* ಮಂಗಳೂರಿನ ಗ್ಯಾಂಗ್​ಸ್ಟರ್ ಸುರೇಶ್ ಪೂಜಾರಿ ಫಿಲಿಫೈನ್ಸ್‌ನಲ್ಲಿ ಬಂಧನ* ಫಿಲಿಫೈನ್ಸ್ ನಲ್ಲಿ  ಬಂಧಿಸಿದ ಇಂಟರ್ ಪೋಲ್‌ ಪೊಲೀಸರು* ಭೂಗತ ಪಾತಕಿಗಳಾದ ಚೋಟಾ ರಾಜನ್, ರವಿ ಪೂಜಾರಿ ಸಹಚರನಾಗಿದ್ದ ಸುರೇಶ್

ಬೆಂಗಳೂರು, (ಅ.19): ಭೂಗತ ಪಾತಕಿಗಳಾದ ಚೋಟಾ ರಾಜನ್, ರವಿ ಪೂಜಾರಿ (Ravi Poojari) ಸಹಚರನಾಗಿದ್ದ ಕುಖ್ಯಾತ ಗ್ಯಾಂಗ್​ಸ್ಟರ್ ಸುರೇಶ್ ಪೂಜಾರಿಯನ್ನು ಬಂಧಿನವಾಗಿದೆ.

ಫಿಲಿಫೈನ್ಸ್​​ನಲ್ಲಿ (Philippines) ಇಂಟರ್​ಪೋಲ್ ಪೊಲೀಸರು (Interpol Police) ಸುರೇಶ್ ಪೂಜಾರಿಯನ್ನು (Suresh Poojari) ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಮಂಗಳೂರು (Mangaluru) ಮೂಲದ ಡಾನ್ ಸುರೇಶ್ ಪೂಜಾರಿ, ಭೂಗತ ಪಾತಕಿ ಛೋಟಾ ರಾಜನ್, ರವಿ ಪೂಜಾರಿ ಸಹಚರನಾಗಿದ್ದ. ನಂತರ ತನ್ನದೇ ಗ್ಯಾಂಗ್ ಕಟ್ಟಿಕೊಂಡಿದ್ದ. ಬೆಂಗಳೂರಿನ ಕೆಲವು ಕೇಸ್​ಗಳಲ್ಲೂ ಸುರೇಶ್ ಪೂಜಾರಿ ಪ್ರಮುಖ ಆರೋಪಿಯಾಗಿದ್ದಾನೆ.

ಭೂಗತ ಪಾತಕಿ ರವಿ ಪೂಜಾರಿ ಖಾಕಿ ಖೆಡ್ಡಾಕ್ಕೆ ಬಿದ್ದ ರೋಚಕ ಕಥೆ!

ಕಳೆದ 10 ವರ್ಷದಿಂದ ರವಿ ಪೂಜಾರಿ ಗ್ಯಾಂಗ್​ನಿಂದ ಬೇರೆ ಆಗಿ, ಪ್ರತ್ಯೇಕ ಗ್ಯಾಂಗ್ ಮಾಡಿಕೊಂಡಿದ್ದ ಸುರೇಶ್ ಪೂಜಾರಿ, ಕಾಲ್ ಮಾಡಿ ಬೆದರಿಕೆ ಒಡ್ಡುತ್ತಿದ್ದ. ಈತನ ವಿರುದ್ಧ ಕರ್ನಾಟಕ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ದೂರುಗಳಿವೆ.

ಹಲವು ಎಫ್​ಐಆರ್​ಗಳು ದಾಖಲಾದ ನಂತರ ಭಾರತ ಬಿಟ್ಟು ಪಲಾಯನ ಮಾಡಿ, ವಿವಿಧ ದೇಶಗಳಲ್ಲಿ ತಲೆಮರಿಸಿಕೊಂಡಿದ್ದ. ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಆತನನ್ನು ಹಸ್ತಾಂತರ ಮಾಡುವ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.

 ಇನ್ನು ಮತ್ತೊಬ್ಬ ಕುಖ್ಯಾತ ಡಾನ್ ರವಿ ಪೂಜಾರಿ ಈಗಾಗಲೇ ವಶದಲ್ಲಿರುವುದನ್ನು ಇಲ್ಲಿ ಸ್ಮರಿಸಬಹುದು.