊಡ್ಡ ಸೌಟು ಮತ್ತು ಮರದ ಕುರ್ಚಿಯನ್ನು ತೆಗೆದುಕೊಂಡು ಸಿಬ್ಬಂದಿಗೆ ಹಲ್ಲೆ ಮಾಡಲು ಪ್ರಯತ್ನಿಸಿದ್ದಾರೆ. ಈ ಸಂಬಂಧ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios