Asianet Suvarna News Asianet Suvarna News

ಬೆಂಗಳೂರಿನಲ್ಲಿ ಹೆಣಗಳಿಗೂ ಮತ್ತು ಬರಿಸೋ ಗಾಂಜಾ ತೋಟವಿದು!

ಬೆಂಗಳೂರಿನ ಯಲಹಂಕದ ಅಟ್ಟೂರು ಸ್ಮಶಾನದಲ್ಲಿ ಗಾಂಜಾ ಬೆಳೆದಿರುವುದು ಪೊಲೀಸರಿಗೆ ಪತ್ತೆಯಾಗಿದೆ. ಈ ಕೃತ್ಯದ ಹಿಂದೆ ಮಾದಕ ವ್ಯಸನಿಗಳ ಕೈವಾಡ ಇದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ganja farming in burial ground at Yelahanka new town Bengaluru sat
Author
First Published Aug 21, 2024, 1:39 PM IST | Last Updated Aug 21, 2024, 4:20 PM IST

ಬೆಂಗಳೂರು (ಆ.21): ಸಿಲಿಕಾನ್ ಸಿಟಿ, ಐಟಿ ಸಿಟಿ, ಉದ್ಯಾನ ನಗರಿ ಬೆಂಗಳೂರನಲ್ಲಿ ರಾಗಿ ಬೆಲೆಯೊಲ್ಲ, ಭತ್ತ ಬೆಳೆಯೊಲ್ಲ. ಆದ್ರೆ, ಗಾಂಜಾ ಬೆಳೆಯೋಕೆ ಮಾತ್ರ ಫೇಮಸ್ ಆಗುತ್ತಿದೆ. ಇನ್ನು ಗಾಂಜಾ ಮತ್ತು ಡ್ರಗ್ಸ್ ಮಾಫಿಯಾದ ಬಗ್ಗೆ ಸಿನಿಮಾ ಕುರಿತಾದ ಜಾಗೃತಿ ಮೂಡಿಸಲು ನಿರ್ಮಿಸಲಾದ ಭೀಮ ಸಿನಿಮಾದ ನಿರ್ದೇಶಕರಿಗೂ ಸುಳಿವು ಸಿಗದ ಗಾಂಜಾ ಕೃಷಿ ತೋಟ ಇಲ್ಲಿದೆ ನೋಡಿ.. ಇದು ಮಸಣದಲ್ಲಿರುವ ಹೆಣಗಳಿಗೂ ಮತ್ತು ಬರಿಸುವ ತೋಟವಾಗಿದೆ.

ಬೆಂಗಳೂರಿನ ವೈಟ್‌ ಫೀಲ್ಡ್ ಐಟಿ ಕಂಪನಿಗಳಿಗೆ ಫೇಮಸ್ ಆದರೆ, ಯಲಹಂಕದ ಅಟ್ಟೂರು ಸ್ಮಶಾನ ಗಾಂಜಾ ಬೆಳೆಯಲು ಫೇಮಸ್ ಆಗುತ್ತಿದೆ. ಕೆಲವರು ಸ್ಮಶಾನದಲ್ಲಿ ಗಾಂಜಾಕೃಷಿ ಆರಂಭಿಸಿದ್ದಾರೆ. ಸ್ಮಾಶನದ ಮೂಲೆ ಮೂಲೆಗಳಲ್ಲಿ ಮಳೆಗಾಲದಲ್ಲಿ ಗಾಂಜಾ ಗಿಡಗಳು ಹುಲುಸಾಗಿ ಬೆಳೆದು ನಿಂತಿವೆ. ಈ ಗಾಂಜಾ ಬೆಳೆ ನೋಡಿದ ಪೊಲೀಸರು ಶಾಕ್ ಆಗಿದ್ದಾರೆ. ಮಸಣದಲ್ಲಿ ಗಾಂಜಾ ಕೃಷಿಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ದೇಶದಲ್ಲಿ ಗಾಂಜಾವನ್ನು ಮಾದಕ ವ್ಯಸನ ಪಟ್ಟಿಗೆ ಸೇರಿಸಲಾಗಿದ್ದು, ಇದನ್ನು ಖರೀದಿ ಮಾಡುವುದು, ಸರಬರಾಜು ಮಾಡುವುದು ಹಾಗೂ ಬೆಳೆಯುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಬೆಂಗಳೂರಿನಲ್ಲಿ ಜನಸಂಚಾರ ಇಲ್ಲದ ಸ್ಮಶಾನದ ಮೂಲೆಗಳಲ್ಲಿ ಗಾಂಜಾ ಬೆಳೆಯಲಾಗುತ್ತಿದೆ.

ಸರ್ಕಾರಿ ಅಧಿಕಾರಿಗೆ 2.32 ಕೋಟಿ ರೂ. ದಂಡ, 5 ವರ್ಷ ಜೈಲು ಶಿಕ್ಷೆ

ನಟ ದುನಿಯಾ ವಿಜಯ್ ನಟನೆಯ ಭೀಮ ಸಿನಿಮಾದಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಗಾಂಜಾ ಮತ್ತು ಡ್ರಗ್ಸ್ ಮಾಫಿಯಾದ ಬಗ್ಗೆ ಅತ್ಯಂತ ಹೆಚ್ಚಿನ ಮಾಹಿತಿ ತೋರಿಸಿದ್ದಾರೆ. ಎಲ್ಲೆಲ್ಲಿ ಡ್ರಗ್ಸ್ ಚಟುವಟಿಕೆ ನಡೆಯುತ್ತಿದೆ, ಯಾವ ವಯಸ್ಸಿನವರು ಡ್ರಗ್ಸ್ ಮಾಫಿಯಾಗೆ ಸಿಲುಕಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯನ್ನು ತೋರಿಸಲಾಗಿದೆ. ಇನ್ನು ಸ್ಮಶಾನದಲ್ಲಿ ಡ್ರಗ್ ಮಾಫಿಯಾ ದಂಧೆ ನಡೆಸುವ ಬಗ್ಗೆಯೂ ಭೀಮ ಸಿನಿಮಾದಲ್ಲಿ ತೋರಿಸಲಾಗಿದೆ. ಆದರೆ, ಭೀಮ ಸಿನಿಮಾದಲ್ಲಿ ತೋರಿಸಲಾಗದ ಮತ್ತೊಂದು ಭಯಂಕರ ಐಡಿಯಾ ಮಾಡಿ ಸ್ಮಶಾನದಲ್ಲಿಯೇ ಗಾಂಜಾ ಬೆಳೆಯಲು ಆರಂಭಿಸಿದ್ದಾರೆ.

ಇನ್ನು ಗಾಂಜಾ ಪೆಡ್ಲಿಂಗ್ ಕಷ್ಟವೆಂದು ಮಾದಕ ವ್ಯಸನಿಗಳು ಸ್ಮ‍ಶಾನದಲ್ಲಿ ಗಾಂಜಾ ಕೃಷಿ ಮಾಡುತ್ತಿದ್ದಾರಾ.? ಎಂಬ ಅನುಮಾನ ಪೊಲೀಸರಿಗೆ ವ್ಯಕ್ತವಾಗಿದೆ. ಯಲಹಂಕದ ಅಟ್ಟೂರು ಸ್ಮಶಾನದಲ್ಲಿ ಗಾಂಜಾ ಕೃಷಿ ಮಾಡುತ್ತಿರುವುದು ಪೊಲೀಸರಿಗೆ ಕಂಡುಬಂದಿದೆ. ಸ್ಮಶಾಣದಲ್ಲಿ ಫಲವತ್ತಾಗಿ ಬೆಳೆದಿರೊ ಗಾಂಜಾ ಗಿಡಗಳನ್ನ ನೋಡಿದ್ರೆ ವ್ಯಸನಿಗಳ ಅಡ್ಡೆ ಅನ್ನೋದು ಖಚಿತವಾಗುತ್ತದೆ. ಸ್ಮಶಾಣದ ಅಲ್ಲಲ್ಲಿ ಬೆಳದು ನಿಂತಿರೊ ಗಾಂಜಾ ಗಿಡಗಳು ಹೇಗೆ ಬೆಳೆದಿವೆ ಎನ್ನುವುದು ಪೊಲೀಸರಿಗೆ ಯಕ್ಷ ಪ್ರಶ್ನೆಯಾಗಿದೆ. ಮಾದಕ ವ್ಯಸನಿಗಳು ಗಾಂಜಾ ಸೇದುವಾಗ ಬೀಜಗಳು ಉದುರಿ ಗಿಡಗಳು ಹುಟ್ಟಿದ್ದಾವೆಯೋ..? ಅಥವಾ ಸ್ಮಶಾನಕ್ಕೆ ಯಾರು ಬರೊಲ್ಲವೆಂದು ವ್ಯಸನಿಗಳು ಗಾಂಜಾ ಗಿಡ ಬೆಳೆಯಲು ಮುಂದಾಗಿದ್ದಾರೋ ಗೊತ್ತಿಲ್ಲ. ಆದರೆ, ಇಲ್ಲಿ ಬೆಳೆದ ಗಾಂಜಾ ಗಿಡಿಗಳು ಲಕ್ಷಾಂತರ ರೂ. ಮೌಲ್ಯಕ್ಕಿಂತ ಹೆಚ್ಚು ಬೆಲೆ ಬಾಳುತ್ತವೆ ಎಂಬುದು ಪೊಲೀಸರ ಮಾಹಿತಿ ಆಗಿದೆ. ಇನ್ನು ಯಲಹಂಕ ನ್ಯೂ ಟೌನ್  ಪೊಲೀಸರಿಂದ ಪರಿಶೀಲನೆ ಮಾಡಲಾಗಿದೆ.

ನನ್ನ ಲೈಫ್ ನನ್ನಿಷ್ಟ, ನಾನು ಬೆಂಗಳೂರು ಪಾರ್ಟಿಗೆ ಹೋಗಿದ್ದೆ ಏನಿವಾಗ? ನಟಿ ಹೇಮಾ

ಯಲಹಂಕ ಉಪನಗರದ ಅಟ್ಟೂರು ಬಡಾವಣೆಯಲ್ಲಿರುವ ಹಳೇ ಸ್ಮಶಾನದಲ್ಲಿ ಗಾಂಜಾ ಗಿಡ ಬೆಳೆದಿರೊದು ಕಂಡು ಬಂದಿದೆ. ಗಿಡಗಳ ಪರಿಶೀಲನೆ ಮಾಡಿ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎನ್ ಡಿ ಪಿಎಸ್ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಕಲೆವರು ಗಾಂಜಾ ವ್ಯಸನಿಗಳು ಇದನ್ನು ಬಿಸಾಡಿದಾಗ ಬೆಳದುಕೊಂಡಿರಬಹುದು. ಅಥವ ಗಾಂಜಾ ಬೆಳಸುವ ಉದ್ದೇಶವೂ ಆಗಿರಬಹುದು. ಇವೆಲ್ಲದರ ಬಗ್ಗೆ ತನಿಖೆ ನಡೆಸಲಾಗುತ್ತದೆ. ಸ್ಮಶಾನ ಆಗಿರೊದ್ರಿಂದ ಜನ ಜಂಗುಳಿ ಇರೊಲ್ಲ. ಮೊದಲಿನಿಂದ ಆ ಜಾಗದ ಬಳಿ ಪೊಲೀಸ್ ಬೀಟ್ ಮಾಡಲಾಗಿದೆ‌. ಮುಂದಿನ ದಿನಗಳಲ್ಲಿ ಆ ಜಾಗದಲ್ಲಿ ಹೆಚ್ಚಿನ ಗಸ್ತು ಮಾಡಲಾಗುವುದು.
- ಸಜಿತ್ ವಿ.ಜೆ., ಡಿಸಿಪಿ ಈಶಾನ್ಯ ವಿಭಾಗ, ಬೆಂಗಳೂರು

Latest Videos
Follow Us:
Download App:
  • android
  • ios